Oyorooms IN

Monday, 24th July, 2017 10:01 PM

BREAKING NEWS

ಚಿಕ್ಕಮಗಳೂರು

ನಂಜುಂಡೇಶ್ವರ ಲಾಡ್ಜ್ ನಲ್ಲಿ ಗ್ರಾಹಕರ ಕೋಣೆಗೆ ಇದೆ “ಕಿಂಡಿ”..!!!

ಚಿಕ್ಕಮಗಳೂರು: ಕಡೂರು ಪಟ್ಟಣದ ಬಸ್ ಸ್ಟಾಂಡ್ ಬಳಿಯಿರುವ ನಂಜುಂಡೇಶ್ವರ ಲಾಡ್ಜ್ ನಲ್ಲಿ ಗ್ರಾಹಕರು ತಂಗುವ ರೂಮಿನ ಗೋಡೆಗೆ ರಹಸ್ಯವಾಗಿ ರಂಧ್ರ ಕೊರೆದು ರೂಮಿನೊಳಗೆ ನಡೆಯುತ್ತಿದ್ದನ್ನು ಕಳ್ಳಕಿಂಡಿ ಮೂಲಕ ಲಾಡ್ಜ್ ಸಿಬ್ಬಂದಿ ವಿಕ್ಷೀಸುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದ್ದು, ಲಾಡ್ಜ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ತಡರಾತ್ರಿ ಕಡೂರಿಗೆ ಬಂದ ಬಾಗಲಕೋಟೆ ಮೂಲದ ದಂಪತಿ ಬಸ್ ಸ್ಟಾಂಡ್ ಬಳಿಯಿರುವ ನಂಜುಂಡೇಶ್ವರ ಲಾಡ್ಜ್ ನಲ್ಲಿ ತಂಗಿದ್ದರು. ಇವರ ರೂಮ್ ಪಕ್ಕದಲ್ಲಿನ ಕೋಣೆಯಲ್ಲಿ ಲಾಡ್ಜ್ ಸಿಬ್ಬಂದಿ ಇದ್ದು, ಗೋಡೆಯಿಂದ ಬೆಳಕು ಬಂದಿದ್ದನ್ನು ಕಂಡ ದಂಪತಿ ಅನುಮಾನಗೊಂಡ ಪಕ್ಕದ ರೂಮಿನ ಬಾಗಿಲು ಬಡಿದಾಗ ಒಳಗಿದ್ದ ಸಿಬ್ಬಂದಿ ಆತಂಕದಿಂದ ಹೊರ ಹೋಗಿದ್ದಾರೆ.

ಬೆಳಿಗ್ಗೆ ಎದ್ದ ದಂಪತಿಗಳು ಸಿಬ್ಬಂದಿ ರೂಮಿಗೆ ಹೋಗಿ ಪರಿಶೀಲಿಸಿದಾಗ ಆ ಕೋಣೆಯಿಂದ ಪಕ್ಕದ ಕೋಣೆಯಲ್ಲಿ ನಡೆಯುವ ವಿದ್ಯಮಾನಗಳನ್ನೆಲ್ಲ ವೀಕ್ಷಿಸಲು ಅನುಕೂಲವಾಗುವಂತೆ ಎರಡು ರಹಸ್ಯ ರಂಧ್ರಗಳನ್ನು ಕೊರೆದಿರುವುದು ಕಂಡುಬಂದಿದೆ. ಕೂಡಲೇ ಆ ದಂಪತಿ ಕಡೂರಿನಲ್ಲಿದ್ದ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಅವರು ಕರವೇ ಕಾರ್ಯಕರ್ತರನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿದ್ದಾರೆ.

ಲಾಡ್ಜ್ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು. ಲಾಡ್ಜ್ ಮಾಲೀಕನನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಆತ ಸಿಕ್ಕಿಲ್ಲ, ನಂತರ ದಂಪತಿಗಳ ಸಂಬಂಧಿಕರ ಜೊತೆ ಕಡೂರು ಪೊಲೀಸ್ ಠಾಣೆಗೆ ಹೋದ ಕರವೇ ಕಾರ್ಯಕರ್ತರು ಲಾಡ್ಜ್ ಮಾಲೀಕರ ವಿರುದ್ಧ ಕಡೂರು ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

English summary: hole to lodge room karave protest

ಚಿಕ್ಕಮಗಳೂರು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...