Oyorooms IN

Saturday, 22nd July, 2017 4:26 PM

BREAKING NEWS

ಪ್ರಮುಖ ಸುದ್ದಿಗಳು

ಅಣ್ಣನ ಅಗಲಿಕೆ ತಡೆಯಲಾರದೇ ಕಲ್ಲಪ್ಪ ಹಂಡಿಭಾಗ್ ತಮ್ಮ ಆತ್ಮಹತ್ಯೆ

ಕಲ್ಲಪ್ಪ ಹಂಡಿಭಾಗ್ ಸಾಂದರ್ಭಿಕ ಚಿತ್ರ
ಕಲ್ಲಪ್ಪ ಹಂಡಿಭಾಗ್ ಸಾಂದರ್ಭಿಕ ಚಿತ್ರ

ಬೆಳಗಾವಿ: ಕ್ರಿಕೆಟ್ ಬೆಟ್ಟಿಂಗ್ ನಿಂದ ಹಣ ಪಡೆದ ಆರೋಪದಿಂದ ಆತ್ಮಹತ್ಯೆಗೆ ಶರಣಾಗಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ತಮ್ಮ ಪೊಲೀಸ್ ಪೇದೆ ಯಲ್ಲಪ್ಪ ಹಂಡಿಭಾಗ್, ಗೋಕಾಕ್ ತಾಲ್ಲೂಕಿನ ಕುಲಗೋಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಲಗೋಡ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಲ್ಲಪ್ಪ ಹಂಡಿಭಾಗ್, ಅಣ್ಣ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡ ನಂತರ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದ್ದು, ಅವಿವಾಹಿತರಾದ ಯಲ್ಲಪ್ಪ ಹಂಡಿಭಾಗ್, ಕುಲಗೋಡದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

yallappa_handibhag_

ಕೊಲೆ ಶಂಕೆ: ನನ್ನ ಮಗ ಆತ್ಮಹತ್ಯೆಗೆ ಒಳಗಾಗುವಷ್ಟು ಹೇಡಿ ಅಲ್ಲ, ಆತ ಆತ್ಮಹತ್ಯೆ ಮಾಡಿಕೊಂಡರು ಕುಟುಂಬಸ್ಥರು ಬರುವ ಮುಂಚೆಯೇ ಆತನ ಮೃತದೇಹವನ್ನು ಕೆಳಗೆ ಇಳಿಸಲಾಗಿದೆ, ಅಷ್ಟೇ ಅಲ್ಲದೇ ಆತನ ಮೈ ಮೇಲೆ ಗಾಯದ ಕಲೆಗಳಿವೆ ಎಂದು ಯಲ್ಲಪ್ಪ ಹಂಡಿಭಾಗ್ ತಂದೆ ಆರೋಪಿಸಿದ್ದು, ಮೃತದೇಹವನ್ನು ಪಡೆಯಲು ನಿರಾಕರಿಸಿ, ಪ್ರತಿಭಟಿಸಿದರು.

ಮನವೊಲಿಕೆ ನಂತರ ಯಲ್ಲಪ್ಪ ಹಂಡಿಭಾಗ್ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗಿದೆ, ಸ್ಥಳಕ್ಕೆ ಬೆಳಗಾವಿ ಡಿಜಿಪಿ, ಎಸ್ಪಿ ರವಿಕಾಂತೇಗೌಡ ಸೇರಿದಂತೆ ಇತರರು ಭೇಟಿ ನೀಡಿದ್ದರು.

English summary:  dysp kallappa brother commits suicide in belagavi

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...