Oyorooms IN

Sunday, 26th March, 2017 10:18 PM

BREAKING NEWS

ಪ್ರಮುಖ ಸುದ್ದಿಗಳು

ಇಂದು ರಾತ್ರಿ 12.30ರಿಂದ 3.30ರವರೆಗೆ ಅಪ್ಪಿತಪ್ಪಿ ಫೋನ್ ಹತ್ತಿರವಿಟ್ಟುಕೊಳ್ಳಬೇಡಿ.!!

ಮಂಗಳ ಗ್ರಹದಿಂದ ವಿಕರಣಗಳು ಹೊರಹೊಮ್ಮುವುದರಿಂದ ಬುಧವಾರ ರಾತ್ರಿ 12.30ರಿಂದ 3.30ರವರೆಗೆ ಸೆಲ್ ಫೋನ್ ಗಳನ್ನು ತಲೆಯ ಹತ್ತಿರ ಇಟ್ಟುಕೊಳ್ಳದಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಜೋರಾಗಿ ನಡೆಯುತ್ತಿದೆ. ಅಂಗಾರಕ ಮಂಗಳದಿಂದ ಭೂಮಿಯ ಕಡೆ ಹೆಚ್ಚಾಗಿ ವಿಕರಣಗಳು ಹೊರಹೊಮ್ಮುವ ಅವಕಾಶವಿದ್ದು, ಮೊಬೈಲ್ ಗಳನ್ನು ದೂರವಿಟ್ಟುಕೊಳ್ಳುವಂತೆ ಸಂದೇಶಗಳು ಹರಿದಾಡುತ್ತಿವೆ.

ಈ ವಿಚಾರವನ್ನು ಷೇರ್ ಮಾಡಿ ಎಂದು ಸಂದೇಶಗಳು ಹರಿದಾಡುತ್ತಿದ್ದು, ಈ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಜ್ಞರು ಹೇಳುತ್ತಿದ್ದು, ಈ ವದಂತಿ ಜೋರಾಗಿ ಹಬ್ಬುತ್ತಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಸೆಲ್ ಫೋನ್ ಸ್ವಿಚ್ ಆಫ್ ಮಾಡಿ ಇಡುತ್ತಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ವದಂತಿ ಜೋರಾಗಿ ಇರುವುದರಿಂದ ಜನರು ಭಯಭೀತರಾಗಿದ್ದು, ಇಂತಹ ವದಂತಿಗಳನ್ನು ನಂಬದಂತೆ, ಇದರಲ್ಲಿ ವಾಸ್ತವತೆ ಇಲ್ಲ ಎಂದು ತಜ್ಞರು ಹೇಳುತ್ತಿದ್ದು, ಇಂತಹ ಸಂದೇಶವನ್ನು ಬೇಕಂತಲೇ ಯಾರೋ ಮಾಡುತ್ತಿದ್ದಾರೆ, ಇಂತಹ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

English summary:  don’t use cell phone midnight 12.30 to 3.30 pm

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...