Oyorooms IN

Friday, 23rd June, 2017 12:29 PM

BREAKING NEWS

ತುಮಕೂರು

ಹೊಸ ವರ್ಷಕ್ಕೆ ಡ್ರಗ್ಸ್ ಪಾರ್ಟಿ: ಸಿಕ್ಕಿಬಿದ್ದ ಗ್ಯಾಂಗ್

ತುಮಕೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಸಂಗ್ರಹಿಸಿದ್ದ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಹಲವಾರು ವರ್ಷಗಳಿಂದ ನಗರದಲ್ಲಿ ಬೀಡು ಬಿಟ್ಟಿದ್ದ ಮಾದಕ ದ್ರವ್ಯದ ಜಾಲದ ಪ್ರಮುಖರನ್ನು ಡಿಸಿಬಿ ತಡರಾತ್ರಿ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ಬೆಂಗಳೂರು-ಹೊನ್ನಾವರ ರಸ್ತೆಯ ಗುಜರಿ ಅಂಗಡಿಯೊಂದರಲ್ಲಿ ಲಕ್ಷಾಂತರ ಮೌಲ್ಯದ ಬ್ರೌನ್ ಶುಗರ್ ಸಂಗ್ರಹಿಸಿದ್ದ ನಾಲ್ವರನ್ನು ಬಂಧಿಸಿ, 777 ಮಾರ್ಕ್ ನ ಬ್ರೌನ್ ಶುಗರ್ ನನ್ನು ವಶಕ್ಕೆ ಪಡೆದಿದ್ದಾರೆ. ಎಂಜನಿಯರಿಂಗ್, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಜಾಲ ಕಾರ್ಯಾಚರಣೆ ನಡೆಸುತ್ತಿತ್ತು ಎನ್ನಲಾಗಿದೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳೊಂದಿಗೆ ಈ ಜಾಲದ ಕೊಂಡಿ ಬೆಸೆದುಕೊಂಡಿದ್ದು, ಈ ಹಿಂದೆ ಒಂದೆರೆಡು ಬಾರಿ ಪೊಲೀಸರು ದಾಳಿ ನಡೆಸಿದ್ದರಾದರೂ ದಂಧೆಕೋರರು ಪೊಲೀಸರಿಗೆ ಸಿಕ್ಕಿರಲಿಲ್ಲ.

ಪೊಲೀಸ್ ಪೇದೆಯಿಂದ ಪತ್ತೆಯಾಯ್ತು ಜಾಲ: ಬ್ರೌನ್ ಶುಗರ್ ಅನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಅನುಮಾನವನ್ನು ಹೊಂದಿದ್ದ ಡಿಸಿಬಿ ಪೊಲೀಸ್ ಪೇದೆಯೊಬ್ಬರು ಹಲವು ದಿನಗಳಿಂದ ಈ ಗುಜರಿ ಅಂಗಡಿ ಚಲನವನದ ಮೇಲೆ ಕಣ್ಣಿಟ್ಟಿದ್ದು, ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾಗ ಮಾಲು ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary:  drug rocket busted in tumakuru

ತುಮಕೂರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...