Oyorooms IN

Monday, 24th July, 2017 10:10 PM

BREAKING NEWS

ಕಥೆ

ಹುಚ್ಚ ಮೆಚ್ಚಿದ ಹೂ

ma
ಮುಂಜಾನೆ ದಿನಾಲೂ ಆಗುವುದು.ಬೆಳಗಿನ ಕತ್ತಲು ಕಳೆದು ಬೆಳಕು ಹರಿದರೆ ಸಾಕು ಊರ ಮುಂದಿನ ಗುಡಿಗೆ ಭಕ್ತಿಯಿಂದ ನಮಸ್ಕಾರ ಮಾಡಿ ಗುಡಿಯ ಎದುರ ಮನೆಯ ಕಡೆಗೆ ಕಣ್ಣಾಡಿಸಿ ನೋಡಿದರೆ ದಿನಾಲು ರಂಗೋಲಿ ಹಾಕುತಿದ್ದ ಹುಡುಗಿ ಸಾಗರಿಯ ಸೌಂದರ್ಯದ ಸಿಡಿಲು ಎದೆಗೆ ಬಂದು ಬೆಂಕಿಯಂತೆ ಬಿಸಿ ಮುತ್ತು ನೀಡುವುಂತಾಗುತ್ತಿತ್ತು ಈ ಒಳ್ಳೆಯ ಹುಡುಗ ಸೃಜನ್ ಗೆ.ಇದು ದಿನಾಲೂ ಬೆಳಗಾಗುವ ಪ್ರಕೃತಿಯ ವಿಸ್ಮಯ ಎಷ್ಟು ನೈಜವೋ, ಹಾಗೆಯೇ    ಪ್ರತಿದಿನ ಗುಡಿಗೆ ಬಂದು ಕೈ ಮುಗಿದು  ರಂಗೋಲಿ ಹಾಕುತಿದ್ದ ಸಾಗರಿಯ ಸೌಂದರ್ಯ ಸವಿಯುತಿದ್ದ ಸೃಜನ್ ಗೆ ಇದುವೆ ಅವನ ಜೀವನದ ವೇಳಾಪಟ್ಟಿ ಆಗಿಬಿಟ್ಟಿತ್ತು, ಸಣ್ಣ ನಡುವಿನ ಸೌಂದರ್ಯ ಸಿರಿ ಸಂಪತ್ತನ್ನು ಇಂದ್ರನ ಅಸ್ಥಾನದ ಸುತ್ತ ನರ್ತಿಸುವ ನರ್ತಕಿಯರಾದ ರಂಬೆ ಊರ್ವಶಿ ಮೇನಕೆಯರಿಂದ ಬಳುವಳಿಯಾಗಿ ಪಡೆದುಕೂಂಡು ಬಂದಂತಿತ್ತು ಸಾಗರಿಯ ಚೆಲುವು. ಇಂತಹ ಮುದ್ದಾದ ಚಲುವೆಯನ್ನೊಮ್ಮೆ ಮಾತಾನಾಡಬೇಕೆಂಬ ಮಹದಾಸೆ ಸೃಜನ್ ಗೆ ಮಾತಿಗೆ ಯಾವಾಗ ಸಿಗುವಳು ಎಂದು ಪರಿತಪಿಸುತ್ತಾ ಕಂಗೆಟ್ಟು ಕುತಿದ್ದ ಸಾಗರಿಯ ಮನಸ್ಸು ಎಷ್ಟು ಪರಿಶುದ್ಧ ಎಂದರೆ ತನ್ನ ಸೌಂದರ್ಯದ ಬಗ್ಗೆ ಎಂದೂ ಬೀಗಿದವಳಲ್ಲ. ಸುತ್ತ ಮುತ್ತ ನನ್ನ ಯಾರು ಗಮನಿಸುತ್ತಿರುವವರು ಎಂದು ಪರಿಕ್ಷಿಸಿಕೊಂಡವಳಲ್ಲ ದಿನಾಲೂ ರಂಗೋಲಿ ಹಾಕುತಿದ್ದ ನನ್ನನ್ನು ಒಬ್ಬ ವ್ಯಕ್ತಿ ಗಮನಿಸುತ್ತಿರುವನು ಎಂಬ ಪರಿ ಜ್ಞಾನ ಇಲ್ಲದ ಮುಗ್ದಳು, ಸೃಜನ್ ವಿದ್ಯಾವಂತ ಹುಡುಗ ಆಗ ತಾನೆ ಇಂಜಿನಿಯರಿಂಗ್ ಮುಗಿಸಿ ಬಂದ ಹುಡುಗ, ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕಾಗಿ ಸಂದರ್ಶನ ನೀಡಿ ಬಂದಿದ್ದ, ಕೆಲ ದಿನಗಳು ನಂತರ ಕರೆ ಮಾಡಿ ತಿಳಿಸುತ್ತೇವೆ ಎಂದಿದ್ದರು ಕಂಪನಿಯವರು  ಆ ಕೆಲ ದಿನಗಳನ್ನು ಕಳೆಯಲು ಬಂದಿದ್ದ. ಸ್ವಚ್ಛ ಮನಸಿನ ಸುಂದರಿ ಸಾಗರಿಯ ಬೇಟಿಗಾಗಿ ಪ್ರತಿ ಕ್ಷಣ ಪರಿತಪಿಸುತ್ತಾ ಹಂಬಲಿಸುತ್ತಿದ್ದ ಸೃಜನ್. ಆ ಕಾಲ ದೂರವಿರಲಿಲ್ಲ  ಬಂದೆ ಬಿಟ್ಟಿತು ಗಳೆತಿಯ ಮನೆಗೆ ಬಂದಿದ್ದಳು ಸಾಗರಿ ಗೆಳತಿಯು ಬೇರಾರು ಅಲ್ಲ ಸೃಜನ್ ನ ಚಿಕ್ಕಪ್ಪನ ಮಗಳು ಆಗ ಮಾತ್ರ ಗಮನಿಸಿದ್ದು ಸೃಜನ್ ನನ್ನು  ಸಾಗರಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪರಿಶುದ್ಧ ಬಿಳಿಯ ಹಾಳೆಯ ಪುಟದಂತಿದ್ದ ಸಾಗರಿಯ ಮನಸಿನ ಪುಟದಲ್ಲಿ ಸೃಜನ್ ಬಿಂಬ ಹಚ್ಚುಹೊತ್ತಿದಂತೆ ಭಾಸವಾಗಿತ್ತು ಅಲ್ಲಿ ನೋಡಿ ಪ್ರೇಮ ಪುಳುಕಿತಗೊಂಡು ಬಂದ ಹುಡುಗಿ ಮರುದಿನ ಸೃಜನ್ ನ ನೋಡಿದ್ದು ಆದೇ ಗುಡಿಯ ಮುಂದೆ ನಸು ನಗುತ್ತಾ ನಿಂತಿದ್ದ.ಅವನ ನಗು ಕತ್ತಲಲಿ ಕಡ್ಡಿಗೀಚಿ ಹಚ್ಚಿದ ಹಣತೆಯ ಬೆಳಕಿನಂತಿತ್ತು
ಸಾಗರಿ ಚಿಕ್ಕದೂಂದು ನಗು ನೀಡಿ ಒಳಗೆ ಹೋದಳು
               ಹೀಗೆ  ನಗುವಿನೂಂದಿಗೆ ದಿನಾಲೂ ಮುಂದುವರೆಯುತ್ತಿದ್ದ ಮುಗ್ದ ಮುಖಗಳ ಮಂದಹಾಸ ಪ್ರೀತಿ ಮಾತನಾಡುವ ಹಂತಕ್ಕೆ ಬಂದ ದಿನವೇ ಸೃಜನ್ ಗೆ ಕೆಲಸದ ಆದೇಶ ಪತ್ರ ಬಂದಿತ್ತು ಸಂಜೆ ಹೊತ್ತಿಗೆ ಸೃಜನ್ ಸಾಗರಿಯನ್ನು ಬೇಟಿ ಮಾಡಿ ಪ್ರೇಮ ನಿವೇದನೆ ಮಾಡಿ ಹಾಗೆಯೇ ಕೆಲಸ ಸಿಕ್ಕಿದೆ ಎಂದು ತಿಳಿಸಿದ ಇದಕ್ಕೆ ಸಾಗರಿ ತುಂಬಾ ಇಷ್ಟ ಪಟ್ಟು ಮೆಚ್ಚಿ ಮುಗುಳು ನಗೆ ಬೀರಿ ಹೊರಟು ಹೋಗಿದ್ದಳು
