Oyorooms IN

Wednesday, 29th March, 2017 10:47 AM

BREAKING NEWS

ಅರೋಗ್ಯ

ದಾಳಿಂಬೆ ಹಣ್ಣಿನಿಂದಾಗುವ ಪ್ರಯೋಜನಗಳು

dali
ಕೆಂಪು ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು
ಉಪಯುಕ್ತವಾದುದು .ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ  ದರೂ ಆರೋಗ್ಯವಂತರಗಿರ ಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

ದಾಳಿಂಬೆ ಹಣ್ಣಿನಿಂದಾಗುವ  ಪ್ರಯೋಜನಗಳು

ರಕ್ತದೊತ್ತಡ  ಕಡಿಮೆ ಆಗುವದು. ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.ಕೊಲೆಸ್ಟ್ರಾಲ್  ಕಡಿಮೆಯಾಗುವದು. ಮಹಿಳೆಯರು ದಾಳಿಂಬೆಹಣ್ಣಿನ  ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವದು. ನಿಶ್ಯಕ್ತತೆ ಯನ್ನು ಕಡಿಮೆ ಮಾಡುವದು .ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು  ಕಾಂತಿಯುತವಾಗುವದು. ಲೈಂಗಿಕ  ತೊಂದರೆಯೂ ನಿವಾರಣೆಯಗುವದು ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು. ದಾಳಂಬಿ ಬೀಜವನ್ನು  ತಿನ್ನುವದರಿಂದ ಹಲ್ಲುಗಳ ಹೊಳಪು  ಹೆಚ್ಹುವದು ಮನಸ್ಸು ಉಲ್ಲಾಸದಿಂದ ಇರುವದು ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚಿಸುವದು.    ಅದಕ್ಕಾಗಿ ದಾಳಿಂಬೆ ತಿನ್ನುವದು ಅವಶ್ಯಕವಾದುದು ಇದರಿಂದ ಮಕ್ಕಳು ಮಹಿಳೆಯರಿಗೆ ನೆನಪಿನ ಶಕ್ತ್ತಿ ಹೆಚ್ಹಿ ಅರೋಗವಂತರಾಗಿರಲು ಸಹಾಯಕವಾಗಿದೆ.

dali-1

ಸೆಕ್ಸ್‌ ಪವರ್‌ ಹೆಚ್ಚಿಸಲು ದಾಳಿಂಬೆ ಜ್ಯೂಸ್‌ ಸಹಕಾರಿ

ಈ ಸೆಕೆಗಾಲಕ್ಕೆ ಯಾವ ಜ್ಯೂಸ್‌ ಕುಡಿದರೂ ದೇಹಕ್ಕೆ ತಂಪು ಎನಿಸುತ್ತದೆ, ಅಲ್ಲದೇ ಮೈ ಮನಕ್ಕೆ ಆರಾಮ ಸಿಗುತ್ತದೆ ಅಲ್ಲವೇ..? ಅದರಲ್ಲೂ ದಾಳಿಂಬೆ ಜ್ಯೂಸ್‌ ಅತ್ಯುತ್ತಮ. ಅದು ಕೇವಲ ದೇಹಕ್ಕೆ ತಂಪು ನೀಡೋದು ಮಾತ್ರವಲ್ಲ, ಸೆಕ್ಸ್‌ ಪವರ್ ಹೆಚ್ಚಿಸಲು ಸಹಕಾರಿಯಾಗಿದೆ. ಹೊಸ ಸಂಶೋಧನೆಯೊಂದರ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ದಿನಾಲು
ಕುಡಿದರೆ ಮಹಿಳೆ ಮತ್ತು ಪುರುಷರ ಸೆಕ್ಸ್ ಪವರ್ ಹೆಚ್ಚುತ್ತದೆ.  ದಾಳಿಂಬೆ ಹಣ್ಣಿನ ಜ್ಯೂಸ್‌ ವಯಾಗ್ರದ ತರಹ ಕೆಲಸ ಮಾಡುತ್ತದೆ. ಸಾಮಾನ್ಯ ವಯಾಗ್ರದಿಂದ ಪುರುಷರ ಸೆಕ್ಸ್‌ ಪವರ್‌ ಅಷ್ಟೆ ಹೆಚ್ಚಾಗುತ್ತದೆ ಆದರೆ, ದಾಳಿಂಬೆ ಹಣ್ಣಿನ
ಜ್ಯೂಸ್‌‌ನಿಂದ ಪುರುಷರ ಮತ್ತು ಮಹಿಳೆಯರ ಸೆಕ್ಸ್‌ ಪವರ್‌ ಕೂಡ ಹೆಚ್ಚುತ್ತದೆ.

