Oyorooms IN

Tuesday, 25th April, 2017 2:00 PM

BREAKING NEWS

ಪ್ರಮುಖ ಸುದ್ದಿಗಳು

ಸುಂದರ ತ್ವಚೆ  ಶುದ್ಧ ತುಪ್ಪದಿಂದಲೂ  ಪಡೆಯಬಹುದು

ghee 

ಬೆಣ್ಣೆಯನ್ನು ಕರಗಿಸಿ ಮಾಡುವಂತಹ ಶುದ್ಧ ತುಪ್ಪವನ್ನು ನೀವು ಯಾವುದಕ್ಕೆ ಬಳಕೆ ಮಾಡುತ್ತೀರಿ..? ಸ್ವೀಟ್‌ ಮಾಡಲು, ಅಡುಗೆ ಮಾಡಲು, ಅಡುಗೆಗೆ ಹೆಚ್ಚು ರುಚಿ ನೀಡಲು ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ಫಿಟ್‌ನೆಸ್‌ ಜನರು ಮಾತ್ರ ಈ ತುಪ್ಪದಿಂದ ತುಂಬಾನೆ ದೂರ ಓಡುತ್ತಾರೆ. ಆದರೆ ತುಪ್ಪದಲ್ಲೂ ಅಡಗಿದೆ ಸೌಂದರ್ಯವನ್ನು ಹೆಚ್ಚಿಸುವ ಗುಣ ಅನ್ನೋದು ಬಹು ಜನಕ್ಕೆ ತಿಳಿದಿರಲು ಸಾಧ್ಯವಿಲ್ಲ. ಇಲ್ಲಿದೆ ತುಪ್ಪ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಯಾವ ರೀತಿ ಹೆಚ್ಚು ಪರಿಣಾಮ ಬೀರುತ್ತದೆ ಅನ್ನೋದು…
ಸ್ಕಿನ್ಗ್ಲೋ ಆಗಲು ನೆರವು : ಸ್ಕಿನ್‌ ಗ್ಲೋ ಆಗಲು ಶುದ್ಧ ತುಪ್ಪ ಸಹಾಯ ಮಾಡುತ್ತದೆ. ಚರ್ಮದ ಮೇಲಿರುವ ಕಲೆ, ಮಾರ್ಕ್‌ಗಳನ್ನು ನಿವಾರಿಸಿ ತ್ವಚೆಗೆ ಹೊಳಪು ನೀಡುತ್ತದೆ. ಆದುದರಿಂದ ಪ್ರತಿ ದಿನ ಊಟ ಮಾಡುವಾಗ ಆಹಾರದಲ್ಲಿ ತುಪ್ಪ ಸೇರಿಸಿ.

ಒಡೆದ ತುಟಿಗಳಿಗೆ ಮೆರುಗುಚಳಿಗಾಲದಲ್ಲಿ ತುಟಿಗಳು ಒಡೆದು ಹೋಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಒಡೆದ ತುಟಿಗಳಿಗೆ ಪ್ರತಿ ದಿನ ತುಪ್ಪ ಹಚ್ಚುತ್ತ ಬಂದರೆ ತುಟಿಗಳು ಮೃದುವಾಗುತ್ತದೆ.

ಸ್ಕಿನ್ಮಾಯಿಶ್ಚರೈಸರ್ಆಗಿ ಕಾರ್ಯ ನಿರ್ವಹಿಸುತ್ತದೆತುಪ್ಪ ಸ್ಕಿನ್‌ ಮಾಯಿಶ್ಚರೈಸ್‌ ಮಾಡಲು ಸಹ ಸಹಕಾರಿ. ಇದು ನಿಮ್ಮ ಚರ್ಮವನ್ನು ಸದಾ ಕಾಲ ನರೀಶ್‌ಮೆಂಟ್‌ ಮಾಡಿ ಆಕರ್ಷಕ ಲುಕ್‌ ನೀಡುತ್ತದೆ. ಆಯುರ್ವೇದದಲ್ಲೂ ಸ್ಕಿನ್‌ ಮಾಯಿಶ್ಚರೈಸ್‌ ಮಾಡಲು ತುಪ್ಪವನ್ನು ಬಳಕೆ ಮಾಡಲಾಗುತ್ತಿತ್ತು.

ಕೂದಲಿನ ಬೆಳವಣಿಗೆಗೆ ಸಹಕಾರಿ : ನಿಮ್ಮ ಕೂದಲು ಸ್ಮೂತ್‌, ಶೈನಿ ಹಾಗೂ ಸಿಲ್ಕಿ ಆಗಬೇಕೆಂದು ನೀವು ಬಯಸುತ್ತೀರೇ..? ಇದನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲಿನ ಸಮಸ್ಯೆ, ಕೂದಲು ಉದುರುವಿಕೆ ಕಡಿಮೆಯಾಗಿ ಕೂದಲು ಸಾಫ್ಟ್‌ ಆಗುತ್ತದೆ.

ಡಾರ್ಕ್ಸರ್ಕಲ್ಸಮಸ್ಯೆ : ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮಲ್ಲೂ ಈ ಸಮಸ್ಯೆ ಕಾಣಿಸಿಕೊಂಡರೆ ಕಣ್ಣಿನ ಸುತ್ತಲೂ ತುಪ್ಪ ಹಚ್ಚುವ ಮೂಲಕ ಈ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಬಹುದು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...