Oyorooms IN

Sunday, 26th March, 2017 10:29 PM

BREAKING NEWS

ಪ್ರಮುಖ ಸುದ್ದಿಗಳು

ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಕಲಾಂ ಪ್ರತಿಮೆ ಅನಾವರಣ

ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಕಲಾಂ ಪ್ರತಿಮೆ ಅನಾವರಣ

ರಾಮೇಶ್ವರಂ : ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಅವರಷ್ಟೇ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು  ತಮಿಳುನಾಡಿನ ಪೈ ಕರಂಬುವಿನಲ್ಲಿ ಇದೇ ಅನಾವರಣಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಅವರು ‘ಕ್ಷಿಪಣಿ ಮಾನವ’ ಕಲಾಂನ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಜೊತೆಗೆ ಕಲಾಂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಮೇಶ್ವರಂ ಅನ್ನು ‘ಅಮೃತ ಯೋಜನೆ’ಗೆ ಒಳಪಡಿಸುವುದಾಗಿ ಪ್ರತಿಮೆ ಅನಾವರಣ ಮಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಘೋಷಿಸಿದರು. 48 ಕೋಟಿ ರೂ. ವೆಚ್ಚದಲ್ಲಿ ರಾಮೇಶ್ವರಂ ಅಭಿವೃದ್ಧಿಯಾಗಲಿದೆ. 1 ಲಕ್ಷ ಜನ ಸಂಖ್ಯೆ ಹೊಂದಿರುವ ನಗರ ಈ ಯೋಜನೆಗೆ ಒಳಪಡಲು ಅರ್ಹ. ಆದರೆ 45 ಸಾವಿರ ಜನಸಂಖ್ಯೆ ಹೊಂದಿರುವ ರಾಮೇಶ್ವರಂ ಅನ್ನು ಯೋಜನೆಗೆ ಒಳಪಡಿಸಲು ಸರಕಾರ ನಿರ್ಧರಿಸಿದೆ ಎಂದರು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...