Oyorooms IN

Thursday, 17th August, 2017 5:15 PM

BREAKING NEWS

ಅರೋಗ್ಯ

ಖಾಲಿ ಹೊಟ್ಟೆಗೆ ಒಣ ದ್ರಾಕ್ಷಿ ನೀರು ಸೇವನೆ ಸಾಲು ಸಾಲು ಆರೋಗ್ಯಕರ ಲಾಭ

dried-fruits

ದ್ರಾಕ್ಷಿಯನ್ನು ಒಣಗಿಸಿ ಕಿಸ್‌ಮಿಸ್‌ ಅಥವಾ ಒಣದ್ರಾಕ್ಷಿ ಮಾಡುತ್ತಾರೆ. ಇದರಲ್ಲಿ
ಐರನ್‌, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಮೆಗ್ನೇಶಿಯಂ ಮತ್ತು ಫೈಬರ್‌ ಪೂರ್ಣಪ್ರಮಾಣದಲ್ಲಿದೆ. ಆದುದರಿಂದ ಇದನ್ನು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾದ ಆಹಾರ ಎಂದು ಹೇಳಲಾಗುತ್ತದೆ. ಆದರೆ ಆಯುರ್ವೇದದ ಪ್ರಕಾರ ಪ್ರತಿದಿನ ಒಣದ್ರಾಕ್ಷಿ ಸೇವ ನೆ ಮಾಡುವುದಕ್ಕಿಂತ ಅದರ ನೀರು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ.

 ಏನೆಲ್ಲಾ ಆರೋಗ್ಯಕರ ಲಾಭಗಳಿವೆ ತಿಳಿಯಿರಿ…

ಕಿಡ್ನಿ : ನಾಲ್ಕು ದಿನ ನಿರಂತರವಾಗಿ ಒಣದ್ರಾಕ್ಷಿಯ ನೀರು ಸೇವನೆ ಮಾಡುತ್ತಾ ಬಂದರೆ
ಕಿಡ್ನಿಯು ಸಕ್ರಿಯವಾಗುತ್ತದೆ. ಇದು ಶರೀರದ ಟಾಕ್ಸಿನ್‌ನ್ನು ಹೊರ ತರುತ್ತದೆ ಅಲ್ಲದೇ
ಕಿಡ್ನಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಲಿವರ್‌ : ನಿಯಮಿತವಾಗಿ ಇದನ್ನು ಸೇವನೆ ಮಾಡುತ್ತಾ ಬಂದರೆ ಲಿವರ್‌ನಲ್ಲಿ ಸೇರಿರುವ
ಟಾಕ್ಸಿನ್ಸ್‌ ಹೊರಗೆ ಬರಲು ಸಹಾಯ ಮಾಡುತ್ತದೆ. ಇದರಿಂದ ಲಿವರ್‌ ಸಮಸ್ಯೆ
ನಿವಾರಣೆಯಾಗುತ್ತದೆ.

ಕಾಯಿಲೆಗಳಿಂದ ರಕ್ಷಣೆ : ಒಣದ್ರಾಕ್ಷಿಯ ನೀರು ಸೇವನೆ ಮಾಡಿದರೆ ದೇಹದಲ್ಲಿ ಇಮ್ಯೂನಿಟಿ
ಹೆಚ್ಚಾಗುತ್ತದೆ. ಇದರಿಂದ ಇನ್‌ಫೆಕ್ಷನ್‌ ಅಥವಾ ಇತರ ಕಾಯಿಲೆಗಳು ಉಂಟಾಗುವ ಭಯವೂ
ಇರುವುದಿಲ್ಲ.

dried-fruits-1

ಜೀರ್ಣಕ್ರಿಯೆ : ಇದನ್ನು ಸೇವನೆ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸಕ್ರಿಯವಾಗುತ್ತದೆ.
ಅಲ್ಲದೇ ಮಲಬದ್ಧತೆ, ಆಸಿಡಿಟಿ ಮತ್ತು ಗ್ಯಾಸ್‌ ಸಮಸ್ಯೆ ನಿವಾರಣೆಯಾಗುತ್ತದೆ.

ಆರೋಗ್ಯಕರ ತ್ವಚೆ : ಒಣದ್ರಾಕ್ಷಿಯ ನೀರು ಸೇವನೆ ಮಾಡಿದರೆ ರಕ್ತ ಕ್ಲೀನ್‌ ಆಗುತ್ತದೆ.
ಇದರಿಂದ ಪಿಂಪಲ್‌ ಆಗುವುದು ಕಡಿಮೆಯಾಗುತ್ತದೆ ಹಾಗೂ ಸ್ಕಿನ್‌ ಗ್ಲೋ ಆಗುತ್ತದೆ.

ಸ್ಕಿನ್‌ ಡಿಸೀಸ್‌ : ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಮತ್ತು ಆ್ಯಂಟಿಫಂಗಲ್‌
ಪ್ರಾಪರ್ಟಿ ಇರುತ್ತದೆ. ಇದನ್ನು ಪ್ರತಿ ದಿನ ಸೇವನೆ ಮಾಡಿದರೆ ರಾಶಸ್‌, ತುರಿಕೆ
ಮತ್ತು ಸ್ಕಿನ್‌ಗೆ ಸಂಬಂಧಿಸಿದ ಇತರ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಉಸಿರಾಟದ ದುರ್ಗಂಧ : ಪ್ರತಿ ದಿನ ಇದನ್ನು ಸೇವನೆ ಮಾಡುತ್ತಾ ಬಂದರೆ ಉಸಿರಾಟದ ಸಂದರ್ಭ
ಉಂಟಾಗುವ ವಾಸನೆ ದೂರವಾಗುತ್ತದೆ. ಅಲ್ಲದೇ ಓರಲ್‌ ಡಿಸೀಸ್‌ ಸಮಸ್ಯೆಯೂ ಇರುವುದಿಲ್ಲ.

ಆರೋಗ್ಯಕರ ಹೃದಯ : ಈ ನೀರು ಬ್ಲಡ್‌ ಕೊಲೆಸ್ಟ್ರಾಲ್‌ ಕಂಟ್ರೋಲ್‌ ಮಾಡುತ್ತದೆ.
ಇದನ್ನು ಸೇವನೆ ಮಾಡುವುದರಿಂದ ಹೃದಯ ಆರೋಗ್ಯಯುತವಾಗಿರುತ್ತದೆ.

ಕಣ್ಣಿನ ದೃಷ್ಟಿ : ಇದರಲ್ಲಿ ವಿಟಾಮಿನ್‌ ಎ ಮತ್ತು ಬೀಟಾಕ್ಯಾರೊಟಿನ್‌ ಹೆಚ್ಚಿನ
ಸಂಖ್ಯೆಯಲ್ಲಿದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗಲು ಸಹಾಯ ಮಾಡುತ್ತದೆ.

ತೂಕ ಹೆಚ್ಚಾಗುತ್ತದೆ : ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೈಟ್‌, ಗ್ಲೂಕೋಸ್‌
ಇದೆ. ಈ ನೀರಿನ ಸೇವನೆ ಮಾಡಿದರೆ ತೂಕ ಹೆಚ್ಚಾಗುತ್ತದೆ.

ಅರೋಗ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...