ಮತ್ತೊಮ್ಮೆ ಸೃಜನ್ ಬೆಂಗಳೂರಿಗೆ ಹೊರಡುವ ದಿನ ಬೇಟಿ ಮಾಡಿ  ನನ್ನ ಸ್ನೇಹಿತನಿಗೆ ಪತ್ರ ಬರೆಯುತ್ತಿರುತ್ತೇನೆ ಅದನ್ನು ನಿನಗವನು ತೆರೆಯದೆ ತಂದು ನೀಡುತ್ತಾನೆ ಎಂದು ತಿಳಿಸಿ ನೆನಪಿಗೆಂದು ಜೇಬಿನಲ್ಲಿರುವ ಪೆನ್ನು ನೀಡಿ ನೀ ನನಗೆ ಪತ್ರ ಇದೇ ಪೆನ್ನಲ್ಲಿ ಬರೆದು ನನ್ನ ಸ್ನೇಹಿತನಿಗೆ ನೀಡು ನನಗವನು ತಲುಪಿಸುವನು ಎಂದು ಹೇಳಿ ಪ್ರೇಮ ಸೇತುವೆಗೆ ಸ್ನೇಹಿತನನ್ನು ಸಿದ್ದ ಮಾಡಿ  ನೆನಪುಗಳ ನೆನೆಯುತಾ ಹೊರಟುಹೋದ
ಇತ್ತ ಸಾಗರಿ ದಿನಾಲೂ ರಂಗೋಲಿ ಹಾಕುವಾಗ ಗುಡಿಯ ಘಂಟೆ ಬಾರಿಸಿದ ಶಬ್ದ ಕೇಳಿಸಿದಾಗೆಲ್ಲಾ ಮೈ ರೊಮಾಂಚಾನದಿಂದ ಕಣ್ಣರಳಿಸಿ ನೋಡಿ ನಿರಾಷಳಾಗುತ್ತಿದ್ದಳು ಕಾಯುತ್ತ ಕುಳಿತಿದ್ದಳು ಪತ್ರ ಬಂದೆ ಬಿಟ್ಟಿತು ಪತ್ರದ ಪ್ರಥಮ ಸಾಲು ಹೀಗಿತ್ತು ” ಭೂ ತಾಯಿಯ ಮಡಿಲೇ ಸಾಕ್ಷಿ ನೀನೇ ನಿನೇ ನನ್ನ ಜೀವ ” ಎಂದು ಇದನ್ನು  ಓದಿದ ಸಾಗರಿಯ ಮನಸು
ಹಾರಿ ಆಕಾಶ ಮುಟ್ಟಿತ್ತು . ನನಗೆ ತುಂಬಾ ಒಳ್ಳೆಯ ಕೆಲಸ ಸಿಕ್ಕಿಸಿಕ ತಿಂಗಳಿಗೆ 65000 ಸಂಬಳ ಮತ್ತೇ
ಊರಿಗೆ ಬಂದಾಗ ಖಂಡಿತವಾಗಿ ನಮ್ಮ ಪ್ರೀತಿಯ ವಿಷಯ ಮನೆಯವರಿಗೆ ಹೇಳಿ ಮದುವೆಯಾಗೋಣ ಎಂದು ತಿಳಿಸಿದ್ದ ನಿನ್ನ ಪತ್ರಕ್ಕಾಗಿ ಕಾಯುತಿರುವೆ ಎಂದು ಹೇಳಿದ್ದ ಇದಕ್ಕಾಗಿ
ಸಾಗರಿ ಮರು ಪತ್ರ ಬರೆದು ಸೃಜನ್ ಸ್ನೇಹಿತ ಸಂತೋಷ ನ ಕೈಗೆ ನೀಡಿದ್ದಳು ಇದರಂತೆ ಸಂತೊಷ
