Oyorooms IN

Wednesday, 29th March, 2017 10:56 AM

BREAKING NEWS

ಪ್ರಮುಖ ಸುದ್ದಿಗಳು

ಭೂಕಂಪಕ್ಕೆ ತತ್ತರಿಸಿದ ಇಂಡೋನೇಷ್ಯಾ, 97 ಮಂದಿ ಸಾವು

ಪಶ್ಚಿಮ ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 97 ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿರುವುದಾಗಿ ಸೇನೆ ತಿಳಿಸಿದೆ.

ಸುಮಾತ್ರಾ ದ್ವೀಪದ ಬಳಿಯ ಪಿಡಿಜಯಾ ಜಿಲ್ಲೆಯಲ್ಲಿ ಪ್ರಬಲವಾಗಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.5 ರಷ್ಟು ತೀವ್ರತೆ ದಾಖಲಾಗಿತ್ತು. ಈ ಭಾಗದಲ್ಲಿ ಮುಸಲ್ಮಾನರೇ ಹೆಚ್ಚಾಗಿ ವಾಸವಾಗಿದ್ದಾರೆ. ಬೆಳಗ್ಗೆ ಮಸೀದಿಯಲ್ಲಿ ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಭೂಕಂಪವಾಗಿದೆ. ನೂರಾರು ಮನೆ, ಮಸೀದಿ, ಅಂಗಡಿಗಳೆಲ್ಲ ನೆಲಕ್ಕುರುಳಿವೆ.

ಅವಶೇಷಗಳಡಿ ಸಿಲುಕಿ ಹಲವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಅಂತಾ ಸೇನೆ ತಿಳಿಸಿದೆ. ಸುಮಾರು 1000 ಯೋಧರು ಹಾಗೂ 900 ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮನೆ ಮಠ ಕಳೆದುಕೊಂಡು ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಅನ್ನ, ನೀರು ಸಿಗದೆ ಕಂಗಾಲಾಗಿದ್ದಾರೆ.

ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಆಸ್ಪತ್ರೆ ಕೂಡ ಧರಾಶಾಯಿಯಾಗಿರೋದ್ರಿಂದ ಗಾಯಾಳುಗಳು ಮತ್ತು ರೋಗಿಗಳಿಗೆ ಲಾನ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 2004 ರಲ್ಲಿ ಭೀಕರ ಸುನಾಮಿಗೆ ಇಂಡೋನೇಷ್ಯಾ ತತ್ತರಿಸಿ ಹೋಗಿತ್ತು, ಸುಮಾರು 1,70,000 ಜನರು ಸಾವನ್ನಪ್ಪಿದ್ದರು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...