Oyorooms IN

Sunday, 20th August, 2017 10:44 PM

BREAKING NEWS

ಸಂವಾದ

ಭವ್ಯ ಭಾರತದ so called ಸಮಾಜವಾದಿ, ಜಾತ್ಯತೀತ ಬುದ್ದಿಜೀವಿಗಳೆ,

ಭವ್ಯ ಭಾರತದ so called ಸಮಾಜವಾದಿ, ಜಾತ್ಯತೀತ ಬುದ್ದಿಜೀವಿಗಳೆ, ನನ್ನಲ್ಲಿರುವ ಈ ಕೆಲ ಪ್ರಶ್ನೆ ಹಾಗು ಸಂದೇಹಗಳ ನಿವಾರಣೆ ಮಾಡಿ please. ಇದಕ್ಕೆ ಉತ್ತರಕೊಡಲು ನಿಮಗಿಂತ ಬುದ್ಧಿವಂತರು ಈ ದೇಶದಲ್ಲಿ ನಂಗ್ಯಾರು ಕಾಣ್ಸಲಿಲ್ಲ. ಆದ್ದರಿಂದ ನಿಮಗೆ ಎಡತಾಕುತ್ತಿದ್ದೇನೆ.

ವಿಚಾರ ಅಥವಾ ನೇರ ವಿಷಯ – ದೇಶದಲ್ಲಿ ನೀವು ಹೇಳುತ್ತಿರುವಂತೆ ಕೇಂದ್ರವೇ ನೇರ ಹೊಣೆಯಾಗಿರುವ ಆತ್ಮಹತ್ಯೆ or ಜಾತವೈಷಮ್ಯದ ಕೊಲೆ, ವಾಕ್ ಸ್ವಾತಂತ್ರ್ಯ, ವಿವಿಗಳಲ್ಲಿ ಎದ್ದಿರುವ ಭಾರತೀಯ ವಿರೋಧಿ ಮತ್ತು ಉಗ್ರವಾದ ಸಂವೇದಿ ಅಲೆ or ವಿಚಾರ, ಪ್ರತಿಭಟನೆಗೆ ತಾವುಗಳು ನಡೆಸುತ್ತಿರುವ ಹರತಾಳಗಳು, ಹಾಕುತ್ತಿರುವ ಹಗಲು ವೇಷಗಳ ಬಗ್ಗೆ.

ಪ್ರಶ್ನೆ 1. ಸ್ವಾಮಿ, ನಮ್ಮ ದೇಶದಲ್ಲಿ ಅಂಕಿಅಂಶಗಳ ಪ್ರಕಾರ ವರ್ಷಕ್ಕೆ ೫೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯವರೆವಿಗೂ ಯಾವುದೇ ಕೇಂದ್ರ ಸರ್ಕಾರ ಈ ಆತ್ಮಹತ್ಯೆಗಳಿಗೆ ಸಮಜಾಯಶಿ ಕೊಟ್ಟಿಲ್ಲ ಮತ್ತು ಕೊಡಬೇಕಾಗಿಲ್ಲ. ಅದು ಆತ್ಮಾಹುತಿ ಹೊಂದಿದವರ ಇಚ್ಛೆಯನುಸಾರ ನಡೆದಿರುತ್ತದೆ. ಆತ್ಮಹತ್ಯೆ ಮಹಾಪಾಪ ಎಂದು ನಾನೂ ಒಪ್ಪುತ್ತೇನೆ ಆದರೆ ಇಲ್ಲಿ ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ ಎಳೆಯುವುದು ಖೇದದ ಸಂಗತಿ.
ಬಿಡಿ ಅಸಲಿ ವಿಚಾರ ಏನಂದ್ರೆ, ಇಷ್ಟೆಲ್ಲಾ ತಿಳಿದ ನೀವು ವಿದ್ಯಾರ್ಥಿಗಳ ಈ ಹುಚ್ಚಾಟದ ತಡೆಗೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ? ತೀರಿಹೋದವರ photo ಇಟ್ಟು ಬೇರೆಯವರ ವಿರುದ್ಧವಾಗಿ ಚಳವಳಿ ಮಾಡುವುದರ ಜೊತೆಗೆ ಮಿಕ್ಕ ವಿದ್ಯಾರ್ಥಿಗಳಿಗೆ ಮುಂದೆ ಈರೀತಿ ಎಡವಟ್ಟು ಮಾಡಿಕೊಳ್ಳದಂತೆ ಸಲಹೆ, ಸಂವಾದ ಏನಾದರೂ ಕೊಟ್ಟಿದ್ದೀರಾ?

