Oyorooms IN

Wednesday, 29th March, 2017 8:52 PM

BREAKING NEWS

ಧಾರವಾಡ

ಗೌರಿ ಲಂಕೇಶ್’ಗೆ ಜೈಲು ಶಿಕ್ಷೆ

gauri-lankesh

ಹುಬ್ಬಳ್ಳಿ: ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಪತ್ರಕರ್ತೆ ಗೌರಿ ಲಂಕೇಶ್’ಗೆ 6 ತಿಂಗಳು ಜೈಲು ಶಿಕ್ಷೆಯಾಗಿದೆ. ಇಲ್ಲಿಯ ಜೆಎಂಎಫ್’ಸಿ ಎರಡನೇ ನ್ಯಾಯಾಲಯದ ನ್ಯಾಯಮೂರ್ತಿ ಡಿ.ಅಮರ್ ಅವರು ಈ ಆದೇಶ ಹೊರಡಿಸಿದ್ದಾರೆ. ಗೌರಿ ಲಂಕೇಶ್’ಗೆ 6 ತಿಂಗಳು ಜೈಲಿನ ಜೊತೆಗೆ 5 ಸಾವಿರ ರೂ ದಂಡವನ್ನೂ ವಿಧಿಸಲಾಗಿದೆ. ಆದರೆ, ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಗೌರಿ ಲಂಕೇಶ್ ಅವರು ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಮತ್ತಿತರರ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪ ಗೌರಿ ಲಂಕೇಶ್ ಮೇಲಿತ್ತು. 2008ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿತ್ತು. ಎಂಟು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.

ಸದ್ಯ ಜಾಮೀನು ಪಡೆದಿರುವ ಗೌರಿ ಲಂಕೇಶ್ ಅವರು ಕೆಳಹಂತದ ನ್ಯಾಯಾಲಯದ ತೀರ್ಪಿನ್ನು ಪ್ರಶ್ನಿಸಿ ಮೇಲ್ಮನವಿ ಹೋಗುವುದಾಗಿ ತಿಳಿಸಿದ್ದಾರೆ.

ಧಾರವಾಡ ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...