Oyorooms IN

Tuesday, 17th January, 2017 10:12 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಚಿಕ್ಕಬಳ್ಳಾಪುರ

ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ರೈತರ ಪ್ರತಿಭಟನೆ

ಶಿಡ್ಲಘಟ್ಟ: ರಾಷ್ಟ್ರೀಯ ಹೆದ್ದಾರಿ 234 ರ ಅಗಲೀಕರಣ ಮತ್ತು ಅಭಿವೃಧ್ಧಿ ಕಾಮಗಾರಿ ವಿಳಂಬದಿಂದ ನಡೆಯುತ್ತಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಾಲೂಕಿನ ಸೊಣ್ಣೆನಹಳ್ಳಿ ಗೇಟ್ ಬಳಿಯ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಆಮೆಗತ್ತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸಿ ಹಲವರು ಮೃತಪಟ್ಟಿದ್ದಾರೆ ಇಡೀ ರಸ್ತೆ ಧೂಳುಮಯವಾಗಿ ಈ ಮಾರ್ಗದಲ್ಲಿ ಸಂಚರಿಸುವ ನಾಗರಿಕರು ಮತ್ತು ದ್ವಿಚಕ್ರ ವಾಹನ ಸವಾರರು ಅಸ್ತಮ ರೋಗಗಳಿಂದ ನರಳುತ್ತಿದ್ದಾರೆ ಜೊತೆಗೆ ಅಕ್ಕಪಕ್ಕದಲ್ಲಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪು ಮತ್ತು ಇನ್ನಿತರೆ ಬೆಳೆಗಳು ನಾಶವಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಷ್ಟ್ರೀಯಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಗಳ ನೂರಾರು ರೈತರು ರೈತ ಸಂಘದ ನೇತೃತ್ವದಲ್ಲಿ 3-4 ಘಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರಿಂದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣೀಕರು ತಮ್ಮ ಸ್ಥಳಗಳಿಗೆ ದಾವಿಸಲು ತುಂಭಾ ಪರಡಾಡಿದರು ಪೋಲಿಸರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲು ನಗರ ಪೋಲೀಸ್ ಠಾಣೆಯ ಪಿಎಸ್‌ಐ ನವೀನ್ ಮತ್ತು ಸಿಬ್ಬಂದಿ ಹರಸಾಹಸ ಮಾಡಿದರು.

former-protest

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದ ಅವರು ಚಿಕ್ಕಬಳ್ಳಾಪು ಜಿಲ್ಲೆ ಸತತ ಬರಗಾಲವನ್ನು ಎದುರಿಸುತ್ತಿರುವ ಜಿಲ್ಲೆಯಾಗಿದ್ದು ಈ ಜಿಲ್ಲೆಯಲ್ಲಿ ಗೌರಿಬಿದನೂರಿನಿಂದ ಶ್ರೀನಿವಾಸಪುರದವರೆವಿಗೂ ರಾಷ್ಟ್ರೀಯ ಹೆದ್ದಾರಿ 234  ರ ಅಗಲೀಕರಣ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದ ಅವರು ಈ ಭಾಗದ ರೈತರು ತಮ್ಮಗೆ ದೊರೆತ ಅಲ್ಪಸ್ವಲ್ಪ ನೀರಿನಲ್ಲೆ ರೇಷ್ಮೆ ತರಕಾರಿ ಬೆಳೆದು ಜೀವನ ಮಾಡುವಂತಹ ಪರಿಷ್ಠಿತಿ ಬಂದಿದೆ, ರಸ್ತೆ ಅಗಲೀಕರಣದಿಂದ ರೈತರ ಬೆಳೆಗಳ ಮೇಲೆ ದೂಳು ಆವರಿಸಿರುವುದರಿಂದ ಏನಕ್ಕೂ ಪ್ರಯೋಜನವಾಗದೆ ರೈತರು ಲಕ್ಷಗಟ್ಟಲೆ ನಷ್ಠ ಅನುಭವಿಸುತ್ತಿದ್ದಾರೆ ಇದಕ್ಕೆಲ್ಲಾ ಗುತ್ತಿಗೆದಾರರು ನೇರ ಹೊಣೆಗಾರರಾಗಿದ್ದಾರೆ ಎಂದು ದೂರಿದರು.

ರೇಷ್ಮೆ ಸೊಪ್ಪುಗೆ ಮೂಟೆಗೆ 500-600 ರೂಗಳಿಗೆ ದೊರೆಯುತ್ತಿದ್ದು ರೈತ ತನ್ನ ತೋಟದ ಸೊಪ್ಪಿನ ಮೇಲೆ ದೂಳು ತುಂಬಿದ್ದು ರೇಷ್ಮೆಗೆ ಅಲ್ಲದೆ ದನಕರುಗಳಿಗೂ ಯೋಗ್ಯವಾಗದ ಪರಿಸ್ಥಿತಿಯಲ್ಲಿದೆ ರೈತರು ಲಕ್ಷಂತರ ರೂಗಳನ್ನು ನಷ್ಠಹೊಂದಿದ್ದು ರೈತರಿಗೆ ನಷ್ಠ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಗುತ್ತಿಗೆ ಹೊಂದಿರುವ ನರಸಿಂಹ್ಮರೆಡ್ಡಿ ಮತ್ತು ಶಂಕರರೆಡ್ಡಿಯನ್ನು ಕರೆಸಿ ಈ ಭಾಗದ ರೈತರನ್ನು ಶುಕ್ರವಾರ ಕರೆದು ಚರ್ಚಿಸಿ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಪೋಲಿಸರು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈಬಿಟ್ಟು ರೈತರು ಸಮಸ್ಯೆ ಬಗೆಹರಿಯದಿದ್ದ ಪಕ್ಷದದಲ್ಲಿ ಉಗ್ರರೀತಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ, ಆನೂರು ದೇವರಾಜ್, ಮುನಿನಂಜನಪ್ಪ, ಗ್ರಾ.ಪಂ.ಮಾಜಿ ಸದಸ್ಯ ದೇವರಾಜ್, ಮಂಜುನಾಥ, ಶ್ರೀರಾಮ, ರಮೇಶ್, ಸೀನಪ್ಪ, ಶ್ರೀನಿವಾಸ್, ಟಿ.ಕೃಷ್ಣಪ್ಪ, ಪ್ರಭಾಕರ್ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...