ಪ್ರಶ್ನೆ 2. ಸ್ವಾಮಿ, ದೇಶಕ್ಕೇ ತಿಳಿದಂತೆ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಯಾತನಾಮಯವಾಗಿದೆ, ಅನೇಕ ಮಕ್ಕಳಿಗೆ ಇನ್ನೂ ಶಾಲೆಯ ಮುಖದರ್ಶನವೂ ಅಸಾಧ್ಯವಾಗಿದೆ. ದೇಶದ ಎಷ್ಟೋ ಕುಗ್ರಾಮಗಳ ಮಕ್ಕಳಿಗೆ ಶಾಲೆ ಎಂಬುದು ಇದೆ ಎಂದೇ ತಿಳಿದಿಲ್ಲ. ತಮ್ಮ ಬುದ್ಧಿಜೀವಿಗಳ ಪಡೆಯಿಂದ ಮಕ್ಕಳಿಗೆ ಆಗುತ್ತಿರುವ ಈ ಬೌದ್ಧಿಕ ಶೋಷಣೆ, ವಂಚನೆಯ ವಿರುದ್ಧವಾಗಿ ಎಷ್ಟುಬಾರಿ ಯಾರವಿರುದ್ಧ ಚಳವಳಿ ಹಮ್ಮಿಕೊಂಡಿದ್ದೀರಿ ಮತ್ತು ಅದರ impact ಏನಾಗಿದೆ?

ಪ್ರಶ್ನೆ 3. ಕೃಷಿ ಪ್ರಧಾನ ರಾಷ್ಟ್ರಭಾರತ ಅಂತ ನಾವು ಸಣ್ಣವರಿದ್ದಾಗಿಂದಲೂ ಓದಿಕೊಂಡು ಬಂದಿದ್ದೇವೆ, ಕೃಷಿ ಭಾರತದ ಬೆನ್ನೆಲುಬು. ಕೃಷಿಕ ಭಾರತದ ಚೇತನ. ಸರಿ, ಹಾಗಾದರೆ ಕೃಷಿಯಲ್ಲಿ ಭಾರಿ ಹಿಂದುಳಿದಿರುವ ಭವ್ಯಭಾರತದ ಬಡ ಕೃಷಿಕರಿಗೆ ಯಾವರೀತಿಯಲ್ಲಿ ನಿಮ್ಮ ಸಹಾಯ ದೊರೆತಿದೆ? ಅಂಕಿಅಂಶಗಳ ಪ್ರಕಾರ ವರ್ಷಕ್ಕೆ ಭಾರತದಲ್ಲಿ 10000ಕ್ಕೂ ಮಿಕ್ಕಿ ರೈತರ ಆತ್ಮಹತ್ಯೆಗಳಾಗುತ್ತಿದೆ. ಪಾಪ ಬಡರೈತ ನಷ್ಟಕ್ಕೆ ನಲುಗಿ ಪ್ರಾಣತೊರೆಯುತ್ತಿದ್ದಾನೆ. ರೈತರ ಆತ್ಮಹತ್ಯೆ ವಿರೋಧಿಸಿ ಎಲ್ಲೆಲ್ಲಿ ನೀವು ಪ್ರತಿಭಟಿಸಿದ್ದೀರಿ? ನಿಮ್ಮಿಂದ ಎಷ್ಟು ರೈತಕುಟುಂಬಗಳು ನೆಮ್ಮದಿಯಿಂದಿವೆ? ಎಷ್ಟು ರೈತರಲ್ಲಿ ಆತ್ಮವಿಶ್ವಾಸ ತುಂಬಿದ್ದೀರಿ? ಅವರ ಆತ್ಮಹತ್ಯಾ ಮನಸ್ಥಿತಿಯನ್ನು ಹೋಗಲಾಡಿಸಿದ್ದೀರಿ?

