Oyorooms IN

Wednesday, 25th January, 2017 6:49 AM

BREAKING NEWS

ಟಿವಿ ಸಂದರ್ಶನ

ಪುಟ್ಟಗೌರಿ ಮದುವೆ ಧಾರಾವಾಹಿ ಸಹನಟಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು..!!

RUTHU SAI_PUTTAGOWRI MADUVE

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಗೌರಿ ಮದುವೆ ಧಾರಾವಾಹಿಯ ಸಹನಟಿ ಋತು ಸಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾವಣಗೆರೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಋತು ಸಾಯಿ ಅತ್ತಿಗೆ ದೀಪಾಳಿಗೆ ತಂಗಿಯಂದಿರು ಹಾಗೂ ಅಣ್ಣನೊಂದಿಗೆ ಸೇರಿ ವರದಕ್ಷಿಣೆ ತರುವಂತೆ ಟಾರ್ಚರ್ ಮಾಡುತ್ತಿದ್ದರು ಎಂದು ಋತು@ ರಂಗಲಕ್ಷ್ಮೀ ಅತ್ತಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಋತು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ.

2009ರಲ್ಲಿ ಋತು ಅಣ್ಣ ಮಣಿಕಂಠನೊಂದಿಗೆ ದೀಪಾ ವಿವಾಹವಾಗಿದ್ದರಂತೆ, ಮದುವೆಯಾಗುವಾಗಲೇ ದೀಪಾ ಮನೆ ಕಡೆಯವರು ಸಾಕಷ್ಟು ವರಕಾಣಿಕೆ ನೀಡಿ, ಅದ್ದೂರಿಯಾಗಿಯೇ ಮದುವೆ ಮಾಡಿದ್ದರಂತೆ, ಮದುವೆಯಾಗಿ ಮೂರುವರ್ಷ ವಾದ್ಮೇಲೆ ಗಂಡನ ನೊಂದಿಗೆ ನಾದಿನಿಯರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅತ್ತಿಗೆ ದೀಪಾ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

 

English summary:  Dowry case filed against serial supporting actor Ruth sai in Davanagere.

ಟಿವಿ ಸಂದರ್ಶನ ಇನ್ನಷ್ಟು

ಪ್ರಮುಖ ಸುದ್ದಿಗಳು