Oyorooms IN

Saturday, 19th August, 2017 4:43 PM

BREAKING NEWS

ಪ್ರಮುಖ ಸುದ್ದಿಗಳು

ಎರಡನೇ ಹನಿಮೂನ್ ಗೆ ಸ್ಟಾರ್ ಹೀರೋಯಿನ್ !!

ಲಾಸ್ ಏಂಜಿಲ್ಸ್: ಎಲ್ಲಿಗೆ ಹೋಗ್ತೀರಾ ಅಂದ್ರೆ ಎರಡನೇ ಹನಿಮೂನ್ ಗೆ ಎನ್ನುತ್ತಿದ್ದಾಳೆ ಸ್ಟಾರ್ ಹೀರೋಯಿನ್ ಜೆನ್ನಿಫರ್ ಅನಿಸ್ಟನ್, ನಟ ಜೆಸ್ಟಿನ್ ಥಿರೋಕ್ಸ್ ಜೊತೆ ಮದುವೆಯಾಗಿ ಎರಡು ವರ್ಷವಾಗುವುದರೊಳಗೆ ಇವರಿಬ್ಬರ ಮಧ್ಯೆ ಮನಸ್ತಾಪಗಳು ಹೆಚ್ಚಾಗಿ ಇಬ್ಬರು ದೂರವಾಗಿದ್ದರು.

ಇದರಿಂದ ಮದುವೆ, ವೈವಾಹಿಕ ಜೀವನದ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸುತ್ತಿದ್ದ ಜೆನ್ನಿಫರ್ ಹಾಗೂ ಜೆಸ್ಟಿನ್ ಮದುವೆ ಆಲ್ಮೋಸ್ಟ್ ಮುರಿದೇ ಹೋಯಿತು ಎನ್ನುವ ಮಾತುಗಳು ಕೇಳಿ ಬಂದಿದ್ದವು, ಈ ಮಧ್ಯೆ ಇವರಿಬ್ಬರು ಮತ್ತೆ ಒಂದಾಗಿದ್ದು, ಗಂಡನೊಂದಿಗೆ ಕೆಲಕಾಲ ಖಾಸಗಿಯಾಗಿರಬೇಕೆಂದು ಕೊಂಡಿರುವುದಾಗಿ ಜೆನ್ನಿಫರ್ ಇತ್ತಿಚೆಗೆ ಹೇಳಿಕೊಂಡಿದ್ದರು.

ಅದಕ್ಕಾಗಿ ಟ್ರಿಪ್ ಪ್ಲ್ಯಾನ್ ಮಾಡಿರುವ ಜೆನ್ನಿಫರ್ ಮತ್ತೆ ತಮ್ಮ ವೈವಾಹಿಕ ಜೀವನವನ್ನು ಗಟ್ಟಿಮಾಡಿಕೊಳ್ಳಲು ಸಿದ್ಧರಾಗಿದ್ದಾರೆ, 2012ರಲ್ಲಿ ಒಂದಾಗಿದ್ದ ಈ ಜೋಡಿ, ಎರಡು ವರ್ಷ ಡೇಟಿಂಗ್ ನಡೆಸಿ 2015ರಲ್ಲಿ ಮದುವೆಯಾಗಿದ್ದರು, ಜೆನ್ನಿಫರ್ ಹಾಗೂ ಜೆಸ್ಟಿನ್ ನಡುವೆ ಮನಸ್ತಾಪ ಬರಲು ಜೆನ್ನಿಫರ್ ಮೊದಲ ಗಂಡ ಬ್ರಾಡ್ ಪಿಟ್ ವಿಷಯವೇ ಕಾರಣ ಎನ್ನುವ ಗುಸು ಗುಸು ಹಾಲಿವುಡ್ ನಲ್ಲಿ ಹರಿದಾಡುತ್ತಿದೆ.

English summary: jennifer aniston and justin theroux are reportedely trying to fix their broken marriage

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...