Oyorooms IN

Sunday, 20th August, 2017 10:52 PM

BREAKING NEWS

Columns

“ದೇಶ ಭಕ್ತಿಯನ್ನು ಮರೆತ ಅಂದ ಭಕ್ತರ ಮಧ್ಯೆ”

4

ಸ್ವತಂತ್ರ ಭಾರತದ ಎಲ್ಲಾ ಮಾಜಿ ಪ್ರಧಾನಿಗಳು ಅವರ ಕಾಲಾವಧಿಗೆ ದೇಶ ಇದ್ದ ಪರಿಸ್ಥಿತಿಗೆ ತಕ್ಕಂತೆ ಸಮರ್ಥವಾಗಿ ದೇಶವನ್ನಾಳಿದ್ದಾರೆ. ಅವರು ಮುನ್ನಡಿಸಿಕೊಂಡು ಬಂದಿದ್ದಕ್ಕಲ್ಲವೇ ಇಂದು ನಮ್ಮ ದೇಶ ಬಲಿಷ್ಟವಾಗಿ ಬೆಳೆದು ನಿಂತಿರುವುದು. 1947 ರಲ್ಲಿ ಭಾರತ ಸ್ವಾತಂತ್ರಗೊಂಡ ನಂತರ ಇವಂತಿನಂತೆ ಅವತ್ತು ಈ ದೇಶ ಬೆಳೆದು ನಿಂತಿದ್ದರೇ ನೇಹರು ಬೇರೆಯ ರೀತಿಯಲ್ಲೇ ಇಂದು ನಮಗೆ ಪರಿಚಯವಾಗುತ್ತಿದ್ದರು. “ಹುಟ್ಟಿದ ತಕ್ಷಣ ಯಾವ ಮಗು ನಡೆದಾಡುವುದಿಲ್ಲ” ತೊದಲು ನುಡಿಯುತ್ತ, ಹಂಬೆ ಗಾಲನ್ನಿಟ್ಟು ಎಡವಿ ಬಿದ್ದು ಹೇಗೊ ಎದ್ದು ಮತ್ತೆ ನಡೆಯುವುದನ್ನು ಕಲಿತಂತೆ, ಈ ದೇಶವೆಂಬ ಕೂಸು ನಡೆಯುವುದನ್ನು ಕಲಿತು ಇಂದು ಯೌವನವೆಂಬ ಹುಚ್ಚು ಹೊಳೆಯಲ್ಲಿ ಈಜುತಿತ್ತು. ಆ ಹೊಳೆಗೆ ಅಣೆಕಟ್ಟು ಕಟ್ಟಲಾಗಿದೆ ಅಷ್ಟೆ ಈಗ. ಕಟ್ಟಿದ ಅಣೆಕಟ್ಟಿನ ಆಯುಷ್ಯ ಇಂದು ನಿರ್ಧರಿಸಲಾಗದು. ಯೌವನದಲ್ಲಿದ್ದಾಗ ಯುವಕ ಯಾವುದಕ್ಕು ಬಗ್ಗುವುದಿಲ್ಲ, ಅದು ಬಿಸಿ ರಕ್ತದ ಜ್ವಾಲಮುಖಿಯ ಖಣಜ. ಅದಕ್ಕೆ ಚಿಮ್ಮುವುದು ಮಾತ್ರ ಗೊತ್ತು ಚಿಮ್ಮುತ್ತದೆ. ಅದನ್ನು ಬಿಟ್ಟು ನಮ್ಮಿಂದಲೇ ಹಾಗಿದ್ದು ಎಂದುಕೊಂಡು ತಮ್ಮ ಬುಜವನ್ನ ತಾವೇ ತಟ್ಟಿಕೊಂಡಗೆ ಅದಕ್ಕೆ ಯಾರಾದರೂ ಗೆಲುವು ಎನ್ನುವರೇ?

