Oyorooms IN

Saturday, 24th June, 2017 7:18 AM

BREAKING NEWS

ಪ್ರಮುಖ ಸುದ್ದಿಗಳು

ತಬ್ಬಿಕೊಳ್ಳಿ ಎಂದು ಬಾಲಕಿಯರ ಹಿಂದೆ ಬಿದ್ದವನು ಕಂಬಿ ಹಿಂದೆ ಹೋದ

ಬೆಂಗಳೂರು: ನನ್ನನ್ನು ತಬ್ಬಿಕೊಳ್ತೀರಾ, ಮುತ್ತುಕೊಡ್ತೀರಾ ಎಂದು ಸಂಜೆ ವೇಳೆ ಮಹಿಳೆಯರಿಗೆ ಹಾಗೂ ಶಾಲಾ ಬಾಲಕಿಯರ ಹಿಂದೆ ಬೀಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಕಂಬಿಯ ಹಿಂದೆ ಕಳುಹಿಸಿದ್ದಾರೆ.  ಮಹಾಲಕ್ಷ್ಮೀ ಲೇಔಟ್ ನ ಮಣಿಕಂಠ ಬಂಧಿತ ಆರೋಪಿ.

ಸಂಜೆಯ ವೇಳೆಯಲ್ಲಿ ಬರುತ್ತಿದ್ದ ಶಾಲಾ ಬಾಲಕಿಯರು ಹಾಗೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ, ಅವರನ್ನು ತಬ್ಬಿಕೊಳ್ಳಿ, ಮುತ್ತುಕೊಡಿ ಎಂದು ಬೆನ್ನತ್ತಿ ಮಣಿಕಂಠ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಬಾಲಕಿಯ ಪೋಷಕರು ವೈಯಾಲಿ ಕಾವಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಮಣಿಕಂಠನನ್ನು ದೂರು ನೀಡಿದ ಮೂರು ಗಂಟೆಯೊಳಗೆ ಬೆಂಗಳೂರು ಪೊಲೀಸರು ಮಣಿಕಂಠನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಚಂದ್ರಗುಪ್ತಾ ತಿಳಿಸಿದ್ದಾರೆ. ಹೊಸ ವರ್ಷದ ಆರಂಭದಿಂದಲೂ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸಾರ್ವಜನಿಕ ನಿದ್ದೆಗೆಡಿಸಿದೆ.

English summary:  excuse me, please kiss sexual harass youth arrested in bengaluru

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...