Oyorooms IN

Friday, 26th May, 2017 4:21 AM

BREAKING NEWS

ಪ್ರಮುಖ ಸುದ್ದಿಗಳು

ಸಿಮ್ರಾನ್ ಚಿತ್ರದ ವರ್ಕ್‌ಶಾಪ್‌ಗೆ ಅಮೇರಿಕಾಗೆ ತೆರಳಿದ ನಟಿ ಕಂಗನಾ ರಣಾವತ್

sexy-kangana-ranaut-photos_992

ಸಿನಿಮಾ ಡೆಸ್ಕ್‌ : ಬಾಲಿವುಡ್‌ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಕಂಗನಾ ರಣಾವತ್ ಅವರು ತಮ್ಮ ಮುಂದಿನ ಸಿನಿಮಾ ಸಿಮ್ರಾನ್‌ನಲ್ಲಿ ಅಭಿನಯಿಸುವ ಸಲುವಾಗಿ ಅಮೇರಿಕಾದಲ್ಲಿ ನಡೆಯಲಿರುವ ವರ್ಕ್ ಶಾಪ್‌ನಲ್ಲಿ ಭಾಗವಹಸಿಲಿದ್ದಾರೆ ಎಂದು ತಿಳಿದು ಬಂದಿದೆ.

ಆಗಸ್ಟ್‌ 24 ರಂದು ಅಮೇರಿಕಾಕ್ಕೆ ತೆರಳಿರುವ ಕಂಗನಾ ತಮ್ಮ ಪಾತ್ರಕ್ಕೆ ಬೇಕಾದ ಅಗತ್ಯ ಪೂರ್ವಬಾವಿಗಳನ್ನು ನಡೆಸುತ್ತಿದ್ದು ಸೆ.1ರಂದು ಭಾರತಕ್ಕೆ ವಾಪಸ್ಸು ಬರಲಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಾಲ್ ಮೆಹ್ತಾ ಅವರ ನಿರ್ದೇಶನದಲ್ಲಿ ಸಿಮ್ರಾನ್ ಚಿತ್ರದಲ್ಲಿ ನಟಿಸುತ್ತಿದ್ದು ಕಂಗನಾರ ಈ ಚಿತ್ರದಲ್ಲಿ ವಿಭಿನ್ನ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿಮ್ರಾನ್ ಚಿತ್ರವು ಅಮೆರಿಕಾದ 4 ಬ್ಯಾಂಕುಗಳಲ್ಲಿ ದರೋಡೆ ಮಾಡಿರುವ ಭಾರತೀಯ ಮೂಲದ ಸಂದೀಪ್ ಕೌರ್ ಎಂಬ ನರ್ಸ್‌ನ ಜೀವನಾಕಥೆಯಿಂದ ಸ್ಪೂರ್ಥಿ ಪಡೆದ ಚಿತ್ರ ಇದಾಗಿದೆ. ಈ ಮಹಿಳಾ ಪ್ರಧಾನ ಚಿತ್ರವನ್ನು ಖ್ಯಾತ ನಿರ್ದೇಶಕ ಹನ್ಸಾಲ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಕಂಗನಾ ಈ ಚಿತ್ರದಲ್ಲಿ ಪಂಜಾಬಿ ಎನ್‌ಆರ್‌ಐ ನರ್ಸ್ ಪಾತ್ರದಲ್ಲಿ ಮಿಂಚಿದ್ದಾರೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...