ಪ್ರಶ್ನೆ 4. ಜೈಜವಾನ್ – ಭಾರತಕ್ಕೆ ಸುತ್ತಲೂ ಶತ್ರುಕಾಟ ಇದೆ. ಭಾರತ ಒಂದೇ ಅಲ್ಲ. ಇಡೀ ವಿಶ್ವದಲ್ಲಿ ಎಲ್ಲದೇಶಗಳಿಗೂ ನೆರೆಯು ಹೊರೆಯೇ, ಅಂಕಿಅಂಶಗಳ ಪ್ರಕಾರ ಭಾರತವು ಸೇನೆಗಾಗಿ ಮೀಸಲಿಡುವ ಬಜೆಟ್ ನ ಪಾಲು ಮಿಕ್ಕ ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಕಡಿಮೆ ಇದೆ. ಆದಕಾರಣ ಭಾರತೀಯ ಸೇನೆಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ, ಆಧುನಿಕ ಯುದ್ಧೋಪಕರಣಗಳ ಜೀವರಕ್ಷಕ ಪರಿಕರಗಳ ಕೊರತೆ ಸ್ವಲ್ಪ ಹೆಚ್ಚಾಗಿಯೇ ಇದೆ. ಇದರಿಂದ ಯೋಧರ ಸಾವಿನ ಅಂಕಿಗಳು ಏರುಗತಿಯಲ್ಲಿದೆ. ಈ ಭಾರತೀಯ ಬಡ ಯೋಧನ ಪ್ರಾಣರಕ್ಷಣೆಗಾಗಿ ತಾವುಗಳು ಎಲ್ಲೆಲ್ಲಿ ಸರ್ಕಾರದ ವಿರುದ್ಧವಾಗಿ ಪ್ರತಿಭಟಿಸಿದ್ದೀರಿ? ಅದರ impact ಎನಾಗಿದೆ?

ಪ್ರಶ್ನೆ 5. ಯತ್ರ ನಾರ್ಯಸ್ತು ಪೂಜ್ಯಂತೇ – ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ದಿನವೊಂದಕ್ಕೆ ಸುಮಾರು50ಕ್ಕೂ ಹೆಚ್ಚು ಸ್ತ್ರೀ ಮಾನಹಾನಿ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಈ ಕಾಮಾಂಧತೆಯಲ್ಲಿ ಸಿಂಹಪಾಲು ಯುವಪೀಳಿಗೆಯದ್ದು. ಅವರ ವಿಕೃತ ಮನಸ್ಥಿತಿಯದ್ದು. ತಮ್ಮ ಗುಂಪಿನಿಂದ ಇಲ್ಲಿಯವರೆವಿಗೂ ಎಷ್ಟು ಶಾಲಾ ಕಾಲೇಜಿನಲ್ಲಿ ಇದರ ವಿರುದ್ಧವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಮತ್ತು ಎಷ್ಟು ಯುವಕರಿಗೆ ನೈತಿಕ ಮಾರ್ಗದರ್ಶನ ನೀಡಿದ್ದೀರಿ?

ಪ್ರಶ್ನೆ 6. ಭಾರತದಲ್ಲಿ ರಸ್ತೆ ಅಪಘಾತಗಳ statistics. ತುಂಬಾ ಹೆಚ್ಚಿದೆ. ಇದಕ್ಕೆ ಕಾರಣ ಯುವಕರ ಹುಡುಗುತನ, ಅತಿವೇಗ ಮಿಗಿಲಾಗಿ ಬೇರೆ ಮನುಷ್ಯರ, ವಾಹನಚಾಲಕರ, ಪಾದಚಾರಿಗಳ ಜೀವಗಳ ಕಡೆಗಿನ ಅಸಡ್ಡೆ. ಈ ಉದಾಸೀನತೆಗೆ ಅನುದಿನವೂ ಜೀವಗಳ ಮಾರಣಹೋಮ. ತಮ್ಮಿಂದ ಇಲ್ಲಿಯವರೆಗೆ ಎಷ್ಟು ಮತ್ತು ಎಲ್ಲೆಲ್ಲಿ ರಸ್ತೆ ಸುರಕ್ಷಾ ಕಾರ್ಯಕ್ರಮಗಳನ್ನು ನಡೆಸಿರುತ್ತೀರಿ? ಮತ್ತು ಅದರ impact ಏನಾಗಿದೆ?