dali-11

ಕ್ವೀನ್‌ ಮಾರ್ಗರೇಟ್‌ ಯುನಿವರ್ಸಿಟಿ ಆಫ್‌ ಎಡಿನ್‌ಬಗರ್ಗ್‌ ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ತಿಳಿದು ಬಂದಿದೆ. ಈ ಸಂಶೋಧನೆಯಲ್ಲಿ 21 ರಿಂದ 64 ವರ್ಷದ ಒಳಗಿನ ಸುಮಾರು 58 ಮಂದಿ ಭಾಗವಹಿಸಿದ್ದರು. ಸತತ 15 ದಿನಗಳವರೆಗೆ ಈ ಜ್ಯೂಸ್‌ ಸೇವಿಸಿದ ಜನರಲ್ಲಿ ಅಧಿಕ ಸೆಕ್ಸ್‌ ಪವರ್‌ ಉಂಟಾಗಿದ್ದು ತಿಳಿದು ಬಂದಿದೆ. ಅಲ್ಲದೇ ಮಹಿಳೆಯರಲ್ಲಿ ಬೋನ್ಸ್‌ ಮತ್ತು ಮಸಲ್ಸ್‌ ಬಲಗೊಂಡಿದೆ.

ಪ್ರತಿ ನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್‌ ಕುಡಿದರೆ ಶೇ.16ರಿಂದ 30 ರವರೆಗೆ ಸೆಕ್ಸ್‌ ಪವರ್‌ ಹೆಚ್ಚುತ್ತದೆ. ದಾಳಿಂಬೆಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿದೆ ಇದರಿಂದ ಹೃದಯ ಸಂಬಂಧಿ ರೋಗಗಳು ಹಾಗೂ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಜೊತೆಗೆ ವಿವಿಧ ಬಗೆಯ ಕ್ಯಾನ್ಸರ್‌ನಿಂದ ದೇಹವನ್ನು ರಕ್ಷಿಸಲು, ರಕ್ತದ ಒತ್ತಡ ನಿಯಂತ್ರಿಸಲು ದಾಳಿಂಬೆ ಜ್ಯೂಸ್‌ ಸಹಕಾರಿ.

dali-111

ಔಷಧೀಯ ಗುಣಗಳು
*ದಾಳಿಂಬೆ ಹಣ್ಣಿನ ರಸವನ್ನು ದಿನವೂ ಸೇವಿಸುವುದರಿಂದ ಪಿತ್ತ ನಿವಾರಣೆಯಾಗುತ್ತದೆ.
*ದಾಳಿಂಬೆ ಹಣ್ಣಿನ ಸಿಪ್ಪೆಯ ಕಷಾಯ ತಯಾರಿಸಿ ಕುಡಿಯುವುದರಿಂದ ಆಮ ಶಂಕೆಯು ನಿವಾರಣೆಯಾಗುತ್ತದೆ.
*ದಾಳಿಂಬೆ ಹೂಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣಕೆಮ್ಮು ವಾಸಿಯಾಗುತ್ತದೆ
*ದಾಳಿಂಬೆ ಎಲೆಯ ರಸ ತೆಗೆದು ಸಕ್ಕರೆ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ಶಮನವಾಗುತ್ತದೆ
*ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ
*ದಾಳಿಂಬೆ ಗಿಡದ ಬೇರಿನ ಪುಡಿಯ ಕಷಾಯ ತಯಾರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳು  ನಾಶವಾಗುತ್ತವೆ
*ದಾಳಿಂಬೆಯ ಚಿಗುರೆಲೆಗಳ ರಸದೊಂದಿಗೆ ಅತ್ತಿಮರದ ಚಿಗುರೆಲೆಗಳ ರಸ ಬೆರೆಸಿ ಮೂಗಿಗೆ ಬಿಡುವು­ದರಿಂದ ಮೂಗಿ­ನಿಂದಾ­ಗುವ ರಕ್ತಸ್ರಾವ ನಿಲ್ಲುತ್ತದೆ. ವಸಡಿನ ರಕ್ತಸ್ರಾವವನ್ನು ತಡೆಯಲೂ ಇದನ್ನು ಬಳಸಲಾಗುತ್ತದೆ
*ದಾಳಿಂಬೆ ಹೂ ಹಾಗೂ ಚಿಗುರೆಲೆಗಳ ಕಷಾಯದಿಂದ ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು, ಗಂಟಲು ನೋವು ಬೇಗನೇ ವಾಸಿಯಾಗುತ್ತದೆ
*ದಾಳಿಂಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ

ಅರೋಗ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...