Oyorooms IN

Friday, 24th February, 2017 11:20 AM

BREAKING NEWS

ಪ್ರಮುಖ ಸುದ್ದಿಗಳು

ಇಂದಿನಿಂದ ಮೂರು ದಿನ ಪ್ರವಾಸಿ ಭಾರತೀಯ ದಿವಸ್

ಬೆಂಗಳೂರು: ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ‘ಪ್ರವಾಸಿ ಭಾರತೀಯ ದಿವಸ್-2017’ ಕಾರ್ಯಕ್ರಮ ಹಿನ್ನೆಲೆ ನಗರಕ್ಕೆ ಪ್ರವೇಶಿಸುವ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಜ. 10ರ ರಾತ್ರಿ 12 ಗಂಟೆ ವರೆಗೆ ಬೆಂಗಳೂರು-ತುಮಕೂರು ರಸ್ತೆ ಗೊರಗುಂಟೆಪಾಳ್ಯದಿಂದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ಹಾಗೂ ಯಶವಂತಪುರದಿಂದ ತುಮಕೂರು ಕಡೆಗೆ ಬಿಎಂಟಿಸಿ, ಕೆಎಸ್‌ಆರ್ಟಿಸಿ, ಖಾಸಗಿ ಬಸ್ಗಳು ಹೊರತುಪಡಿಸಿ, ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

 

ಪ್ರವಾಸಿ ದಿವಸ್ ‘ ಅಂದರೆ:  ಅನಿವಾಸಿ ಭಾರತೀಯರ ಸಾಧನೆ ಬಿಂಬಿಸುವ ದೇಶದ ಅಪರೂಪದ ಕಾರ್ಯಕ್ರಮ ಇದಾಗಿದ್ದು, ಗಾಂಧೀಜಿ ಭಾರತಕ್ಕೆ ಮರಳಿದ ದಿನವನ್ನು ಪ್ರವಾಸಿ ಭಾರತೀಯ ದಿವಸ್​ ಆಚರಣೆ ಮಾಡಲಾಗುತ್ತಿದೆ. 1915ರ ಜನವರಿ 9ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಗಾಂಧೀಜಿ ಮರಳಿದ್ದರು. ಹೀಗಾಗಿ 2003ರಲ್ಲಿ ಪ್ರಧಾನಿ ವಾಜಪೇಯಿ ಈ ದಿನವನ್ನು ಪ್ರವಾಸಿ ಭಾರತೀಯ ದಿವಸ್​ ಆಚರಣೆ ಮಾಡಲು ಆದೇಶ ಹೊರಡಿಸಿದ್ದರು. 14ನೇ ಪ್ರವಾಸಿ ಭಾರತ್​ ದಿವಸ್ ಆಗಿರುವ ಇದು ಬೆಂಗಳೂರಿನಲ್ಲಿ ನಡೆಯುತ್ತಿದೆ. ​

 

ಒಟ್ಟು 18 ರಾಜ್ಯಗಳು ಈ ‘ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿಯೊಂದು ರಾಜ್ಯವೂ ಅಲ್ಲಿನ ನೆಲದ ಸೊಗಡಿಗೆ ತಕ್ಕಂತೆ ಮಳಿಗೆಗಳನ್ನು ವಿನ್ಯಾಸಗೊಳಿಸಿವೆ. ಪ್ರವಾಸಿ ಭಾರತೀಯ ದಿವಸ್ನಲ್ಲಿ ಭಾಗವಹಿಸಲು 6346 ಮಂದಿ ಹೆಸರು ನೋಂದಾಯಿಸಿದ್ದಾರೆ. ಈ ಪ್ರವಾಸಿ ಭಾರತ್​​ ದಿವಸ್​​ ಕಾರ್ಯಕ್ರಮದಲ್ಲಿ 70 ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿದ್ದು, ಭಾರತದ ಸುಮಾರು 25 ದಶಲಕ್ಷ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಾಳೆ ಪ್ರಧಾನಿ ಮೋದಿ ಪ್ರವಾಸಿ ಭಾರತೀಯ ದಿವಸದ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ ಅತಿಥಿಯಾಗಿ ಆಗಮಿಸಲಿದ್ದಾರೆ. ಅನಿವಾಸಿ ಭಾರತೀಯರ ಜತೆ ಚರ್ಚೆ ಹಾಗೂ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ. 3 ದಿನಗಳ ಕಾರ್ಯಕ್ರಮದಲ್ಲಿ ಒಟ್ಟಾರೆ 10 ವಿಚಾರಗೋಷ್ಠಿಗಳು ನಡೆಯಲಿದ್ದು, ಸೋಮವಾರ ಸಂಜೆ 5 ಗಂಟೆಗೆ ರಾಷ್ಟ್ರಪತಿಗಳು ಪ್ರವಾಸಿ ಭಾರತೀಯ ದಿವಸಕ್ಕೆ ತೆರೆ ಎಳೆಯಲಿದ್ದಾರೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...