5

1947 ಜನಿಸಿ ಮಗುವನ್ನು ಲಾಲಿಸಿಕೊಂಡು, ಪೋಷಿಸಿಕೊಂಡು ಎಲ್ಲಾ ಮಾಜಿ ಪ್ರಧಾನಿಗಳು ಬೆಳೆಸಿಕೊಂಡು ಬಂದು ಬಲಿಷ್ಟ ರಾಷ್ಟವನ್ನಾಗಿ ನಮ್ಮ ಕೈಗಿಟ್ಟಿದ್ದಾರೆ. ಯಾರೊ ತುತ್ತನ್ನಿಟ್ಟು ಬೆಳೆಸಿ ಮಗುವನ್ನು ಇವತ್ತು ನಾನೆ ಬೆಳೆಸಿದ್ದೆಂದು ಗರ್ವಪಡುವವರನು ಕಂಡರೆ ನಗು ಬರುವುದಂತು ಖಂಡಿತ. ಇವತ್ತು ಭಾರತ ಇದ್ದಂತ ಪರಿಸ್ಥಿತಿ 20 ವರ್ಷದ ಹಿಂದೆ ಇದ್ದಿದ್ದರು ಈವತ್ತು ನಡೆಯುತ್ತಿರುವ ಸರ್ಜಿಕಲ್ ಸ್ಟೈಕ್ ಅವತ್ತು ನಡೆಯುತ್ತಿತ್ತು. ಆದರೆ ಅವತ್ತು ಈ ದೇಶ ಇಷ್ಟೊಂದು ಸಮರ್ಥವಾಗಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಸಂಘ ಪರಿವಾರದವರೆಯಾಗಲಿ, ಕಮಿನ್ಯುಷ್ಟ ಸಿದ್ದಾಂತದವರೆಯಾಗಲಿ ಅವರ ಸಾಮರ್ಥಕ್ಕೆ ತಕ್ಕಂತೆ ಈ ದೇಶವನ್ನು ಮುನ್ನಡಿಸಿಕೊಂಡು ಬಂದಿದ್ದಾರೆ. ಒಂದು ಸೃಷ್ಟಿಗೆ ಮತ್ತೊಂದು ಅತಿವೃಷ್ಟಿ ಹಾಗಲೆಬೇಕು. ಒಬ್ಬರನ್ನೊಬ್ಬರು ತುಳಿದು ಮೇಲೆ ಬಂದು ನಿಂತಿದ್ದಾರೆ. ಅದನ್ನೆ ಸಾಧನೆ ಎಂದುಕೊಳ್ಳುವುದು ಮೂರ್ಖತನದ ಪರಮಾವಧಿ. ‘ಸ್ವರ್ಗ ಸೃಷ್ಟಿಯಾದರೆ, ನರಕ ವಿನಾಷವಾಗುವಿದು. ನರಕ ಸೃಷ್ಟಿಯಾದರೆ ಸ್ವರ್ಗ ವಿನಾಷವಾಗುವುದು. ಒಂದರ ಮರಣ ಮತ್ತೊಂದರ ಜನನ” ಇದೆ ತಾನೆ ಸ್ವಾತಂತ್ರ ಭಾರತದಲ್ಲಿ ಅವರಿಬ್ಬರು ನಡೆಸಿಕೊಂಡು ಬಂದಿದ್ದು? ಇವತ್ತು ಬೆಳೆದು ನಿಂತ ಭಾರತವನ್ನು ಈ ಮಟ್ಟಕ್ಕೆ ತಂದವರು ನಾವೆ ಎಂದು ಮೂರು ವರ್ಷಗಳ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದವರು, ಅದರ ಹಿಂದೆ ನಿಂತಿರುವ ಸಂಘ ಪರಿವಾರದವರು ಹೇಳುತ್ತಿದ್ದರೆ, 1947 ರಿಂದ ಈ ದೇಶ ಸತ್ತ ಶವದತ್ತಿತ್ತೆ! ಹಾಗಾದರೆ ಹಿಂದಿನ ಪ್ರಧಾನ ಮಂತ್ರಿಗಳ ಬಗ್ಗೆ ನಾವು ಓದಿದ್ದು ಎಲ್ಲಾ ಸುಳ್ಳೇ ಹಾಗಾದರೆ? ಅಫ್ಘಾನಿಸ್ತಾನದವರೆಗೂ ಹೋಗಿ ಪಾಕಿಸ್ತಾನವನ್ನಿಬ್ಬಾಗ ಮಾಡಿದ ಉಕ್ಕಿನ ಮಹಿಳೆ, ಜಗತ್ತು ಕಂಡ ಗಂಡೆದೆಯ ಭಾರತಿಯ ಹೆಣ್ಣು ಇಂದಿರಾ ಗಾಂಧಿಯವರ ಸಾಧನೆಗಳೆಲ್ಲಾ ಸುಳ್ಳೆ. ಅವರವರ ಅಧಿಕಾರವದಿಯಲ್ಲಿ ಎಲ್ಲರು ಈ ದೇಶಕ್ಕಾಗಿ ದುಡಿದವರೆ ಇಲ್ಲಿ ಯಾರನ್ನು ಯಾರು ಕಡೆಗಣಿಸುವಂತಿಲ್ಲ. ಈ ದೇಶ ಯಾರೊ ಒಬ್ಬ ವ್ಯೆಕ್ತಿಯಿಂದ, ಯಾವುದೊ ಒಂದು ಸಂಘಟನೆಯಿಂದ ಬಲಿಷ್ಠ ರಾಷ್ಟವಾಗಿ ಹೊರಹೊಮ್ಮುಂತದೆ ಅಂದುಕೊಂಡಿದ್ದರೆ ಅದು ಭಕ್ತರ ತಪ್ಪೆ ಹೊರತು ದೇಶ ಭಕ್ತರ ತಪ್ಪಲ್ಲ.

