Oyorooms IN

Friday, 24th March, 2017 7:33 PM

BREAKING NEWS

ಉದ್ಯೋಗ

ಯಾದಗಿರಿ: ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ:  ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ: ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರು-8 ಹಾಗೂ ಬೆರಳಚ್ಚು-ನಕಲುಗಾರರು-3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 24-8-2016 ಇದೆ. ಬೆರಳಚ್ಚುಗಾರ 8 ಹುದ್ದೆಗಳಿದ್ದು, , ವೇತನ ಶ್ರೇಣಿ 11,600-21,000 ಹಾಗೂ ಇತರೆ ಭತ್ಯೆಗಳು ಇವೆ. ಸ್ಥಳೀಯ ವೃಂದದವರಿಗೆ 08 ಹುದ್ದೆಗಳು ಇದ್ದು, ಹೈದ್ರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಪರಿಶಿಷ್ಟ ಪಂಗಡ -01, ಪ್ರವರ್ಗ-2ಎ-1, ಪ್ರವರ್ಗ-2ಬಿ-1 ಒಟ್ಟು-3, ಸಾಮಾನ್ಯ ಅಭ್ಯರ್ಥಿ (ಮಹಿಳೆ)-02, ಪರಿಶಿಷ್ಟ ಜಾತಿ (ಮಹಿಳೆ) ಅಭ್ಯರ್ಥಿ -01 ಒಟ್ಟು-3 ಹಾಗೂ ಗ್ರಾಮೀಣ (ಸಾಮಾನ್ಯ) ಅಭ್ಯರ್ಥಿ-2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಢದರ್ಜೆಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಪ್ರೌಢದರ್ಜೆಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿಸ್ಟ್ರಿಯಲ್ ಮತ್ತು ಇತರೆ ಹುದ್ದೆಗಳು) (ನೇಮಕಾತಿ) ನಿಯಮಗಳು-1982 ಮತ್ತು (ತಿದ್ದುಪಡಿ) ನಿಯಮಗಳು -2007 ರನ್ವಯ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹತಾ ಪರೀಕ್ಷೆಗಳಲ್ಲಿ ಪಡೆದಿರುವ ಒಟ್ಟು ಶೇಕಾಡವಾರು ಅಂಕಗಳು ಮತ್ತು 15 ನಿಮುಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಕಂಪ್ಯೂಟರನಲ್ಲಿ ಅಥವಾ ಬೆರಳಚ್ಚು ಯಂತ್ರದಲ್ಲಿ ಬೆರಳಚ್ಚು ಮಾಡುವ ಸಾಮಥ್ರ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಕಂಪ್ಯೂಟರ ಸಾಕ್ಷರತಾ ಪರೀಕ್ಷೆ ಇದ್ದು, ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಧಿಸೂಚನೆ ಅನ್ವಯ ನಿಗಧಿಪಡಿಸುವ ಕಂಪ್ಯೂಟರ ಸಾಕ್ಷರತಾ ಪರೀಕ್ಷೆಯನ್ನು ಆಯ್ಕೆಯಾದ ಪರಿವಿಕ್ಷಣಾ ಅವಧಿಯಲ್ಲಿ ಉತ್ತೀರ್ಣರಾಗಬೇಕು. ಇಲ್ಲವಾದÀಲ್ಲಿ ಅವರ ಪರಿವೀಕ್ಷಣಾ ಅವಧಿಯನ್ನು ಘೋಷಿಸುವುದಿಲ್ಲ.

ಉದ್ಯೋಗ ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...