Oyorooms IN

Wednesday, 29th March, 2017 8:54 PM

BREAKING NEWS

ಬೆಳಗಾವಿ

ಪರಿಶಿಷ್ಟ ಜಾತಿ ಪಟ್ಟಿಯಿಂದ ಬೋವಿ, ಲಂಬಾಣಿ ಜನಾಂಗದಿಂದ ತೆಗೆಯುವುದಿಲ್ಲ

h-anjaneya

ಬೆಳಗಾವಿ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೋವಿ ಮತ್ತು ಲಂಬಾಣಿ ಜನಾಂಗದ ಜಾತಿಗಳನ್ನು ಕೈಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ  ತಿಳಿಸಿದ್ದು, ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕಾರವಾದರೆ ಕೆಲ ಜಾತಿಗಳು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗುಳಿಯುತ್ತದೆ ಎನ್ನುವ ಆತಂಕ ಪಡಬೇಕಾಗಿಲ್ಲ ಎಂದಿದ್ದಾರೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ಅಂಗೀಕಾರದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಕೆಲ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಹೊರ ಹಾಕುವ ಬಗ್ಗೆ ಆತಂಕ ಬೇಡ, ಆಯೋಗದ ವರದಿಯನ್ನು ಅಂಗೀಕಾರ ಮಾಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ಎಚ್.ಆಂಜನೇಯ ಹೇಳಿದ್ದಾರೆ.

ಪರ ಮತ್ತು ವಿರೋಧದ ಬಗ್ಗೆ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು, ಕಳೆದ 20 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆನ್ನುವುದು ಸರ್ಕಾರ ನಿಲುವುವಾಗಿದೆ ಎಂದು ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

English summary :  justice sadashiva committee recommendations

ಬೆಳಗಾವಿ ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...