Oyorooms IN

Saturday, 19th August, 2017 4:30 PM

BREAKING NEWS

ಕವನ

ಭಾರತಿಯ ನಾನೆಂದು

ಬದುಕು ಸಾಗುತಿದೆ ಎಡ-ಬಲಕೆ ವಾಲದೆ
ಆದರೂ ಕಟ್ಟುವರೊಮ್ಮೊಮ್ಮೆ ನನಗೂ
ಎಡ ಪಂಥಕ್ಕೆ ಮತ್ತೊಮ್ಮೆ ಬಲ ಪಂಥಕ್ಕೆ
ಮಧ್ಯಮ ಪಂಥದ ದಾರಿ ಅಷ್ಟೊಂದು
ಸುಗಮವಲ್ಲ ಇಲ್ಲಿ ನಾ ತಿಳಿದಂತೆ

ಅತ್ತ ಅವರು ತಿವಿಯುವರು ಇತ್ತ ಇವರು
ಮೊಣಚು ಕತ್ತಿಯಲಿ ಹಿಂಸಿಸಿ ಕೊಲ್ಲುವರು
ಅವನ ಹೊಗಳಿತೆಗಳಿದರೆ ಇವನ ದಾಳಿ
ಮತ್ತೊಬ್ಬನೊಗಳಿ ತೆಗಳಿದೆರೆ ಅವನದು ದಾಳಿ
ಇವೆರೆಡದ ಮಧ್ಯೆ ನಾಸ್ತಿಕನಾಸ್ತಿಕನಾಗದವ ನಾನು

ವೇದ-ಉಪನಿಷತ್ತುಗಳ ತವರಿನಲಿ
ರಾಮ-ಕೃಷ್ಣರ ಚರಿತೆಯ ಕರಗಳಲಿ
ಜಗತ್ತಿಗುಪದೇಶ ಮಾಡಿದ ಬುದ್ದನಲಿ
ಶಾಂತಿ, ಸಹಬಾಳ್ವೆಯ ಭರತೆಯ ಮಡಿಲಿನಲಿ
ಕಲಹದ ಕುಣಿಕೆಯ ಕೊರಳಿಗೆ ತಾಗಿದೆ

ದೇಶವನ್ನಾಳುವ ದೊರೆಗೆ ಭಕ್ತರ ಲೆಕ್ಕವಿಲ್ಲ
ವಿರೋಧಿಸುವವರೇನು ಕಡಿಮೆ ಇಲ್ಲ
ಅಂದ ಭಕ್ತಿಯೋ, ಪಕ್ಷ ಪಾತವೋ
ಅರಿಯದಾಗಿದೆ ಮನ, ನಡುವೆ ಸಿಕ್ಕು
ನರಳುತ ಸಾಗಿದೆ ನನ್ನಂತವರ ಕದನ

ಸಂಘ ಪರಿವಾರವಂತೆ, ಮಾತ ಭಜನಿಯರಂತೆ
ಕಮ್ಯುನಿಸ್ಟ್ ರಂತೆ, ಲೋಹಿಗಳಂತೆ, ಅಲ್ಲೊಂದು ಪಕ್ಷ
ದೆಹಲಿಯ ವೇಶ್ಯಯಲ್ಲಿ ಮಗ್ಗಲು ಬದಲಿಸಿದಂತೆ
ಭಾರತಾಂಭೆ ಇವರ ಕಪಿಮುಷ್ಟೆಯಲ್ಲಿ ನರಳುವಂತೆ
ಹಬ್ಬರಿಸುತಿದೆ ಒಂದ, ಹಬ್ಬ ಮಾಡುತಿದೆ ಮತ್ತೊಂದು;

ಬಡವ-ಬಲ್ಲಿದನ ಹಣವನು ಗುಡ್ಡೆಯ ಹಾಕಿದೆ
ಕಾಳ ಧನಿಕರ ಹೆಸರಿನಲಿ ಕತ್ತಿ ಮಸೆಯುತಿದೆ
ಬರಲಿಲ್ಲ ಹೊರಗೆ, ಕಪ್ಪು ಮುಖಗಳು ಬಲೆಗೆ
ಊಟದ ಉಪ್ಪಿನ ಕಾಯಿಗೆ ಸಂಭ್ರಮಿಸಿದೆ ಅಲವು
ಬಗೆಬಗೆಯ ಭೊಜನಕೆ ಸಿದ್ಧವಾದ ಜಗವು

ಹೊರ ದೇಶದ ಬ್ಯಾಂಕುಗಳ ಖಜಾನೆಯನು
ಚುನಾವಣೆಯ ಮುಚ್ಚದೆ ತೋರಿಸಿದರು
ಇಂದು ನಮ್ಮನೆಯ ಚಿಲ್ಲರೆ ಡಬ್ಬಿಗೆ ಕೈ ಹಾಕಿದವರು
ಸಂಭ್ರಮಿಸಿದವು ಅಲವು, ವಿರೋದಿಸಿದವು ಕೆಲವು,
ನೋವನನುಭವಿದವನು ನಾನು ನೇಗಿಲಿಡಿದ ತಪ್ಪಿಗೆ;