ಸೃಜನ್ ಗೆ ಪತ್ರ ತಲುಪಿಸಿದ್ದ ಹೀಗೆ ನಡೆಯುತಿತ್ತು ಪ್ರೇಮಿಗಳ ಪಯಣ.ಮುಂದೇ ಈ ಪಯಣದಲಿ ದೊಡ್ಡ ಮುಳ್ಳು ಬಿದ್ದಿತ್ತು ಅದು ಸೃಜನ್ ನ ಸ್ನೇಹಿತ ಸಂತೋಷ್ ನಿಂದ ಮೂರ್ನಾಲ್ಕು ಬಾರಿ ಪತ್ರ ಸರಿಯಾಗಿ ತಲುಪಿಸಿದ್ದ ಸಂತೋಷ್ ಒಂದು ಬಾರಿ ಪತ್ರ ಬಂದ ಕೂಡಲೇ ತೆಗೆದು ಓದಿ ತನ್ನ ಸ್ನೇಹಿತನ ಜೀವನದಲ್ಲಿ ಖಳನಾಯಕನಾಗಲು ಮುಂದಾದ ಸೃಜನ್ ಬರೆದು ಕಳುಹಿಸಿದ ಪತ್ರಗಳನ್ನು ತೆರೆದು ಓದಲು ಪ್ರಾರಂಭಿಸಿದ ಸೃಜನ್ ತನ್ನ ಪತ್ರದಲ್ಲಿ ತನ್ನ ಪ್ರೀಯತಮೆಯ ಸಿರಿ ಸೌಂದರ್ಯವನ್ನು ಕವಿಯಂತೆ ಹೊಗಳದ್ದ ಅದನ್ನು ಓದುತ್ತಾ ಸಂತೋಷ್ ಸಾಗರಿಯ ಸೌಂದರ್ಯದ ಸಿರಿಯನ್ನು ತನ್ನಲ್ಲಿ ಅನುಭವಿಸಿ ಊಹಿಸಲಾರದ ತಿರುವಿಗೆ ಜಾರಿದ್ದ ಸೃಜನ್ ಬರೆಯುವ ಪತ್ರ ತಾ ಓದಿ ಅದನ್ನು ಹರಿದು ತಾ ಒಂದು ಪತ್ರ ಬರೆದು ಸಾಗರಿಗೆ ತಲುಪಿಸಿದ್ದ ಸಂತೋಷ್  ಅದರಲ್ಲಿ ಹೀಗಿತ್ತು ” ಪ್ರೀತಿಯ ಸಾಗರಿ   ನನಗೆ ಕೆಲಸದಲ್ಲಿ ಬಡ್ತಿ ನೀಡಲಾಗಿದೆ ಹೆಚ್ಚಿನ ತರಬೇತಿಗೆ ಆಮೇರಿಕಾಕ್ಕೆ ಹೋಗಬೇಕಾಗಿದೆ ಇನ್ನೂ ಒಂದು ವಾರದ ನಂತರ ಹೋಗಲು ತಿಳಿಸಿದ್ದಾರೆ ಅಷ್ಟರಲ್ಲಿ ಒಂದು ಪತ್ರ ಕಳುಹಿಸು ಎಂದು ಇದನ್ನು ಓದಿದ ಸಾಗರಿ ಸಂತೋಷದಿಂದ ಓದಿ ಮರು ಪತ್ರ ಬರೆದು ಸೃಜನ್ ಗೆ ತುಂಬಾ ಸಂತೋಷ ನಿನ್ನ ಏಳಿಗೆಗೆ ನಾನು ಪ್ರೋತ್ಸಾಹ ನೀಡುವೆ ನಿನ್ನ ಪ್ರೀತಿಗೆ ಶರಣಾಗತಳಾಗಿ ಎಷ್ಟು ದಿನವಾದರೆ ಸರಿ ಕಾಯುವೆ ಬೇಗ ಬಾ ಎಂದು ಬರೆದು ಸಂತೋಷ್ ನಿಗೆ ಕೊಟ್ಟಳು ಅದನ್ನು ತೆಗೆದು ಕೊಂಡು ಹೋದ ಸಂತೋಷ್ ಓದಿ ಅದನ್ನು ಹರಿದು ಸಾಗರಿಯ ಹೆಸರಲಿ ” ನಮ್ಮ ಮನೆಯಲ್ಲಿ ನನ್ನ ಮದುವೆಗೆ ಸಿದ್ಧತೆ ನಡೆದಿದೆ ಆಮೇರಿಕಾ ಗೆ ಹೋಗಿ ಬೇಗ ಬಾ ಮಾತನಾಡು ಎಂದು ಬರೆದು ಕಳುಹಿಸುತ್ತಾನೆ.
