Oyorooms IN

Wednesday, 24th May, 2017 1:14 AM

BREAKING NEWS

ಚಿತ್ರದುರ್ಗ

ಬಸ್ಸುನ ಬ್ರೇಕ್‌ ಫೇಲ್‌ : ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಬಸ್ಸುನ ಬ್ರೇಕ್‌ ಫೇಲ್‌ : ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಚಿತ್ರದುರ್ಗ: ಕೆಎಸ್‍ಆರ್‍ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕುಂಚಿಗನಾಳ್ ಬಳಿ ದುರಂತ ತಪ್ಪಿದೆ.

ದಾವಣಗೆರೆ ವಿಭಾಗದ ಕೆಎ-17 ಎಫ್ 1373 ಸಂಖ್ಯೆಯ ಬಸ್ ಇದಾಗಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವೈಭವ ಬಸ್ ಏಕಾಏಕಿ ಬ್ರೇಕ್ ಫೇಲಾಗಿದೆ. ಇದನ್ನ ಅರಿತ ಬಸ್ ಚಾಲಕ ಮುಂಜಾಗೃತಾ ದೃಷ್ಟಿಯಿಂದ ಪಕ್ಕದ ಜಮೀನಿಗೆ ಬಸನ್ನ ತಿರುಗಿಸಿದ್ದಾರೆ.

. ಬಸ್ಸನ್ನು ಜಮೀನಿಗೆ ನುಗ್ಗಿಸಿ ವೇಗ ನಿಯಂತ್ರಿಸಿದ ಪರಿಣಾಮ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಗಾಯಗೊಂಡವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...