Oyorooms IN

Wednesday, 24th May, 2017 8:03 AM

BREAKING NEWS

ಕವನ

ಹೋಗಿ-ಬರಲೇ -ಹೃದಯ”

haret

ನಿನ್ನ ಹೃದಯಾ ಹೇಳುತ್ತಿದೆ
ನೀ ಬೇಡವೆಂದು

ನನ್ನ ಹೃದಯಾ ಕೇಳುತ್ತಿದೆ
ನಾ ಬೇಡಿದೆ ಅಂದು

ಎಂದೋ ಹುಟ್ಟಿದ
ಮನಸ್ಸಿನ ಕಲರವಕ್ಕೆ
ಇಂದು ಬೆಂದು ಸುಟ್ಟಿದೆ
ಹಳೆಯ ಪುಟಗಳಂತೆ
ನಿನ್ನ ನೆನಪುಗಳು.

ಕಣ್ಣಿದ್ದು ಕಾಣದಂತೆ ಸೋತಿದೆ
ಪ್ರೀತಿಯ ವ್ಯಾಮೋಹಕ್ಕೆ ಬೆಂದ
ಸೋನೆಯಂತಹ ಕಣ್ಣೀರು.
ಬಿಸಿಲಿನ ತಾಪಕ್ಕೆ ಕರಕಲ್ಲಾದ
ಕರಿ ಬಂಡೆಯಂತೆ
ಕಾದು ನೋಡುತ್ತಿದೆ
ಬಾನ್ನೆತ್ತರದ ಕಡೆಗೆ ಹೃದಯಾ
ನೀ ಪ್ರೀತಿಯ ಹನಿಗಳ
ನನ್ನೆದೆಯ ಮೇಲೆ ಚೆಲ್ಲುವೆ ಎಂದು

ನನ್ನ ಹೃದಯ ಹೇಳುತ್ತಿದೆ
ನೀ ಮತ್ತೇ ಬಾರದೆ
ಇರುವೆ ಎಂದು
ನೀ ಬರುವ ದಾರಿಯ
ಕಾಯುತ್ತಾ ಕಂಗಳ ರೆಪ್ಪೆಗೆ
ರಜೆ ನೀಡಲೆಂದು

ಹೋಗಿ ಬರಲೇ
ಹೃದಯ ನಿನ್ನ
ನೆನಪುಗಳ ಜೊತೆ

ಶಿವಶಂಕರ. ಪಿ. ವೀರಾಪುರ

 

ಕವನ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...