Oyorooms IN

Wednesday, 29th March, 2017 10:50 AM

BREAKING NEWS

ಚಿಕ್ಕಮಗಳೂರು

ಮದುವೆ ಮನೆಯಿಂದ ಜೈಲಿಗೆ ಹೋದ ಮಧುಮಗ

marriage

ಚಿಕ್ಕಮಗಳೂರು: ಅದೊಂದು ಮದುವೆ ಮನೆ ಎಲ್ಲ ಸರಿಯಾಗಿದ್ದರೆ ಇಷ್ಟೊತ್ತಿಗೆ ಅವರಿಬ್ಬರು ಸತಿ-ಪತಿಗಳಾಗಿ ಸಪ್ತಪದಿ ತುಳಿದು ವೈವಾಹಿಕ ಜೀವನ ಆರಂಭಿಸಬೇಕಾಗಿತ್ತು. ಆದರೆ ಮದುವೆಯಾಗಬೇಕಾದ ವರ, ತಾಳಿ ಕಟ್ಟುವ ಮುಂಚೆಯೇ ಪೊಲೀಸರೊಂದಿಗೆ ಜೈಲಿಗೆ ಹೋದ ಘಟನೆ ಗೋಣಿಬೀಡುವಿನಲ್ಲಿ ನಡೆದಿದೆ.

ಸುಳ್ಯದ ಎನ್.ವಿ.ಕಿರಣ್ ಗೆ ಹಾಗೂ ಗೋಣಿಬೀಡು ಜಿ.ಹೊಸಹಳ್ಳಿಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಮದುವೆಯ ಹಸೆಶಾಸ್ತ್ರವೂ ಆರಂಭವಾಗಿತ್ತು. ಕಲ್ಯಾಣ ಮಂಟಪದಲ್ಲಿ ಮದುವೆಯ ಶಾಸ್ತ್ರಗಳು ಆರಂಭವಾಗುತ್ತಿರಬೇಕಾದರೆ ಬಂದ ಪೊಲೀಸರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ಕಿರಣ್ ನನ್ನು ಮದುವೆ ಮನೆಯಿಂದಲೇ ಕರೆದೊಯ್ದಿದ್ದಾರೆ.

ಬೆಂಗಳೂರಿನ ಕೆಲಸ ಮಾಡುತ್ತಿದ್ದ ಕಿರಣ್, ವೃದ್ಧೆಯೊಬ್ಬರನ್ನು ಹಣ ಹಾಗೂ ಚಿನ್ನಕ್ಕಾಗಿ ಕೊಲೆ ಮಾಡಿದ್ದ ಎನ್ನಲಾಗಿದ್ದು, ಪ್ರಮುಖ ಆರೋಪಿ ಆಗಿದ್ದ ಕಿರಣ್ ರಾಮನಗರ ಜಿಲ್ಲೆಯ ಕಗ್ನಿಪುರ ಪೊಲೀಸರಿಗೆ ಬೇಕಾಗಿದ್ದ, ಕಿರಣ್ ಹುಡುಕಾಟ ನಡೆಸಿಕೊಂಡು ಸುಳ್ಯಗೆ ಹೋಗಿದ್ದ ಪೊಲೀಸರಿಗೆ ಗೋಣಿಬೀಡುವಿನಲ್ಲಿ ಕಿರಣ್ ಮದುವೆಯಾಗುತ್ತಿರುವ ವಿಚಾರ ಗೊತ್ತಾಗಿದ್ದು. ಪೊಲೀಸರು ಕಲ್ಯಾಣ ಮಂಟಪಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದಾರೆ.

English summary: groom arrested for murder case in chikamagaluru

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...