Oyorooms IN

Tuesday, 25th April, 2017 1:59 PM

BREAKING NEWS

ಬಳ್ಳಾರಿ

ವಿಶೇಷವಾದ ಹಬ್ಬ ಹೋಳಿಗೆ-ಅಮ್ಮ

125
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರದಲ್ಲಿ ಆಚರಿಸಿದ ಈ ಹಬ್ಬವು ತಾಲೂಕಿನ ಸುತ್ತಮುತ್ತಲಿರುವ ಕೆಲವು ಮಾತ್ರ ಹಳ್ಳಿಗಳಲ್ಲಿ ಕಂಡುಬರುವ ಈ ವಿಶೇಷವಾದ ಹಬ್ಬ, ಬಿತ್ತನೆಯಾಗುವ ಸಮಯದಲ್ಲಿ ರೈತರು ಮಳೆ, ಬೆಳೆ ಚೆನ್ನಾಗಿ ಆಗಲಿ ಹಾಗೂ ಊರಿಗೆ ಶಾಂತಿ, ನೆಮ್ಮದಿ ನೆಲೆಸಿರಲಿ ಎಂದು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಯಾವುದೇ ನಿರ್ದಿಷ್ಟವಾದ ದಿನಾಂಕವೆಂದು ಇರದು..!

ತಾಲೂಕಿನ ಎಲ್ಲಾ ಊರುಗಳಲ್ಲಿ ಒಂದೇ ದಿನ ಆಚರಿಸದಿದ್ದರು, ಆಯಾ ಊರಿನ ಅನುಕೂಲಕ್ಕೆ ತಕ್ಕಂತೆ ಯಾವುದಾದರೊಂದು ಮಂಗಳವಾರ ಊರಿನ ಜನಸಮೂಹವೆಲ್ಲ ಸೇರಿ ಆಚರಿಸುವ ಈ ಹಬ್ಬದ ಹೆಸರು “ಹೋಳಿಗೆ-ಅಮ್ಮ”.

ಬಾಳೆಎಲೆಯಲ್ಲಿ ಮಣ್ಣಿನ ಕುಡಿಕೆ ಇಟ್ಟು ಅದರಲ್ಲಿ ಹೋಳಿಗೆಯ ಎಡೆಮಾಡಿ ಬೇವಿನ ಎಲೆಯ ಪತ್ರೆ ಮುಡಿಸಿ ಬಾಳೆಹಣ್ಣು, ತೆಂಗಿನಕಾಯಿ, ಹಸಿರು ಬಳೆಗಳನ್ನು ಇಟ್ಟು ಮನೆಯಲ್ಲಿ ಪೂಜೆಮಾಡಿಕೊಂಡು ಊರನ್ನು ಕಾಯುವ ದೇವರ ಮುಂದೆ ಈ ಪೂಜಾಎಲೆಗಳನ್ನು ಕೊಂಡೊಯ್ಯುದು ಊರಿನ ಪ್ರತಿಯೊಂದು ಮನೆಯವರು ತರುವವರೆಗೂ ಗುಡಿಬಳಿಯೆ ಕಾದಿದ್ದು ಎಲ್ಲಾರು ತಂದಾದಮೇಲೆ ಜನಗಳೆಲ್ಲ ಒಟ್ಟಾಗಿ ಆ ಪೂಜಾಎಲೆಗಳನ್ನ ಎತ್ತಿಕೊಂಡು ಊರಿನ ಆಚೆ ಇರುವ ದೇವಿಸ್ವರೂಪ ಎಂದು ಭಾವಿಸುವ ಬೇವಿನಮರ ಅಥವಾ ಬನ್ನಿಮರದ ಬಳಿ ಎಲ್ಲಾ ಪೂಜಾಎಲೆಗಳನ್ನ ಇರಿಸಿ, ಈ ವರ್ಷದ ಮಳೆ,ಬೆಳೆ ಸಂವೃದ್ದಿಯಾಗಿ ಆಗಲಿ ಎಂದು ಬೇಡಿಕೊಳ್ಳುತ್ತ ಊರಿಗೆ ಹಿಂತಿರುಗಿದರೆ ದೇವಿ ನಮ್ಮನ್ನ ಹಾಗೂ ಊರನ್ನ ಕಾಯುತ್ತಾಳೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿ ಕಂಡುಬರುವ ವಾಡಿಕೆ.

ಬಳ್ಳಾರಿ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...