Oyorooms IN

Tuesday, 23rd May, 2017 12:21 AM

BREAKING NEWS

ಪ್ರಮುಖ ಸುದ್ದಿಗಳು

ನೌಕರರಿಗೆ 1260 ಕಾರು, 400 ಫ್ಲ್ಯಾಟ್ ಗಿಫ್ಟ್ ನೀಡಿದ ಉದ್ಯಮಿ

savji_dolkia

ಸೂರತ್: ಗುಜರಾತ್  ಸೂರತ್ ಮೂಲದ ವಜ್ರದ ವ್ಯಾಪಾರಿಯೊಬ್ಬರು ದೀಪಾವಳಿ ಕೊಡುಗೆಯಾಗಿ ತಮ್ಮ ನೌಕರರಿಗೆ  400 ಮನೆಗಳು ಹಾಗೂ 1.260 ಕಾರುಗಳನ್ನು ದೀಪಾವಳಿ ಬೋನಸ್ ರೂಪದಲ್ಲಿ ನೀಡಿದ್ದಾರೆ.

ಸೂರತ್ ನ ಸಾವ್ಜಿ ಧೋಲ್ಕಿಯಾ ತಮ್ಮ ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿರುವ 1716 ಉದ್ಯೋಗಿಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ 400 ನೌಕರರಿಗೆ ಮನೆಗಳು ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ನೀಡಿದ್ದು, ಕಡಿಮೆ ಮೊತ್ತದ ಕಂತನ್ನು ನೀಡುವ ಮೂಲಕ ಮನೆ ಹಾಗೂ ಕಾರು ಪಡೆಯುವ ಸೌಲಭ್ಯವನ್ನು ಒದಗಿಸಿದ್ದಾರೆ.

savji

ಪ್ರತಿವರ್ಷವೂ ತಮ್ಮ ನೌಕರರಿಗೆ ಕಾರು ಹಾಗೂ ಮನೆಗಳನ್ನು ಗಿಫ್ಟ್ ನೀಡುವ ಸಾಲ್ಜಿ ಧೋಲ್ಕಿಯಾ ಕಳೆದ ವರ್ಷ 51 ಕೋಟಿ ಖರ್ಚು ಮಾಡಿ ತಮ್ಮ ಉದ್ಯೋಗಿಗಳಿಗೆ 491 ಕಾರು ಹಾಗೂ 200 ಮನೆಗಳನ್ನು ಗಿಫ್ಟ್ ನೀಡಿದ್ದರು. ಬಡತನದಲ್ಲಿ ಹುಟ್ಟಿದ ಧೋಲ್ಕಿಯಾ ಅವರು ಸಾಲ ಮಾಡಿ ವ್ಯಾಪಾರವನ್ನು ಸ್ಥಾಪಿಸಿದವರು.

English summary:  Diamond merchant gifts cars houses to employees

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...