Oyorooms IN

Saturday, 19th August, 2017 4:39 PM

BREAKING NEWS

ಕಲಬುರಗಿ

ಬಿಎಸ್ ವೈರನ್ನು ಸಿಎಂ ಮಾಡುವುದು ಬ್ರಿಗೇಡ್ ಉದ್ದೇಶವಲ್ಲ: ಈಶ್ವರಪ್ಪ ಟಾಂಗ್

ಕಲಬುರ್ಗಿ: ಬಿಜೆಪಿಯಲ್ಲಿ ತಲ್ಲಣವನ್ನುಂಟು ಮಾಡಿದ್ದ ಬಿಎಸ್ ವೈ ಈಶ್ವರಪ್ಪ ಜಂಗೀ ಕುಸ್ತಿ ಈಗ ಮತ್ತಷ್ಟು ಹೆಚ್ಚಾಗಲಿದ್ದು, ಇಬ್ಬರು ನಾಯಕರ ನಡುವಿನ ಕೋಲ್ಡ್ ವಾರ್ ಗೆ ಸ್ಪಷ್ಟ ಚಿತ್ರಸಿಕ್ಕಂತಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತಿರುಗಿಬಿದ್ದಿದ್ದಾರೆ.

ಬಿಎಸ್ ವೈ ಅವರನ್ನು ಮುಖ್ಯಮಂತ್ರಿ ಮಾಡುವುದು ರಾಯಣ್ಣ ಬ್ರಿಗೇಡ್ ಉದ್ದೇಶವೆಂದು ಹೇಳಿಕೊಂಡು ಬಂದಿದ್ದ ಈಶ್ವರಪ್ಪ ಈಗ ಉಲ್ಟಾ ಹೊಡೆದಿದ್ದು, ಯಡಿಯೂರಪ್ಪ ಅವರನ್ನೇ ದೂಷಿಸಿದ್ದು, ಜನರೇ ತಮ್ಮನ್ನು ಸಿಎಂ ಎಂದು ಬಿಎಸ್ ವೈ ಹೇಳಿದ್ದು, ಯಾವುದೇ ಬ್ರಿಗೇಡ್ ಅಗತ್ಯವಿಲ್ಲವೆಂದು ಹೇಳಿದ್ದರಿಂದ ಸಂಘಟನೆಯ ಉದ್ದೇಶವನ್ನು ಬದಲಿಸಿಕೊಳ್ಳಬೇಕಾಯಿತಿ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ರಾಯಣ್ಣ ಬ್ರಿಗೇಡ್ ಗೆ ಬೆಂಬಲ ನೀಡಿರುವ ಮಠಾಧೀಶರು, ಸಂಘಟನೆಯನ್ನು ಬಿಜೆಪಿಗೆ ಸೀಮಿತಗೊಳಿಸಿರುವುದನ್ನು ವಿರೋಧಿಸಿದ್ದು, ಎಲ್ಲಾ ಪಕ್ಷಗಳಲ್ಲಿಯೂ ಮಠದ ಪರ ಭಕ್ತರು ಇರುವುದರಿಂದ ರಾಯಣ್ಣ ಬ್ರಿಗೇಡ್ ಅನ್ನು ರಾಜಕೀಯ ಸಂಘಟನೆಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಠದವರು ಹೇಳುತ್ತಿದ್ದಾರೆ, ಹೀಗಾಗಿ ನಾವು ಮಠಗಳು ತೋರಿದ ದಾರಿ ಹಿಡಿದಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

English summary: eshwarappa –bsy cold war expose once again

ಕಲಬುರಗಿ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...