Oyorooms IN

Monday, 24th July, 2017 10:01 PM

BREAKING NEWS

ರಾಜ್ಯ

ಸಾಹಿತ್ಯ ಸಮ್ಮೇಳನ: ಅಜ್ಞಾನಿಗಳನ್ನು ತಜ್ಞರನ್ನಾಗಿಸಿದ ಪರಿಷತ್

ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್‌ನ ವಿಫಲತೆ

kushatgi

ರಾಯಚೂರು: ಹೈ-ಕ ಪ್ರದೇಶದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಅಜ್ಞಾನಿಗಳಿಗೆ ಗೋಷ್ಠಿಗಳಲ್ಲಿ ತಜ್ಞರನ್ನಾಗಿಸಿ ವಿಷಯ ಮಂಡನೆ ಮಾಡುವ ಜವಾಬ್ದಾರಿ ನೀಡಿರುವ ಹಿಂದಿನ ಮರ್ಮ ಅತ್ಯಂತ ನಿಗೂಢವಾಗಿದೆ. ಇದು ಜಿಲ್ಲಾ ಕಸಾಪದ ದೊಡ್ಡ ವಿಫಲತೆಯೆಂದು ಹೈ-ಕ ಜನಾಂದೋಲನ ಕೇಂದ್ರ ಸಂಸ್ಥಾಪಕಾದ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದ್ದಾರೆ.

ಸಮ್ಮೇಳನದ 5ನೇ ಗೋಷ್ಠಿಯಾಗಿರುವ ಪ್ರಾದೇಶಿಕ ಅಸಮಾನತೆ:ಅಭಿವೃದ್ಧಿಯ ಸವಾಲುಗಳು ಎಂಬ ವಿಷಯದ ಮೇಲೆ ಮಂಡಿಸಲಿರುವ ಗೋಷ್ಠಿಯ ಅಧ್ಯಕ್ಷತೆಯನ್ನು ರಾಜ್ಯ ಸಭೆ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅವರಿಗೆ ನೀಡಿರುವುದು ಖಂಡನೀಯವಾಗಿದೆ. ಏಕೆಂದರೆ, ಸಂವಿಧಾನದ ಕಲಂ  371(ಜೆ) ಪಕ್ಕಾ ವಿರೋಧಿಗಳಾದ ಬಸವರಾಜ ಪಾಟೀಲ್ ಸೇಡಂ ಅವರು 371(ಜೆ) ಅನುಷ್ಠಾನಗೊಳ್ಳುವುದರಿಂದ ಹೈ-ಕ ಭಾಗದ ಜನರಿಗೇನು ಒಳ್ಳೆಯದಾಗುವುದಿಲ್ಲ ಎಂದೇ ಪ್ರತಿಪಾದಿಸುತ್ತ ಬಂದವರು. ದೇಶದಲ್ಲಿರುವ ಎಲ್ಲಾ ತರಹದ ಮೀಸಲಾತಿಗಳ ವಿರೋಧಿ ನಿಲುವಿನ ತಾತ್ವಿಕತೆ ಹೊಂದಿರುವ ಇವರನ್ನು ಗೋಷ್ಠಿಯ ಅಧ್ಯಕ್ಷತೆಯನ್ನು ನೀಡಿರುವುದು ವಿಷಾದನೀಯವಾಗಿದೆ ಎಂದು ಹೇಳಿದರು.

