Oyorooms IN

Monday, 26th June, 2017 4:06 PM

BREAKING NEWS

ಪ್ರಮುಖ ಸುದ್ದಿಗಳು

ಪೋಲಿ ಪೊಲೀಸ್ ಪೇದೆಯಿಂದ ಯುವತಿಗೆ ಕಿರುಕುಳ, ಬೆದರಿಕೆ

police_kon

ಹಾವೇರಿ: ಯುವತಿಯೊಬ್ಬಳಿಗೆ ಪೊಲೀಸ್ ಪೇದೆಯೊಬ್ಬ ಪದೆಪದೇ ಫೋನ್ ಮಾಡಿ ಕಿರುಕುಳ ನೀಡಿದ್ದಲ್ಲದೆ, ಯುವತಿಯನ್ನು ಮನೆಗೆ ಕರೆದು ಜೀವ ಬೆದರಿಕೆ ಹಾಕಿರುವ ಘಟನೆ ಹಾವೇರಿಯ ಶಿಗ್ಗಾಂವಿಯಲ್ಲಿ ನಡೆದಿದ್ದು, ಪೇದೆ ಕಿರುಕುಳವನ್ನು ತಾಳಲಾರದೇ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಶಿಗ್ಗಾಂವಿ ಯುವತಿ ಹಾಗೂ ಪೊಲೀಸ್ ಪೇದೆ ಗಂಗಾಧರನಿಗೆ ಕೆಲವು ದಿನಗಳಿಂದ ಪರಿಚಯವಿತ್ತು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಗಂಗಾಧರ ಆಕೆಗೆ ಫೋನ್ ಮಾಡಿ ಕಾಟ ಕೊಟ್ಟಿದ್ದಾನೆ. ಇತನ ಕಿರಿಕಿರಿಯಿಂದ ಬೇಸತ್ತ ಯುವತಿ ಗಂಗಾಧರನಿಗೆ ಫೋನ್ ಮಾಡದಂತೆ ವಾರ್ನಿಂಗ್ ಮಾಡಿದ್ದರಿಂದ ಆಕೆಯನ್ನು ಪೊಲೀಸ್ ಕ್ವಾರ್ಟರ್ಸ್ ಗೆ ಕರೆದು ಜೀವ ಬೆದರಿಕೆ ಹಾಕಿದ್ದು, ಮನೆಯವರಿಗೆ ತಿಳಿಸದಂತೆ ಧಮ್ಕಿ ಹಾಕಿದ್ದಾನೆ.

ಗಂಗಾಧರ ಈ ಹಿಂದೆಯೂ ಕಾಲೇಜು ಯುವತಿಯರಿಗೆ ಫೋನ್ ನಲ್ಲಿ ಕಾಟಕೊಟ್ಟಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

English summary:  girl gets death threats from haveri police constable

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...