                 ಅದನ್ನು ಓದಿದ ಸೃಜನ್ಆಮೇರಿಕಾ ಗೆ ಹೋಗಿ ಬಂದು ಮದುವೆಯ ವಿಷಯ ಕುರಿತು ಮಾತನಾಡಡಬೇಕು ಎಂದು ತಿರ್ಮಾನಿಸಿ ಹೊರಡುತ್ತಾನೆ. ಸೃಜನ್ ಆಮೇರಿಕಾ ಗೆ ಹೋಗಿ ಬರುವದರಲ್ಲಿ ಅವನ ರೂಮ್ ಗೆ  ಸಾಗರಿಯ ಹೆಸರಿನಲ್ಲಿ ಸಂತೋಷ್ ಬರೆದ ಪತ್ರ ಬಂದು ತಲುಪಿತ್ತು ಇತ್ತ ಸಾಗರಿಗೆ ಸೃಜನ್  ಹೆಸರಿನಲಿ ಸಂತೋಷ್ ಬರೆದ ಪತ್ರ ಬಂದು ತಲುಪಿತ್ತು
ma1
ಪರಸ್ಪರ ಪತ್ರಗಳಲ್ಲಿ ಹೀಗಿತ್ತು
ಸೃಜನ್ ಪತ್ರ
                 ಪ್ರೀತಿಯ ಸಾಗರಿ ನನ್ನನ್ನು ದಯವಿಟ್ಟು ಕ್ಷಮಿಸಿ ನಾನು ಅಮೆರಿಕಾಗೆ ಹೋದಾಗ ನನ್ನ ಜೊತೆ ಬಂದ ನನ್ನ ಸಹೋದ್ಯೋಗಿ ಚೈತ್ರ ನನಗೆ ತುಂಬಾ ಇಷ್ಟವಾಗಿರುವಳು ಅವಳಿಗೂ ಕೂಡ ನನ್ನಷ್ಠೇ ಒಳ್ಳೆಯ ಕೆಲಸ ಕೈ ತುಂಬಾ  ಸಂಬಳ ಅವರ ಮನೆಯವರಿಗೂ ನಾನು ತುಂಬಾ ಇಷ್ಟವಾಗಿದ್ದೇನೆ.ಅದರಿಂದ ಮುಂದಿನ ವಾರ ನಮ್ಮ ಮದುವೆ ಇದಕ್ಕೆ ನಮ್ಮ ಮನೆಯಿಂದ ಒಪ್ಪಿಗೆ ನೀಡಿದೆ ದಯವಿಟ್ಟು ನಮ್ಮಿಬ್ಬರ ಮಧ್ಯೆ ಇಷ್ಟು ದಿನ ಕಳೆದ ಈ ಆಕರ್ಷಣೆಯನ್ನು ಕನಸೆಂದು ಭಾವಿಸಿ ನನ್ನನು ಮರೆತು ಬಿಡಿ .ಇಂತಿ ನಿಮ್ಮ ಕೆಲವು ದಿನಗಳ ಗೆಳೆಯ.
