Oyorooms IN

Wednesday, 29th March, 2017 10:49 AM

BREAKING NEWS

ಪ್ರಮುಖ ಸುದ್ದಿಗಳು

ಸಾಮ್ ಸ್ಯಾಂಗ್ ಟರ್ಬೋ “ಸ್ಪೀಡ್ ” ತಂತ್ರಜ್ಞಾನದ ಬಗ್ಗೆ ಗೊತ್ತಾ..?

SAMSUNG TST

ನ್ಯೂಸ್ ಡೆಸ್ಕ್: ಸ್ಮಾರ್ಟ್ ಫೋನ್ ದಿಗ್ಗಜ ಸಂಸ್ಥೆ ಸಾಮ್ ಸ್ಯಾಂಗ್ ಇತ್ತಿಚೆಗೆ ಬಿಡುಗಡೆ ಮಾಡಿರುವ ಗೆಲಾಕ್ಸಿ ಜೆ2, ಜೆ ಮ್ಯಾಕ್ಸ್ ಫೋನ್ ಗಳಲ್ಲಿ ಹೊಸದಾಗಿ ಟರ್ಬೋ ಸ್ಪೀಡ್ ತಂತ್ರಜ್ಞಾನವನ್ನು ಅಳವಡಿಸುತ್ತಿರುವುದಾಗಿ ಕಂಪೆನಿ ಹೇಳಿದೆ.

ಟರ್ಬೋ ಸ್ಪೀಡ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿರುವ ಮೊದಲ ಸ್ಮಾರ್ಟ್ ಫೋನ್ ಇದಾಗಿದ್ದು, ಈ ತಂತ್ರಜ್ಞಾನದಿಂದ ಪರ್ಫಾಮೆನ್ಸ್ ಹೆಚ್ಚಾಗಲಿದ್ದು, ರ್ಯಾಮ್ (RAM) ಹಾಗೂ ಪ್ರೊಸೆಸರ್ ಮೇಲಿನ ಭಾರವನ್ನು ಕಡಿಮೆ ಮಾಡಲಿದ್ದು, ಆ್ಯಪ್ ಗಳನ್ನು ಶೇ 40 ರಷ್ಟು ವೇಗವಾಗಿ ಲೋಡ್ ಆಗಲಿವೆ.

ಟರ್ಬೋ ಸ್ಪೀಡ್ ತಂತ್ರಜ್ಞಾನದಿಂದ ಮೊಬೈಲ್ ಇನ್ಬಿಲ್ಟ್ ಅಪ್ಲೀಕೇಶನ್ ಗಳ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡುವುದರಿಂದ ರ್ಯಾಮ್ (RAM) ಮೇಲೆ ಒತ್ತಡ ಕಡಿಮೆಯಾಗಲಿದ್ದು, ಆ್ಯಪ್ ಗಳನ್ನು ಹೊಸದಾಗಿ ರೂಪಿಸಲಾಗಿದೆ ಎಂದು ಸಾಮ್ ಸ್ಯಾಂಗ್ ಹೇಳಿದೆ.

ಆ್ಯಪ್ ಬಳಕೆ ಮುಗಿದ ನಂತರ ಕ್ಲೋಸ್ ಮಾಡಿದರು, ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲೀಕೇಶನ್ ರನ್ ಆಗುತ್ತಲೇ ಇರುವುದರಿಂದ  RAM ಮೇಲೆ ಬೀಳುವ ಒತ್ತಡ ಹಾಗೂ ಮಲ್ಟಿ ಟಾಸ್ಕಿಂಗ್ ಅಪ್ಲೀಕೇಶನ್ ಬಳಕೆಯಲ್ಲಿ ಆಗುತ್ತಿದ್ದ ನಿಧಾನವನ್ನು ಟರ್ಬೋ ಸ್ಪೀಡ್ ತಂತ್ರಜ್ಞಾನದಿಂದ ಕೊನೆಯಾಗಲಿದ್ದು, ಕ್ಲೋಸ್ ಮಾಡಿದ ಆ್ಯಪ್ ಅನ್ನು ಟರ್ಬೋ ಸ್ಪೀಡ್ ತಂತ್ರಜ್ಞಾನ ಬ್ಯಾಕ್ ಗ್ರೌಂಡ್ನಲ್ಲಿ ರನ್ ಮಾಡಲು ಬಿಡುವುದಿಲ್ಲ ಎಂದು ಸಾಮ್ ಸ್ಯಾಂಗ್ ತಿಳಿಸಿದೆ.

English summary: SAMSUNG  India launched the Galaxy j2, j Max with two key Features, turbo speed technology and smart glow.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...