ಪ್ರಶ್ನೆ 7 – ಮಾನ್ಯರೇ, ಕಷ್ಟಪಟ್ಟು ಹಗಲು ರಾತ್ರಿ ನಿದ್ದೆಗೆಟ್ಟು, ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಬದಿಗಿರಿಸಿ, ತಮ್ಮೆಲ್ಲಾ ಶಕ್ತಿಯನ್ನು ಕ್ರೂಡೀಕರಿಸಿ ಓದಿ ಪ್ರತಿ ವರ್ಷವೂ ಅನೇಕ ಯುವಕರು IAS, IPS ಅಧಿಕಾರಿಗಳಾಗಿ ಸೇವೆಗೆ ಬರುತ್ತಿದ್ದಾರೆ. ಆದರೆ ಈಗಿನ ಭ್ರಷ್ಟಾಚಾರದ ಯುಗದಲ್ಲಿ ಅವರ ಪ್ರಾಮಾಣಿಕತೆಗೆ ಉಡುಗೊರೆ ವರ್ಗ, ಹಿಂಬಡ್ತಿ ಅದಕ್ಕೂ ಮಿಕ್ಕಿ ಅವರ “ಕೊಲೆ”. ಹೇಳಿ, ಹೀಗೆ ಕೊಲೆಯಾಗಿ ಜೀವತೊರೆದ ಅಂತಹ ಎಷ್ಟು ಪ್ರಾಮಾಣಿಕ ಅಧಿಕಾರಿಗಳ ಪರವಾಗಿ ಸತ್ಯಾಗ್ರಹಗಳಾಗಿದ? ಎಷ್ಟು case ಗಳಲ್ಲಿ ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆಯಾಗಿದೆ?

ಈಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ” ಶೂನ್ಯ”.

ನಿಮ್ಮಿಂದ ಇದುವರೆವಿಗೂ ರಾಜಕೀಯ ಪ್ರೇರಿತವಲ್ಲದ ಯಾವುದೇ ಕೆಲಸ, ಚಳವಳಿ, ಹರತಾಳ, ಸತ್ಯಾಗ್ರಹ, ಹೋರಾಟ,ಉಪವಾಸ ನಡೆದಿಲ್ಲ. ಅದು ನಡೆಯುವುದೂ ಇಲ್ಲ. ಇದು ನಮಗೂ ಗೊತ್ತು, ನಿಮಗೂ ಗೊತ್ತು. ಮನಃಸಾಕ್ಷಿ ಇರುವವರು ಮನುಷ್ಯರು ಅಂತಾದರೆ ನೀವು ಯಾರು ಎಂಬ ಪ್ರಶ್ನೆ ದೊಪ್ಪನೆ ಪ್ರೇತಾತ್ಮದಂತೆ ಎದ್ದು ನಿಲ್ಲುತ್ತದೆ. ಎಷ್ಟುದಿನ ನೀವು ನಿಮ್ಮತನವನ್ನು ಬದಿಗಿರಿಸಿ ಬೇರೆಯವರ ಬೂಟಿಗಾದ ಹೇಸಿಗೆಯನ್ನು ನಿಮ್ಮ ಬುದ್ಧಿವಂತ ನಾಲಗೆಯಿಂದ ಒರೆಸಿ ಅವರನ್ನು ಶುದ್ಧಹಸ್ತರು ಎಂದು ನಿರೂಪಿಸುತ್ತೀರಿ? ನಿಮಗೆ ಆತ್ಮಸಾಕ್ಷಿ ಎಂಬುದೇ ಇಲ್ಲವೇ? ಭಾರತದಲ್ಲಿ ನಿಜಕ್ಕೂ ನಿಮ್ಮಿಂದ ಯೋಚಿಸಬೇಕಾದ, ಯೋಜಿಸಬೇಕಾದ, ನಿಯೋಜಿಸಬೇಕಾದ ಕಾರ್ಯಗಳು ಬಹಳಷ್ಟಿವೆ. ನಿಮ್ಮತನದ ಅರಿವು ನಿಮಗೆ ಆದಷ್ಟು ಬೇಗ ಕರುಣಿಸಲಿ ಎಂದು ನಾನು ನಿತ್ಯನಮಿಸುವ ನನ್ನಮ್ಮ ಭಾರತಾಂಬೆಯಲ್ಲಿ ಹೂಅರ್ಪಿಸಿ ಬೇಡಿಕೊಳ್ಳುತ್ತೇನೆ.

guru photo

ಬರಹ : ಗುರುಪ್ರಸಾದ್‌ ದೇಸಾಯಿ (ಗುರು)
ಹವ್ಯಾಸಿ ಬರಹಗಾರರು

ಸಂವಾದ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...