           ಈ ಪತ್ರ ಓದಿದ ಸಾಗರಿಯ ಎದೆ ಗದ್ಗತೀತವಾಗಿತ್ತು
                 ಇತ್ತ ಸಾಗರಿಯ ಹೆಸರಿನಲಿ ಸಂತೋಷ್ ಬರೆದ ಪತ್ರ ಹೀಗಿತ್ತು
                ಪ್ರೀತಿಯ ಸೃಜನ್ ಭೂ ತಾಯಿಯ ಮಡಿಲ ಸಾಕ್ಷಿ ನೀವೇ  ನನ್ನ ಜೀವ ಆದರೂ ಮನೆಯವರ ಒಮ್ಮತದ ಮೇರೇಗೆ ನನಗೆ ಪ್ರಸಿದ್ಧ ಡಾಕ್ಟರ್ ಮನೆಯ ಸೋಸೆಯಾಗುವ ಅದೃಷ್ಟ ಒದಗಿ ಬಂತು ಮನೆಯವರು ಈ ಸಂಬಂಧವನ್ನು ತುಂಬಾ ಇಷ್ಟ ಪಟ್ಟು ಮೆಚ್ಚಿದರು ನಾನು ಅನಿವಾರ್ಯವಾಗಿ ಮುದುವೆ ಮಾಡಿಕೊಳ್ಳಲೇ ಬೇಕಾಯಿತು ನಮ್ಮ ಈ ಕೆಲವು ದಿನಗಳ ಪ್ರೀತಿಯನ್ನು ಕನಸೆಂದು ಭಾವಿಸಿ ನನ್ನನು ಮರೆತು ಬಿಡಿ ಎಂದು ಹೇಳಲಾಗಿತ್ತು
      ಇದನ್ನು ಓದಿದ ಸೃಸೃಜನ್ ಗೆ ದಿಕ್ಕು ತೋಚದಂತಾಗಿತ್ತು
ಅಮರ ಪ್ರೇಮಿಗಳ ಹೃದಯಗಳಿಗೆ  ಪರಸ್ಪರ ಪತ್ರಗಳಲಿ ಬಾಣ ಬಿಟ್ಟು ಬೇರೆ ಬೇರೆ ಮಾಡುವ ಈ ಮಿತ್ರ ದ್ರೋಹಿಯ ಉದ್ದೇಶ ದುಃಖದಲ್ಲಿರುವ ಸಾಗರಿಯ ಮನಸ್ಸಿಗೆ ಸಾಂತ್ವನ ಹೇಳಿ ತಾ ವಲಿಸಿಕೊಳ್ಳಲು ಮುಂದಾಗಿದ್ದ. ಇದರಂತೆ ಸೃಜನ್ ಸಾಗರಿ ಇಬ್ಬರಲಿನ ಪ್ರೇಮದ ಪಕ್ಷಿ ಹಾರಿ ಹೋಗಿ ಯಾರು ಸುಳಿಯದ ನಿರ್ಜನ ಪ್ರದೇಶದಲ್ಲಿ ಕುಳಿತು ದುಃಖಿಸುತ್ತಿತ್ತು.ಈ ಮನೋವ್ಯಾದಿಯು ಸೃಜನ್ ನನ್ನು   ಹುಚ್ಚನಂತೆ ಪರಿವರ್ತಿಸುತ್ತದೆ ಕುಡಿತಕ್ಕೆ ದಾಸನಾಗಿ ಸೃಜನ್ ಕೆಲಸಕ್ಕೆ ಸಹ ಹೋಗದೇ ಸಾಯಲೆತ್ನಿಸುತ್ತಾನೆ ಇತ್ತ ಸಾಗರಿ ದುಃಖಸಾಗರದಲಿ ಮುಳುಗಿ ಸಾಯುವ ಸ್ಥಿತಿಗೆ ಬಂದಿದ್ದಳು.ಇದನ್ನು ಗಮನಿಸಿದ ಸಂತೋಷ್ ಸಾಗರಿಯನು ಕಂಡು ಸಾಂತ್ವನ ಹೇಳಿ ನಾ ನಿನ್ನ ಕೈ ಹಿಡಿದು ರಾಣಿಯಾಗಿ ನೋಡಿಕೊಳ್ಳುವೆ  ಆಗಿದ್ದು ಮರೆತು ನನ್ನ ಜೋತೆ ಹೋಸ ಜೀವನ ಪ್ರಾರಂಭಿಸಿ ನಾ ನಿನ್ನ ಮನಸಾರೆ ಪ್ರೀತಿಸುವೆ ಎಂದು ಹೇಳುವನು .