ದೇವರ ನಾಡಿನಲಿ ರಕ್ತದ ರಾಜಕೀಯ
ಸತ್ತವರು ನಮ್ಮವರೆಂದು ಬೊಬ್ಬುಡುತಿದೆ
ಸಾವಿನ ಪದರೆಯ ಮರೆಯಲಿ ಸಂಘ
ಅದರಾಚೆಗೆ ಮತ್ತೊಂದು ನಾಟ್ಯ ತರಂಗ
ಇತಿಹಾಸದ ಪುಟಕೊಂದು ನರಸತ್ತ ಪ್ರಸಂಗ

ಒಳ್ಳೆಯತನವನು ಸ್ವಾಗತಿಸಿದೆ ಅವನು ಎರಗುವನು
ಕೆಟ್ಟದ್ದನ್ನು ಪ್ರಶ್ನಿಸಿದೆ ಮತ್ತವನೆ ಎರಗಿದನು
ಮೌನವಾಗಿ ಕುಳಿತರೆ ನನ್ನಂತರಂಗವೆ ಎರಗುವುದು
ಏನು ಮಾಡಲಿ ನೀವೆ ಹೇಳಿ ಭಾರತಿ ನಿಜ ಪುತ್ರರೆ
ಇತಿಹಾಸವನ್ನು ತಿರುತಿ ಭಾಷಣ ಬಿಗಿಯುವ ಮುನ್ನ

ಹಿಮಾಲಯದ ಮಂಜಿನಲಿ ಸೈನಿಕ ಗುಡುಗುವನು
ಕರುಳು ಬಳ್ಳಿ ಕತ್ತರಿಸಿದಕೊಂಡವಳು ಎರಗುವಳು
ಸತ್ತವರು ಅವರು ನೋವನುಂಡವರು ನಂಬಿದವರು
ಅವರೇಸರೆಳಿಕೊಂಡು ರಾಜಕೀಯ ಮಾಡುವವರನು
ಏನೆನ್ನಬೆಕೆಂದು ನೀವೇ ಹೇಳಿ ಓ ಭಾರತಿ ಪುತ್ರರೇ

ಮುಸ್ಲಿಂ ನಾನಲ್ಲ, ಕ್ರಿಚ್ಚಿಯನ್ ಮೊದಲೆ ಅಲ್ಲ
ಹಿಂದೂ ನಾನೆನ್ನಲು ಸಂಘ ಪರಿವಾರದವನಲ್ಲ
ದರ್ಗಾಕ್ಕೆ ಹೋಗಿಲ್ಲ, ಚರ್ಚಿನಲ್ಲಿ ತಪ್ಪೊಪ್ಪಿಸಿಲ್ಲ
ಮಂದಿರಲ್ಲಂತು ಕೈ ಮುಗಿಯುವುದೆ ಇಲ್ಲ
ಹಾಗದರೆ ನಾನು ಭಾರತಿಯನಲ್ಲವೇ?

ಗಂಗೆ-ತುಂಗೆಯರಿಗೇನು ಗೊತ್ತು ಧರ್ಮದ ಗತ್ತು
ಗೋದಾವರಿ-ಸರಸ್ಪತಿ, ಯಮುನೆಯರಿಗ್ಯಾವ ಧರ್ಮ?
ಸಾಗರದಲೆಗಳಿಗೇನು ಗೊತ್ತು ಬೆದವೆಣಿಸುವುದು!
ಪ್ರಕೃತಿಯ ಮಡಿಲಿನಲಿನಲಿ ಎಲ್ಲರೂ ಒಂದೆ
ರಕ್ತ ಬಣ್ಣವದು, ನಡೆದಡುವ ನೆಲವದು ಒಂದೆ
ಅದರೂ ಬಡಿದಾಡುವರು ಅದು ನನ್ನದು, ನಿನ್ನದೆಂದು;

ತಪ್ಪುಗಳನು ತಿದ್ದುವೇನು, ಸತ್ಯವನ್ನೆತ್ತಿ ತೊರುವೆನು
ನನಗಾರ ಬಯವೇಕೆ, ಇನ್ನೊಬ್ಬರ ಹಂಗ್ಯಾಕೆ?
ಭಾರತ ಭೂಮಿ ನನ್ನ ಅಸ್ತಿ, ಅದಕಾಗಿ ಹೋರಾಡುವೆ
ಜಾತಿ-ಮಥಗಳು ಏನಗಿಲ್ಲ ಮನುಜ ಮಥವೇ ಏನಗೆಲ್ಲಾ
ವಿಶ್ವಪಥಕೆ ಸಾರಥಿಯಾಗುವೆ, ಮಾರಕವಾಗಲಾರೆಂದು
ಸಾವೇ ಎದುರುಗೊಂಡರು ಭಾರತಾಂಬೆಗೆ
ಬಗೆಯನೆರಡು ನಾನೆಂದು, ಇಂದು-ಮುಂದು ಎಂದೆಂದೂ…,

-ಸಿದ್ದುಯಾದವ್ ಚಿರಿಬಿ

ಕವನ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...