Oyorooms IN

Thursday, 17th August, 2017 5:01 PM

BREAKING NEWS

ರಾಯಚೂರು

ಆದಾಯ ತೆರಿಗೆ ವಂಚನೆ:ನವೋದಯ ಶಿಕ್ಷಣ ಸಂಸ್ಥೆ ಶ್ರೀಧರ ರೆಡ್ಡಿ ವಿರುದ್ಧ  ನೋಟಿಸ್ ಜಾರಿ

19

ರಾಯಚೂರು: ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಾರಾಯಣ ಪೇಟೆ ಶಾಸಕ ಎಸ್.ಆರ್.ರೆಡ್ಡಿ ಅವರ ವಿರುದ್ಧ ತೆರಿಗೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

2015ರಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ದಾಖಲೆಯಿಲ್ಲದ 19ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಕಚೇರಿಯ ಮೇಲೆ ದಾಳಿ ಮಾಡಿ ಹಾರ್ಡ್‌ಡಿಸ್ಕ್ ವಶಪಡಿಸಿಕೊಳ್ಳಲಾಗಿತ್ತು. ಅದನ್ನು ಪರಿಶೀಲಿಸಿದಾಗ ಕಾಲೇಜಿನ ವಿದ್ಯಾರ್ಥಿಗಳಿಂದ 4.13ಕೋಟಿ ಡೊನೇಶನ್ ತೆಗೆದುಕೊಂಡು ಆದಾಯ ತೆರಿಗೆಯನ್ನೂ ಕಟ್ಟದೇ ಸಂಸ್ಥೆಗೂ ಕೂಡ ಕಟ್ಟದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಗಡಿಭಾಗದ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ಕಾಲೇಜು ಬಿಡುಗಡೆಯಾಗಿದ್ದು, ಶೇ.50ರಷ್ಟು ವಿದ್ಯಾರ್ಥಿಗಳಿಗೆ ಡೊನೇಶನ್ ತೆಗೆದುಕೊಳ್ಳಬಾರದೆಂದು ನಿಯಮವಿದ್ದರೂ ಕೂಡ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 1ಕೋಟಿ ರೂ. ಹಣವನ್ನು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಜೊತೆಗೆ ನವೋದಯ ಶಿಕ್ಷಣ ಸಂಸ್ಥೆ ಸಿಬ್ಬಂದಿಯ ಸಂಬಳದಲ್ಲಿ ಆದಾಯ ತೆರಿಗೆ ಕಟ್ಟಲು ಟಿಡಿಎಸ್ ಮೂಲಕ ಮುರಿದುಕೊಂಡು 84ಲಕ್ಷ ರೂ. ಹಣದ ಬಗ್ಗೆ ನಿಖರ ಲೆಕ್ಕಪತ್ರ ನೀಡದ ಕಾರಣ ಎಸ್.ಆರ್.ರೆಡ್ಡಿ ಅವರ ವಿರುದ್ಧ ತೆರಿಗೆ ವಂಚನೆ ಮೊಕದ್ದಮೆ ದಾಖಲಿಸಲಾಗಿದೆ.

4.13ಕೋಟಿ ರೂ. ತೆರಿಗೆ ವಂಚನೆ, ಹಿಂದೆ ವಶಪಡಿಸಿಕೊಂಡ 19ಕೋ.ರೂ ಸಂಗ್ರಹದ ಬಗ್ಗೆ ಕುರಿತು ಮಾಹಿತಿ ನೀಡದೇ ಇರುವುದು ಮತ್ತು ಚಾರ್ಟರ್ಡ್ ಅಕೌಂಟೆಂಟ್ ವೆಂಕಟೇಶ ಅವರು ಸುಳ್ಳು ಮಾಹಿತಿ ನೀಡಿದ ಕಾರಣ ಹುಬ್ಬಳ್ಳಿ ವಲಯದ ಆದಾಯ ತೆರಿಗೆ ಆಯುಕ್ತ ಖಾಸಗಿ ದೂರನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

ದೂರನ್ನು ದಾಖಲಿಸಿಕೊಂಡ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯವಾದಿ ಆರತಿ ಕಾಮ್ಟೆ ಆರೋಪಿಗಳಿಗೆ ನೋಟಿಸ್ ಜಾರಿಮಾಡಿ ಮುಂದಿನ ವಿಚಾರಣೆಯನ್ನು ಜನವರಿ 5ಕ್ಕೆ ನಿಗದಿಪಡಿಸಿದ್ದಾರೆ.

ಮೋಸ ಪ್ರಕರಣ ದಾಖಲಾಗಿರುವುದರಿಂದ ಆರೋಪಿಗಳಿಗೆ ೩-೭ವರ್ಷ ಸಜೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.

ರಾಯಚೂರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...