6

ಒಂದು ವೇಳೆ ಈ ದೇಶ ಸಂಘಟನೆಯ ಮೂಲಕವೆ ಉದ್ದಾರವಾಗುತ್ತೆ ಎನ್ನುವುದಾದರೆ ಆ ಸಂಘಟನೆಯೇ ಮೊದಲು ಈ ದೇಶದ ಸಾಲ ತೀರಿಸಲಿ ನೋಡೋಣ. ಹಾಗೊಲ್ಲ ಈ ದೇಶದ ಪ್ರತಿಯೊಬ್ಬ ಪ್ರಜೆಯು ತೆರಿಗೆಯನ್ನು ಕಟ್ಟುತ್ತಾನೆ. ಆ ಹಣವೇ ಅವನು ಕೊಡುವ ಬಲವೇ ಈ ದೇಶವನ್ನು ಬಲಿಷ್ಠ ರಾಷ್ಟವನ್ನಾಗಿಸುತ್ತದೆ ಹೊರತು ಇತಿಹಾಸವನ್ನು ತಿರುಚಿ ಗಂಟೆಗಟ್ಟಲೆ ಭಾಷಣ ಬಿಗಿಯುವವರಿಂದಲ್ಲ. ಇಂದು ನರೇಂದ್ರ ಮೋದಿಯವರು ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟೈಕ್ ಮಾಡಿದ್ದನ್ನು ಬರಿ ಸಂಘಪರಿವಾರದವರಲ್ಲ ಒಪ್ಪಿಕೊಂಡಿರುವುದು. ಅಖಂಡ ಭಾರತವೇ ಒಪ್ಪಿಕೊಂಡಿದೆ. ಒಂದು ವೇಳೆ ಸಂಘ ಪರಿವಾರದವರು ಒಪ್ಪಿಕೊಂಡು ಭಾರತದ ಪ್ರೆಜೇಗಳು ತಿರಸ್ಕರಿಸಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರೆ ಏನಾಗುತ್ತಿತ್ತು ಒಮ್ಮೆ ಯೋಚಿಸಿ. ಎಲ್ಲಾ ಕ್ರೆಡಿಟ್ ನನ್ನೆದೆ ಎಂದು ಬೀಗುತ್ತಿರುವ ಅಂದ ಭಕ್ತರೆ, ವ್ಯೆಕ್ತಿಯ ಕೆಲಸಗಳನ್ನು ಗೌರವಿಸಿ ಪೋಜಿಸಬೇಡಿ. ಮಾತಾ ಭಜನಿಯರೆ ಎನ್ನುವ ಬಾಯಲ್ಲಿ ಇವತ್ತು ಮೋದಿಯನ್ನ ಯಾರಾದರು ಏನಾದರು ಎಂದರೆ ಹೆಣ್ಣು ಗಂಡು, ಎನ್ನದೆ ಬಾಯಿಗೆ ಬಂದಂತೆ ಬೈಯುತ್ತಿರಲ್ಲ ಈ ದೇಶಕ್ಕೆ ನಿವೊಬ್ಬರೆ ತೆರಿಗೆ ಕಟ್ಟುತ್ತಿರಿ, ಮತ್ತಾರು ಕಟ್ಟುವುದಿಲ್ಲವೆ? ನಿಮಗೆಷ್ಟು ಈ ದೇಶದ ಮೇಲೆ ಅಧಿಕಾರವಿದೆಯೋ ಅಷ್ಟೆ ಅಧಿಕಾರ ಭಾರತದ ಪ್ರತಿಯೊ್ಬ್ಬ ಪ್ರಜೆಗೆ ಇರುತ್ತದೆ. ಎಲ್ಲರು ನಮ್ಮಂತೆಯೋ ಯೋಚಿಸಬೇಕು, ಎಲ್ಲರು ನಮ್ಮ ಮಾತಿಗೆ ಕುರಿಗಳಂತೆ ತಲೆ ಆಡಿಸಬೇಕು ಎಂದು ಅರ್ಭಟಿಸಿದರೆ ಇಲ್ಲಾರಗೂ ಬಯವಿರುವುದಿಲ್ಲ. ಎಲ್ಲರು ಒಂದೆ ಎಂದು ಮುನ್ನಡೆಯಬೇಕು. ನಮ್ಮನ್ನಾಳುವವನು ತಪ್ಪು ಮಾಡಿದಾಗ, ಸಾಮಾನ್ಯರಿಗೆ ಅವರು ಅದರಿಂದ ತೊಂದರೆಯಾದಾಗ ಅದನ್ನು ಪ್ರಶ್ನಿಸಿಯೇ ಪ್ರೆಶ್ನಿಸುತ್ತಾನೆ. ಅದನ್ನು ತಪ್ಪು ಎಂದು ಮತ್ತೊಬ್ಬರನ್ನು ಬೈಯುವ ಹಕ್ಕು ನಿಮಗ್ಯಾರು ಕೊಟ್ಟಿದ್ದು?