ಇದಕ್ಕೆ ಸಾಗರಿ ಒಂದು ಸುಂದರ ಹೂವನ್ನು ಒಬ್ಬರು ಮಾತ್ರ ಮುಡಿಯಲು ಅರ್ಹರು ಅದು ಸೃಜನ್ ಮಾತ್ರ ಅವನಿಗೆ ಸಲ್ಲದ ನನ್ನ ಪ್ರೇಮದ ಹೂ ಇನ್ನಾರಿಗೂ ಸಲ್ಲದು ಎಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಮುಡಿಗೇರದ ಹೂ ಮಸಣಕೆ ಹೊರಟಿತು ಇತ್ತ ಸೃಜನ್ ಸಾಯುವುದಾದರೆ ಸಾಗರಿಯ ಮುಖವನ್ನೊಮ್ಮೆ ನೋಡಿ ನನ್ನೂರಿನಲಿ ಸಾಯುವೆನೆಂದು ಸಾಗರಿಗೆ ಒಂದು ಮೊಳ ಮಲ್ಲಿಗೆ ಹೂವು ಒಂದು ಗುಲಾಬಿ ಹೂ ಕಾಣಿಕೆ ನೀಡಿ ಯಾವಾಗಲು ಈ ಹೂವಿನಂತೆ ನಗುತಿರು ಎಂದು ಹೇಳಲು ಬರುತ್ತಾನೆ ಆಗ ಅವನಿಗೆ ಕಾಣುವುದು ಮಡಿದ ಪ್ರೀತಿ ಮಸಣಕೆ ಸಾಗುತಿರುವುದು ಇದನ್ನು ಕಂಡಾ ಸೃಜನ್ ಸಾಗರಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಅಳುತ್ತಾನೆ ಸೃಜನ್ ನ ನರಳಾಟವನ್ನು ಹಾರಿ ಹೋದ ಸಾಗರಿಯ ಪ್ರಾಣ ಪಕ್ಷಿ ಆಕಾಶದಲ್ಲಿ ಕಣ್ಣಿರಿಡುತ್ತಾ ಹಂಬಲಿಸುತಿತ್ತು ಕಾಣದ ಕಡಲಿಗೆ ಹಂಬಲಿಸುವ ಮನದಂತೆ ಕಾಣಿಕೆಯಾಗಿ ಕೊಡಲೆಂದು ತಂದ ಹೂವನ್ನು ಸಾಗರಿಯ ಚಿತೆಯ ಮೆಲಿಟ್ಟು ಸೃಜನ್ ನ ಪ್ರಾಣ ಪಕ್ಷಿ ಸಾಗರಿಯ ಪ್ರೇಮ ಪಕ್ಷಿಯನ್ನು ಹುಡುಕುತ್ತಾ ಹೊರಟಿತ್ತು
ಇತ್ತ ಮಿತ್ರ ದ್ರೊಹಿಯು ಯಾರಿಗೂ ಕಾಣದೆ ಊರು ಬಿಟ್ಟು ಓಡಿ ಹೋಗಿದ್ದ.
ಈ ಭೂಮಿಯಲ್ಲಿ ಕೊನೆಗೂ ಇವರ ಪ್ರೇಮ ಉಳಿದಿರಲಿಲ್ಲ ಉಳಿದಿದ್ದು ಒಂದೇ…………. ಅದು
ಈ ಹುಚ್ಚು ಪ್ರೇಮಿ ಮೆಚ್ಚಿ ತಂದ ಹೂ……
” ಹುಚ್ಚ ಮೆಚ್ಚಿದ ಹೂ “
ಮಲ್ಲೇಶ್ ಯಳವಳ್ಳಿ  ಓಬಳಾಪುರ  ಬಳ್ಳಾರಿ ಜಿಲ್ಲೆ
ಮಲ್ಲೇಶ್ ಯಳವಳ್ಳಿ
ಓಬಳಾಪುರ ಬಳ್ಳಾರಿ ಜಿಲ್ಲೆ

ಕಥೆ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...