Oyorooms IN

Friday, 24th February, 2017 11:22 AM

BREAKING NEWS

ಪ್ರಮುಖ ಸುದ್ದಿಗಳು

ಫ್ಲಾರಿಡಾ ಏರ್‍ಪೋರ್ಟ್‍ನಲ್ಲಿ ಬಂದೂಕುಧಾರಿಯ ಅಟ್ಟಹಾಸ ಐವರ ಬಲಿ

ಹೌಸ್ಟನ್: ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಇತರ ಎಂಟು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಅಮೆರಿಕದ ಫ್ಲಾರಿಡಾದಲ್ಲಿನ ಲಾಡರ್‍ಡೆಲ್-ಹಾಲಿವುಡ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಿಂದ ಇಡೀ ಪ್ರಾಂತ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹತ್ಯಾಕಾಂಡಕ್ಕೆ ಕಾರಣನಾದ ಇರಾಕ್ ಮೂಲದ 26 ವರ್ಷದ ಎಸ್ಟೆಬನ್ ಸ್ಯಾಂಟಿಯಾಗೋ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇರಾಕ್ ಯೋಧನಾದ ಈತನ ಅತೃಪ್ತಿಕರ ಸಾಧನೆಯಿಂದಾಗಿ ಕಳೆದ ವರ್ಷ ಅಲಾಸ್ಕ ಆರ್ಮಿ ನ್ಯಾಷನಲ್ ಗಾರ್ಡ್ ಸೇವೆಯಿಂದ ವಜಾಗೊಳಿಸಲಾಗಿತ್ತು.

ಲಾಡರ್‍ಡೆಲ್ ಏರ್‍ಪೋರ್ಟ್‍ನ ಟರ್ಮಿನಲ್-2 ಸರಕು ವಿಭಾಗದಲ್ಲಿ ತಪಾಸಣಾ ಕೇಂದ್ರದ ಹೊರಗೆ ಈ ಗುಂಡಿನ ದಾಳಿ ನಡೆಯಿತು.ಬಂದೂಕುಧಾರಿಯ ಆಕ್ರಮಣದ ನಂತರ ಜನರು ದಿಕ್ಕಾಪಾಲಾಗಿ ಓಡಿದರು. ಫೈರಿಂಗ್‍ನಲ್ಲಿ ಕನಿಷ್ಠ ಐವರು ಮೃತಪಟ್ಟು, 8 ಮಂದಿ ತೀವ್ರ ಗಾಯಗೊಂಡರು ಎಂದು ಫ್ಲೋರಿಡಾದ ಬ್ರೊವಾರ್ಡ್ ಕೌಂಟಿಯ ಶರೀಫ್ (ಪೊಲೀಸ್) ಕಚೇರಿ ತಿಳಿಸಿದೆ.
ಈ ನರಮೇಧಕ್ಕೆ ನಿಖರ ಕಾರಣ ತಿಳಿಯಲು ಸ್ಯಾಂಟಿಯಾಗೋನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...