ನಿಮ್ಮ ಸಂಘ ಪರಿವಾರದ ಒಂದಾನೊಂದು ಕಾಲದ ಕಟ್ಟ ಶಿಷ್ಯರಂತಿದ್ದ ಗಾಲಿ ಜನಾರ್ಧನ ರೆಡ್ಡಿ ಮೊನ್ನೆ ಸರ್ಕಾರಕ್ಕು ಲೆಕ್ಕ ಕೊಡದೆ ಲೆಕ್ಕವಿಲ್ಲದಷ್ಟು ಹಣ ವ್ಯೆಹಿಸಿ ಮಗಳ ಮದುವೆ ಮಾಡಿದ್ದನ್ನು ಸರ್ಥಿಸಿಕೊಳ್ಳುವ, ಬಿ.ಜೆ.ಪಿ. ಮತ್ತು ಸಂಘ ಪರಿವಾರ ಅದರ ಬಗ್ಗೆ ಮಾತನಾಡಿದವರ ಮೇಲೆ ಮುಗಿ ಬೀಳುವುದೇಕೆ? ಯಾಕೆ ಮೋದಿಜೀ ಗೆ ಈ ಅದ್ದೂರಿ ಮದುವೆ ಸರ್ಜಿಕಲ್ ಸ್ಟ್ರೈಕ್ ಆದಮೆಲೆ ತಾನೆ ನಡೆದಿದ್ದು, ಅದು ಅವರ ಕಣ್ಣಿಗೆ ಕಾಣುವುದಿಲ್ಲ. ಸಾಮಾನ್ಯನೊಬ್ಬ ತನಗಾದ ತೊಂದರೆಗಳನ್ನು ಹೇಳಿಕೊಂಡರೆ ಅವನನ್ನು ದಬಾಯಿಸಬೇಕೆಂದು ನಿಮಗೆ ಸಂಘ ಪರಿವಾರವೇಳಿಕೊಟ್ಟಿದೆಯೇ? ಈ ದೇಶ ಯಾರಪ್ಪನ ಮನೆಯ ಸೊತ್ತಲ್ಲ ಮರೆಯದಿರಿ. ನಾನು ಮೋದಿಯವರು ಮಾಡುವ ಒಳ್ಳೆಯ ಕೆಲಸಗಳನ್ನು ಗೌರವಿಸುತ್ತೇನೆ, ಮೋದಿಯನ್ನಲ್ಲ, ಬಿ.ಜೆ.ಪಿಯನ್ನಲ್ಲ. ಹಾಗೆ ಎಲ್ಲಾ ಮಾಜಿ ಪ್ರಧಾನ ಮಂತ್ರಿಗಳ ಒಳ್ಳೆಯ ಕೆಲಸಗಳನ್ನ ಗೌರವಿಸುತ್ತೆನೆ ಹೊರತು ಯಾವ ಪಕ್ಷದವರೆಂದು ಎಂದು ನೋಡುವುದಿಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ ವ್ಯೆಕ್ತಿತ್ವ ಮುಖ್ಯ.

 -ಸಿದ್ದುಯಾದವ್ ಚಿರಿಬಿ
-ಸಿದ್ದುಯಾದವ್ ಚಿರಿಬಿ

Columns ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...