Oyorooms IN

Friday, 24th March, 2017 7:42 PM

BREAKING NEWS

ಚಿಕ್ಕಮಗಳೂರು

ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅಭಿರಾಮ್ ಬಂಧನ

 ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅಭಿರಾಮ್ ಬಂಧನ

ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಭಿ ಅಲಿಯಾಸ್ ಅಭಿರಾಮ್ ನನ್ನು ಸಿಐಡಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಸಿಐಡಿ ಅಧಿಕಾರಿಗಳ ಪ್ರಕಾರ, ಅಭಿರಾಮ್ ಒಬ್ಬ ವಿದ್ಯಾರ್ಥಿಯಾಗಿದ್ದು, ತೇಜಸ್ ಗೌಡ ಅಪಹರಣ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಈ ಮುಂಚೆ ಅಪಹರಣಕ್ಕೆ ಸಹಕರಿಸಿದ ಆರೋಪದ ಮೇಲೆ ರಾಜ್ಯ ಬಜರಂಗದಳದ ಸದಸ್ಯ ಪ್ರದೀಪ್ ನನ್ನು ಬಂಧಿಸಲಾಗಿತ್ತು.
ಪ್ರಕರಣದ ಇತರೆ ಪ್ರಮುಖ ಆರೋಪಿಗಳಾದ ಪ್ರವೀಣ್ ಖಾಂಡ್ಯ ಹಾಗೂ ನವೀನ್ ಶೆಟ್ಟಿಯ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದು, ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಸಹ ಸಿಐಡಿ ಘೋಷಿಸಿದೆ.
ತೇಜಸ್‌ ಗೌಡನ ಅಪಹರಣ ಹಾಗೂ ಆನಂತರದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಪ್ರವೀಣ್‌ ಖಾಂಡ್ಯ ಈ ಹಿಂದೆ ಸಹ ಮಲೆನಾಡಿನ ವ್ಯಾಪಾರಿಗಳು, ಫೈನಾನ್ಷಿಯರ್‌ಗಳು ಸೇರಿದಂತೆ ಸಿರಿವಂತರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಅನುಮಾನಗಳಿವೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...