Oyorooms IN

Wednesday, 29th March, 2017 8:53 PM

BREAKING NEWS

ತುಮಕೂರು

ತುಮಕೂರು ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿಗೆ ಕಾರಣ ಅದೇನಾ..?

ತುಮಕೂರು: ನೋಟು ರದ್ದುಗೊಳಿಸಿ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡ ನಂತರ ದೊಡ್ಡ ಮೊತ್ತದ ಹಣ, ಬ್ಲ್ಯಾಕ್ ಮನಿದಾರರು ತಮ್ಮ ಹಣವನ್ನು ಸುರಕ್ಷಿತವಾಗಿಸಿಕೊಳ್ಳಲು ಸಹಕಾರಿ ಬ್ಯಾಂಕ್ ಗಳ ಮೊರೆ ಹೋಗಿರುವುದು ಸುಳ್ಳಲ್ಲ, ದೇಶಾದ್ಯಂತ ಇರುವ ಸಹಕಾರಿ ಬ್ಯಾಂಕ್ ಗಳಲ್ಲಿ ದೊಡ್ಡ ಮೊತ್ತದ ಹಣ ಜಮೆಯಾಗಿರುವುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ.

ತುಮಕೂರು ಡಿಸಿಸಿ ಬ್ಯಾಂಕ್ ಮೇಲೆ ನಿನ್ನೆಯಷ್ಟೇ ಐಟಿ ದಾಳಿ ನಡೆಸಿದ್ದು, ಬ್ಯಾಂಕ್ ನಲ್ಲಿ ಏನೆಲ್ಲಾ ಸಿಕ್ಕಿತು? ದಾಖಲೆಗಿಲ್ಲದ ಹಣ ಎಷ್ಟು ಎನ್ನುವುದು ಬಯಲಿಗೆ ಬಂದಿಲ್ಲ, ಈ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲವಾದರೂ, ಡಿಸಿಸಿ ಬ್ಯಾಂಕ್ ಮೇಲೆ ನಡೆದ ದಾಳಿಯ ಹಿಂದೆ ಷಡಂತ್ಯ ಇದೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಮಿಷನ್ 150 ಕಾರ್ಯಾಚರಣೆ ನಡೆಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಮುಂದಿನ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು, ಸಿಎಂ ಸಿದ್ದರಾಮಯ್ಯ ಅವರನ್ನು ಒಂಟಿಯಾಗಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಆಪ್ತ ಅಧಿಕಾರಿಗಳ ಮೇಲೆ ನಡೆದ ಐಟಿ ದಾಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಇಬ್ಬರು ಸಚಿವರ ಹೆಸರು ತಳುಕು ಹಾಕಿಕೊಂಡಿತ್ತು, ಈಗ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರ ಮೇಲೆ ಬಿಜೆಪಿ ಐಟಿ ಇಲಾಖೆ ಮೂಲಕ ದಾಳಿ ನಡೆಸಿದೆ ಎನ್ನಲಾಗುತ್ತಿದೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಕೆ.ಎನ್.ರಾಜಣ್ಣ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿ ಇದ್ದಾಗಿನಿಂದಲೂ ರಾಜಣ್ಣ ಆತ್ಮೀಯರು, ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರನ್ನು ಮೂದಲಿಸುವಷ್ಟು ಆತ್ಮೀಯತೆಯನ್ನು ಕೆ.ಎನ್.ರಾಜಣ್ಣ ಅವರು ಹೊಂದಿದ್ದಾರೆ ಎನ್ನುವುದು, ಕೆ.ಎನ್.ರಾಜಣ್ಣ ಅವರ ಸಲಹೆಗಳನ್ನು ಸಿಎಂ ಸಿದ್ದರಾಮಯ್ಯ ಸುಲಭವಾಗಿ ತೆಗೆದುಹಾಕುವುದಿಲ್ಲ ಎನ್ನುವುದು ರಾಜಕೀಯವಲಯದಲ್ಲಿರುವ ಸತ್ಯ.

ತುಮಕೂರಿನಲ್ಲಿ ಬಿಜೆಪಿ ಅರಳಲು ಐಟಿ ದಾಳಿ ಸಹಾಯಕವಾಗಲಿದೆ ಹಾಗಾಗಿಯೇ ಪ್ರಭಾವಿ ಶಾಸಕರಾಗಿರುವ ಕೆ.ಎನ್.ರಾಜಣ್ಣ ಅವರನ್ನು ಐಟಿ ದಾಳಿಯಲ್ಲಿ ಸಿಕ್ಕಿಸುವ ಯತ್ನ ನಡೆದಿದೆ ಎನ್ನುವ ಅನುಮಾನಗಳನ್ನು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ. ಐಟಿ ಮೂಲಕವೇ ಕಾಂಗ್ರೆಸ್ ಬೆನ್ನು ಮುರಿಯಲು ಬಿಜೆಪಿ ಮುಂದಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇವೆಲ್ಲಾ ಅಂತೆ ಕಂತೆಗಳ ನಡುವೆ ನವೆಂಬರ್ 8ರಿಂದ ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಸರಿ ಸುಮಾರು 100 ಕೋಟಿಗೂ ಹೆಚ್ಚು ಹಣ ವಿವಿಧ ಸಹಕಾರಿ ಸಂಘಗಳ ಮೂಲಕ ಹರಿದು ಬಂದಿದೆ ಎನ್ನುವ ಮಾತುಗಳು ಹೇಳಿಬಂದಿದ್ದು, ಹಣವನ್ನು ಡಿಪಾಜಿಟ್ ಮಾಡಿಸಿಕೊಂಡಿದ್ದನ್ನು, ಆರ್ ಬಿಐ ಬದಲಾಯಿಸಿ ಕೊಡಲು ಹಿಂದೇಟು ಹಾಕಿದ್ದರಿಂದ ಒಂದಷ್ಟು ಹಣ ಡಿಸಿಸಿ ಬ್ಯಾಂಕ್ ನಲ್ಲಿಯೇ ಉಳಿದು ಕೊಂಡಿತ್ತು ಎನ್ನಲಾಗುತ್ತಿದೆ, ಅಷ್ಟೇ ಅಲ್ಲದೆ ಹಣ ಬದಲಾಯಿಸಿಕೊಡಲು ಸಹಕಾರ ನೀಡಿದ 15 ನೀಡಿದ ಮ್ಯಾನೇಜರ್ ಗಳನ್ನು ಸಸ್ಪೆಂಡ್ ಸಹ ಮಾಡಲಾಗಿತ್ತು ಎನ್ನುವ ಮಾತುಗಳು ತುಮಕೂರಿನಲ್ಲಿ ದಟ್ಟವಾಗಿ ಕೇಳಿಬಂದಿತ್ತು.

ಈ ಎಲ್ಲಾ ಅಂತೆ ಕಂತೆಗಳ ನಡುವೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಮಧ್ಯಾಹ್ನದಿಂದ ಡಿಸಿಸಿ ಕೇಂದ್ರ ಕಚೇರಿಯಲ್ಲಿ ತಪಾಸಣೆ ನಡೆಸಿದ್ದು, ತುಮಕೂರು ಸಹಕಾರಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆಯೇ? ಈ ಅವ್ಯವಹಾರದ ಕುಣಿಕೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸುತ್ತಿಕೊಳ್ಳುವುದೇ? ಎನ್ನುವ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳೇ ಉತ್ತರ ನೀಡಬೇಕಿದೆ.

English summary:  Income tax raid on tumakuru dcc bank

ತುಮಕೂರು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...