Oyorooms IN

Friday, 23rd June, 2017 12:29 PM

BREAKING NEWS

ಚಿಕ್ಕಮಗಳೂರು

ಚಿಕ್ಕಮಗಳೂರಿನಲ್ಲಿ ಹರಿದಾಡುತ್ತಿವೆ ನಕಲಿ 2000 ನೋಟುಗಳು?

fake-note-2000

ಚಿಕ್ಕಮಗಳೂರು:  500, 1000 ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿ, ಬಿಡುಗಡೆಗೊಳಿಸಿದ್ದ 2000 ನೋಟುಗಳು ಜನರ ಕೈಗೆ ಬರುವ ಮುಂಚೆಯೇ ನಕಲಿ ನೋಟುಗಳು ಚಿಕ್ಕಮಗಳೂರಿನಲ್ಲಿ ಹರಿದಾಡುತ್ತಿವೆ.

ನ್ಯಾನೋ ಟೆಕ್ನಾಲಜಿ ಬಳಸಲಾಗಿರುವ 2000 ನೋಟುಗಳು ಚಿಕ್ಕಮಗಳೂರು ಎಪಿಎಂಪಿ ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿವೆ ಎನ್ನಲಾಗಿದ್ದು, ಮಾರುಕಟ್ಟೆ ಬಂದ ಅಪರಿಚಿತರು ಹೊಸ ನೋಟುಗಳನ್ನು ನೀಡಿ, ಚಿಲ್ಲರೆ ಪಡೆದುಕೊಂಡಿದ್ದು, ಅಪರಿಚಿತರು ನೀಡಿದ ನೋಟುಗಳು ನಕಲಿ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಅಸಲಿ ನೋಟಿನ ತಲೆಗೆ ಹೊಡೆದಂತೆ ಕಲರ್ ಜೆರಾಕ್ಸ್ ಮಾಡಿಸಲಾಗಿದ್ದು, ಕಪ್ಪು ಹಣ ತಡೆಗೆ ಹೊಸ ನೋಟುಗಳು ಬಂದ 4 ದಿನದಲ್ಲಿಯೇ ಖೋಟಾನೋಟುಗಳು ಹೊರಬಂದಿರುವುದು ಎಲ್ಲರನ್ನು ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. ಖೋಟು ನೋಟಿನ ಸಂಬಂಧ ಚಿಕ್ಕಮಗಳೂರಿನ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary:  fake 2000 notes found in chikkamagaluru

ಚಿಕ್ಕಮಗಳೂರು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...