Oyorooms IN

Wednesday, 29th March, 2017 10:59 AM

BREAKING NEWS

ಧಾರವಾಡ

ಎಚ್ ಡಿ ಕುಮಾರಸ್ವಾಮಿಗೆ ಭೂ ಕಂಟಕ, 200 ಎಕರೆ ಭೂಕಬಳಿಕೆ ಆರೋಪ

sr-hiremat

ಹುಬ್ಬಳ್ಳಿ: ರಾಮನಗರ ಜಿಲ್ಲೆಯಲ್ಲಿ 200 ಎಕರೆ ಸರ್ಕಾರಿ ಭೂಕಬಳಿಕೆಯಾಗಿದ್ದು, ಇದರಲ್ಲಿ 100 ಎಕರೆ ಗೋಮಾಳವನ್ನು ಎಚ್ ಡಿಕೆ  ಹಾಗೂ ಹತ್ತಿರದ ಸಂಬಂಧಿ ಮದ್ದೂರು ಶಾಸಕ ಬಿ.ಸಿ.ತಮ್ಮಣ ಕಬಳಿಸಿದ್ದಾರೆ ಸಮಾಜ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಮತ್ತೆ ಆರೋಪ ಮಾಡಿದ್ದು, ಬಿಡದಿ ಹೋಬಳಿಯ ಕಾಡಗೇನಹಳ್ಳಿಯಲ್ಲಿ ಸುಮಾರು 200 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ಸಹಾಯ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ಸರ್ಕಾರಿ ಭೂಮಿ ಕಬಳಿಕೆ ಆಗಿರುವ ಬಗ್ಗೆ ಜಿ.ಮಾದೇಗೌಡ 2013ರಲ್ಲಿ ದಾಖಲೆ ಸಮೇತ ಜಿಲ್ಲಾಧಿಕಾರಿಗಳು ಹಾಗು ತಹಶೀಲ್ದಾರರಿಗೆ ದೂರು ನೀಡಲಾಗಿತ್ತ. ರಾಮನಗರ ಉಪವಿಭಾಗಧಿಕಾರಿಯು ಈ ಭೂಕಬಳಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿಯನ್ನು ಎಸ್ ಆರ್ ಹಿರೇಮಠ  ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

English summary:  ex cm hd kumar swamy involve 200 acres govt land grab

ಧಾರವಾಡ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...