Oyorooms IN

Saturday, 21st January, 2017 7:37 AM

BREAKING NEWS

ಪ್ರಮುಖ ಸುದ್ದಿಗಳು

ಬಿರಿ ಯಾನಿ ಬ್ಯಾನ್ ಮಾಡಿ ಅಂದ ಕಮಲ್ ಹಾಸನ್

ಚೆನ್ನೈ: ಕೇಂದ್ರ, ರಾಜ್ಯ ಸರ್ಕಾರ ಈ ವರ್ಷ ಸಹ ಜಲ್ಲಿಕಟ್ಟು ಕ್ರೀಡೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ತಮಿಳುನಾಡಿನಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಜಲ್ಲಿ ಕಟ್ಟು ಪ್ರೇಮಿಗಳು ಜಲ್ಲಿಕಟ್ಟು ನಡೆಸಲು ಪ್ರಯತ್ನ ನಡೆಸುತ್ತಿದ್ದು, ಪ್ರತಿಪಕ್ಷಗಳಿಗೂ ಮನವಿ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ಮೀಡಿಯಾದೊಂದಿಗೆ ಮಾತನಾಡಿದ್ದಾರೆ.

ಸಂಕ್ರಾಂತಿ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಯೆಂದರೆ ನನಗೆ ಇಷ್ಟವೆಂದಿರುವ ಕಮಲ್ ಹಾಸನ್, ಜಲ್ಲಿಕಟ್ಟು ಕ್ರೀಡೆಯ ದೊಡ್ಡ ಅಭಿಮಾನಿ ಎಂದಿದ್ದು, ಜಲ್ಲಿಕಟ್ಟುವನ್ನು ನಿಷೇಧಿಸುವುದು ಸಬೂಬಲ್ಲ ಎಂದಿದ್ದಾರೆ, ವಿದೇಶದಲ್ಲಿ ನಡೆಯುವ ಬುಲ್ ಫೈಟ್ ಗೂ ಜಲ್ಲಿಕಟ್ಟುಗೆ ವ್ಯತ್ಯಾಸವಿದೆ ಎಂದು ವಿವರಿಸಿದ್ದಾರೆ.

ಜಲ್ಲಿಕಟ್ಟು ನಿಷೇಧಿಸಬೇಕು ಎಂದುಕೊಂಡರೆ ಬಿರಿಯಾನಿ ಅನ್ನು ಬ್ಯಾನ್ ಮಾಡ್ಬೇಕು ಎಂದಿದ್ದಾರೆ, ಸ್ಪೈನ್ ನಡೆಯುವ ಬುಲ್ ಫೈಟ್ಸ್ ನಲ್ಲಿ ಎತ್ತುಗಳನ್ನು ಹಿಂಸಿಸುತ್ತಿದ್ದಾರೆ, ಒಂದೊಂದು ಬಾರಿ ಎತ್ತುಗಳು ಸಾವನ್ನಪ್ಪುತ್ತವೆ, ಆದರೆ ಜಲ್ಲಿಕಟ್ಟು ಅಂತಹ ಕ್ರೀಡೆಯಲ್ಲ, ಮೂಕಪ್ರಾಣಿಗಳಿಗೆ ಹಾನಿಯಾಗುವುದಿಲ್ಲ, ತಮಿಳುನಾಡಿನಲ್ಲಿ ಎತ್ತುಗಳನ್ನು ದೇವರಂತೆ ಪೂಜಿಸುತ್ತಾರೆ ಎಂದು ಕಮಲ್ ಹಾಸನ್ ಎಂದಿದ್ದಾರೆ.

ಸಂಕ್ರಾಂತಿ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟುವನ್ನು ದೊಡ್ಡ ಮಟ್ಟದಲ್ಲಿ ನಿರ್ವಹಿಸುವುದು ನಡೆದುಕೊಂಡು ಬರುತ್ತಿದೆ, ಜಲ್ಲಿಕಟ್ಟು ಮೇಲೆ ಸುಪ್ರೀಂಕೋರ್ಟ್ ವಿಧಿಸಿರುವ ನಿಷೇಧವನ್ನು ರದ್ದುಗೊಳಿಸುವಂತೆ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಜಲ್ಲಿ ಕಟ್ಟುಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆಯುತ್ತಿದೆ.

ಇನ್ನೊಂದು ಕಡೆ ಜಲ್ಲಿಕಟ್ಟಿಗೆ ಕ್ರೀಡೆಗೆ ಬೆಂಬಲವಾಗಿ ತಮಿಳು ಹೀರೋ ಶಿಂಬು ಮಾತನಾಡಿದ್ದು, ಜಲ್ಲಿಕಟ್ಟು ನಮ್ಮ ಸಂಸ್ಕೃತಿ, ಸಂಪ್ರದಾಯಕ್ಕೆ ಚಿನ್ಹೆ, ಕೆಲವು ವ್ಯಕ್ತಿಯರು ಸ್ವಾರ್ಥದಿಂದ ಕೆಲ ಸಂಘಟನೆಗಳು ತಪ್ಪು ಸಮಾಚಾರವನ್ನು ನೀಡಿ ಈ ಕ್ರೀಡೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ, ನ್ಯಾಯಾಲಯ ಹಲವು ಸಮಸ್ಯೆಗಳ ಮೇಲೆ ಗಮನ ಹರಿಸದೇ ಜಲ್ಲಿಕಟ್ಟು ನಿಷೇಧಿಸುವುದನ್ನೇ ಪ್ರಧಾನವಾಗಿಸಿಕೊಂಡಿರುವುದು ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

English summary: kamal haasan backs jallikattu asks ban on biryani save animals

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು