Oyorooms IN

Friday, 26th May, 2017 4:13 AM

BREAKING NEWS

ದಕ್ಷಿಣ ಕನ್ನಡ

ಇನ್ನಾದ್ರೂ ನಿದ್ದೆ ಮಾಡುವುದನ್ನು ಬಿಡಿ, ತನ್ವೀರ್ ಸೇಠ್ ವಜಾಗೊಳಿಸಿ: ಪೂಜಾರಿ

JANARDHANA POOJARY

ಮಂಗಳೂರು: ಟಿಪ್ಪುಜಯಂತಿ ಸಮಾರಂಭದಲ್ಲಿ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರವನ್ನು ವೀಕ್ಷಣೆ ಮಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಂಜೆಯೊಳಗೆ ಸಚಿವ ಸಂಪುಟದಿಂದ ಕೈಬಿಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ಜನಾರ್ದನ ಪೂಜಾರಿ, ಸಚಿವ ತನ್ವೀರ್ ಸೇಠ್ ನೀಲಿ ಚಿತ್ರ ವೀಕ್ಷಣೆ ಬಗ್ಗೆ ವರದಿ ಕೇಳುವ ಅಗತ್ಯವೇ ಇಲ್ಲ, ಸಂಜೆಯೊಳಗೆ ಅವರನ್ನು ಮನೆಗೆ ಕಳಿಸಿ,  ನಿಮ್ಮನ್ನು ಆಯ್ಕೆ ಮಾಡಿರುವ ಜನರ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಒತ್ತಾಯಿಸಿದ್ದಾರೆ.

ಇನ್ನೂ ನಾವು ನಿದ್ದೆ ಮಾಡುತ್ತಿದ್ದರೆ, ಮುಂದಿನ ಚುನಾವಣೆಯಲ್ಲೂ ನಿದ್ದೆ ಮಾಡಬೇಕಾಗುತ್ತದೆ ಎಂದು ಸಿಎಂ ಆಡಳಿತದ ವೈಖರಿ ಕುರಿತು ಜನಾರ್ದನ ಪೂಜಾರಿ ವ್ಯಂಗ್ಯವಾಡಿದ್ದಾರೆ.

English summary:  janardhana poojary demand tanivr set resignation

ದಕ್ಷಿಣ ಕನ್ನಡ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...