Oyorooms IN

Wednesday, 29th March, 2017 8:39 PM

BREAKING NEWS

ಕ್ರೀಡೆ

ವಿಶಾಖದಲ್ಲಿ ಬಿಗ್ ಫೈಟ್, ಯಾರ ವಶವಾಗಲಿದೆ ಗೆಲುವಿನ ಪಟ್ಟಣ

virat

ವಿಶಾಖಪಟ್ಟಣ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು,  ಈಗಾಗಲೇ ಉಭಯ ತಂಡಗಳು ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು ಪ್ರವಾಸಿ ಹಾಗೂ ಅತಿಥೇಯ ತಂಡ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

ಟೆಸ್ಟ್ ಸರಣಿಯಲ್ಲಿ ಈಗಾಗಲೇ ಕೈವಶಪಡಿಸಿಕೊಂಡಿರುವ ಭಾರತ ತಂಡ ಏಕದಿನ ಸರಣಿಯನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಕಿವೀಸ್ ಪಡೆ ಏಕದಿನ ಸರಣಿಯಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದೆ. ಭಾರತ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿತ್ತು. ಆದರೆ 2ನೇ ಪಂದ್ಯದಲ್ಲಿ ಕಿವೀಸ್ ತಿರುಗೇಟು ನೀಡಿ 1-1 ಸಮಬಲ ಕಾಯ್ದುಕೊಂಡಿದೆ.

ನಾಯಕ ಮಹೇಂದ್ರ ಸಿಂಗ್ ನೇತೃತ್ವದ ತಂಡ ಕಿವೀಸ್ ತಂಡವನ್ನು ಮಣಿಸಲು ರಣತಂತ್ರ ರೂಪಿಸಿದ್ದು, ಗೆಲ್ಲುವ ತವಕದಲ್ಲಿದೆ. ಆದರೆ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು ,ಇದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಟೆಸ್ಟ್ ಸರಣಿಯಲ್ಲಿ ಸೋಲನ್ನುಭವಿಸಿರುವ ಪ್ರವಾಸಿ ತಂಡ ಏಕದಿನ ಸರಣಿಯಲ್ಲಿ ಪ್ರತಿರೋಧ ನೀಡಿದೆ. ನಾಳೆ ಅಂತಿಮ ಪಂದ್ಯಕ್ಕೆ ನಾಯಕ ವಿಲಿಯಮ್ಸನ್ ಪಡೆ ಪ್ರವಾಸಿ ತಂಡವನ್ನು ಮಣಿಸಿ ಪ್ರಶಸ್ತಿ ಗೆಲ್ಲಲು ಕಾತರದಲ್ಲಿದೆ. ಆದರೆ ತಂಡದ ಆಧಾರಸ್ತಂಭ ರಾಸ್ ಟೇಲರ್, ಮಾರ್ಟಿನ್ ಗುಪ್ಟಿಲ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಕೈಕೊಡುತ್ತಿರುವುದು ನ್ಯೂಜಿಲೆಂಡ್ ಗೆ ಮೈನಸ್ ಪಾಯಿಂಟ್ ಆಗಿದೆ. ನಾಳೆ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಯಲಿದ್ದು, ಅಭಿಮಾನಿಗಳಿಗೆ ಧೋನಿ ಬಳಗ ದೀಪಾವಳಿಗೆ ಗೆಲುವಿನ ಉಡುಗೊರೆ ನೀಡಲಿದೆಯಾ ನಿರೀಕ್ಷಬೇಕಿದೆ.

 

English summary:   final match new Zeeland vs India in vishakapattanam

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...