Oyorooms IN

Monday, 20th February, 2017 4:18 AM

BREAKING NEWS

ಕ್ರೀಡೆ

ರವೀಂದ್ರ ಜಡೇಜಾ ಸ್ಪಿನ್ ಮೋಡಿ, ಭಾರತಕ್ಕೆ ಸರಣಿ ಜಯ

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಐದನೇ ಮತ್ತು ಕೊನೆಯ ಪಂದ್ಯವನ್ನು ಇನ್ನಿಂಗ್ ಮತ್ತು 75 ರನ್ ಗಳಿಂದ ಗೆದ್ದ ಭಾರತ, ಸರಣಿಯನ್ನು 4-0 ಅಂತರದಿಂದ ಗೆದ್ದಿದೆ. ಮೊದಲ ಇನ್ನಿಂಗ್ಸ್ ನಲ್ಲಿ 282 ರನ್ ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಇಂದು ಎರಡನೇ ಇನ್ನಿಂಗ್ ಬ್ಯಾಟಿಂಗ್ ಮುಂದುವರೆಸಿ, ನಿಯಮಿತ ಸಮಯದಲ್ಲಿ ವಿಕೆಟ್ ಕಳೆದುಕೊಂಡು ಭಾರತದ ಗೆಲುವನ್ನು ಸುಲಭವಾಗಿಸಿದೆ.

ಭಾರತದ ಕಡೆ ರವೀಂದ್ರ ಜಡೇಜಾ 7 ವಿಕೆಟ್ ಕಬಳಿಸಿ, ಅಮೋಘ ಬೌಲಿಂಗ್ ಮಾಡಿದ್ದರೆ, ಉಮೇಶ್ ಯಾದವ್, ಇಶಾಂತ್ ಶರ್ಮ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಿನದಾಟ ಮುಗಿಯಲು ಇನ್ನು ಕೇವಲ 7 ಓವರ್ ಗಳು ಉಳಿದಿದ್ದಾಗ, ಜಡೇಜಾ ಬೌಲಿಂಗ್ ನಲ್ಲಿ, ಕರುಣ್ ನಾಯರ್ ಹಿಡಿದ ಕ್ಯಾಚ್ ನಿಂದ ಕೊನೆಯ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಭಾರತೀಯ ಆಟಗಾರರ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ನೆನ್ನೆ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಗಳಿಸಿ, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 759 ರನ್ ಗಳ ದೊಡ್ಡ ಮೊತ್ತವನ್ನು ಪೇರಿಸಲು ಸಹಕರಿಸಿದ್ದರು. ಮತ್ತೊಬ್ಬ ಕನ್ನಡಿಗ ಕೆ ಎಲ್ ರಾಹುಲ್ ಕೂಡ 199 ರನ್ ಗಳಿಸಿದ್ದರು. ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...