Oyorooms IN

Saturday, 21st January, 2017 7:37 AM

BREAKING NEWS

ವಿದೇಶ

ನನ್ನ ಬಳಿಯಿರುವ ಅರ್ಧ ಬಟ್ಟೆ “ಕದ್ದಿರೋದೇ” ಅಂದ ನಟಿ ಮಣಿ..!!

KIM

ಲಾಸ್ ಏಂಜಲೀಸ್: ಅವರು ಹಾಕಿಕೊಳ್ಳುವ ಬಟ್ಟೆ ಸ್ಟೈಲಿಷ್ ಆಗಿರುತ್ತೆ, ಅವರು ಇಲ್ಲದ ವೇಳೆಯಲ್ಲಿ ಅವನ್ನು ಕದ್ದು ನಾನು ಹಾಕಿಕೊಳ್ಳುತ್ತೇನೆ ಎಂದು ಹಾಲಿವುಡ್ ಹಾಟ್ ಬ್ಯೂಟಿ ಕಿಮ್ ಕರ್ದಾಶಿಯನ್, ತಮ್ಮ ಮನದಾಳದ ರಹಸ್ಯವನ್ನು ಹೊರಹಾಕಿದ್ದಾರೆ. ಹಾಗಂತ ಇವ್ರು ಬೇರೆಲ್ಲೂ ಕದಿಯೋದಿಲ್ಲ, ಇವರು ಕದ್ದಿರೋದು ಅವರ ಗಂಡನ ಬಟ್ಟೆಗಳನ್ನು ಮಾತ್ರ.

ಹಾಲಿವುಡ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್, ರ್ಯಾಪರ್ ಕೆನ್ಯೆವೆಸ್ಟ್ ಅವರೊಂದಿಗೆ ಡೇಟಿಂಗ್ ಮಾಡಲು ಶುರುಮಾಡಿದ ನಂತರವಷ್ಟೇ ಅವರಿಗೆ ತಮ್ಮ ಡ್ರೆಸಿಂಗ್ ಸೆನ್ಸ್ ಜಾಸ್ತಿ ಆಗಿದ್ದು, ಆ ನಂತರವೇ ನನ್ನ ಡ್ರೆಸಿಂಗ್ ಸ್ಟೈಲ್ ಬದಲಾಗಿದ್ದು ಅಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.

KIM_KARDARSHIN

ದಿನವೂ ವೆಸ್ಟ್ ಹಾಕುವ ಬಟ್ಟೆಗಳನ್ನು ಕದಿಯೋದು ನನಗೆ ಅಭ್ಯಾಸವಾಗಿದೆ, ನನ್ನ ಬಳಿಯಿರುವ ಅರ್ಧದಷ್ಟು ಬಟ್ಟೆಗಳು ವೆಸ್ಟ್ ಅವರದೇ, ಉಳಿದವು ನನ್ನವೂ, ವೆಸ್ಟ್ ಟೇಸ್ಟ್ ಚೆನ್ನಾಗಿದೆ, ಬಟನ್ಸ್ ಇರುವ ಡೆನಿಮಾ ಷರ್ಟ್ಸ್ ನಲ್ಲಿ ನಾನು  ತುಂಬಾ ಚೆನ್ನಾಗಿ ಕಾಣುತ್ತೇನೆ ಎಂದು ಕಿರುನಗೆ ಚೆಲ್ಲುತ್ತಾಳೆ ಕಿಮ್.

English summary:  I steal kanye shirts on daily basis says kim kardashian.

ವಿದೇಶ ಇನ್ನಷ್ಟು

ಪ್ರಮುಖ ಸುದ್ದಿಗಳು