371(ಜೆ) ಕಲಂ ಅಡಿಯಲ್ಲಿ ಇರುವ ಸೌಲಭ್ಯಗಳು ಮತ್ತು ಅನುಷ್ಠಾನದ ಸವಾಲುಗಳ ಕುರಿತು ವಿಷಯದ ಮೇಲೆ ಮಂಡನೆ ಜವಾಬ್ದಾರಿಯನ್ನು ಮುಖ್ಯಮಂತ್ರಿಯ ಕಾರ್ಯದರ್ಶಿಯಲ್ಲಿ ಒಬ್ಬರಾದ ಡಾ.ಭೀಮಸೇನ್‌ರಾವ್ ಶಿಂಧೆ ಅವರಿಗೆ ನೀಡಿ ಹೈ-ಕ ಪ್ರದೇಶಕ್ಕೆ ಅಪಮಾನ ಎಸಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಇವರೊಬ್ಬ 371(ಜೆ) ಅನುಷ್ಠಾನಕ್ಕೆ ಅಡ್ಡಿಯಾದ ವ್ಯಕ್ತಿಯಾಗಿದ್ದಾರೆಂದರು. ರಾಜ್ಯ ಮಟ್ಟದ ಎಲ್ಲಾ ಹುದ್ದೆಗಳಲ್ಲಿ ಶೇ.೮ರಷ್ಟು ಹೈ-ಕ ಭಾಗದ ಅಭ್ಯರ್ಥಿಗಳಿಗೆ ನೀಡುವ ಮೀಸಲಾತಿ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ವಿಫಲರಾಗಿರುವ ಶಿಂಧೆ ಎಂಬ ಮಹಾಶಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಈ ಭಾಗಕ್ಕೆ ನ್ಯಾಯ ಒದಗಿಸಬಹುದೇ ಎಂದು ಪ್ರಶ್ನಿಸಿದರು.

  • ಗಡಿನಾಡು ಕನ್ನಡಿಗರ ಬಗ್ಗೆ ಗೋಷ್ಠಿಗಳು ಇಲ್ಲದಿದ್ದರೆ ಧಿಕ್ಕಾರ ಕೂಗುವುದಾಗಿ ಎಚ್ಚರಿಕೆ.

  • ಮನು ಬಳಿಗಾರನ ಸರ್ವಾಧಿಕಾರ-ಆರೋಪ

ಅಂತರಾಜ್ಯ ನದಿನೀರು ಹಂಚಿಕೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ತಜ್ಞರಂತೆ ಬಿಂಬಿಸಿರುವುದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಸಮ್ಮೇಳನದ 4ನೇ ಗೋಷ್ಠಿ ಕೃಷಿ ಸಂಸ್ಕೃತಿ ಗೋಷ್ಠಿಗೆ ಒಂದು ಬಣದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ವಿಷಯ ಮಂಡನೆಗೆ ಕರೆದಿರುವುದನ್ನು ನೋಡಿದರೆ ಹೈ-ಕ ಭಾಗದಲ್ಲಿ ಯಾರೂ ಸಹ ತಿಳಿದವರೇ ಇಲ್ಲ ಎನ್ನುವ ಮನೋಭಾವ ಬೆಂಗಳೂರಿನಲ್ಲಿ ಕುಳಿತವರಿಗೆ ಅನಿಸಿರಬಹುದೇನೋ. ಇದರಿಂದ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಮನು ಬಳಿಗಾರ ಹೈ-ಕ ಭಾಗದ ಹಿತಾಸಕ್ತಿಯ ವಿರುದ್ಧ ನಿಲುವಿನವರೇ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆ ದಾಸಸಾಹಿತ್ಯದ ನಗರವಾಗಿದ್ದು, ಅಗಾಧ ಕೊಡುಗೆಯನ್ನು ನೀಡಿರುವ ಅನೇಕ ದಾಸರ ಹೆಸರುಗಳನ್ನು ಯಾವುದಾದರೂ ವೇದಿಕೆಗೆ ನೀಡಬೇಕಾಗಿತ್ತು. ಆದರೆ, ಇದು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಡಿನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಗಳನ್ನು ಏರ್ಪಡಿಸದಿದ್ದರೆ ಧಿಕ್ಕಾರ ಕೂಗಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ಕಾರ್ಯಧ್ಯಕ್ಷ ಬಿ.ಬಸವರಾಜ, ಹೈ-ಕ ಜನಾಂದೋಲನ ಕೇಂದ್ರದ ಎಂ.ಪರಪ್ಪ, ಖಾಜಾಪಾಷಾ, ಮಲಕಪ್ಪ ಪಾಪೀಟ್, ಶಾಂತಾ ಕುಲಕರ್ಣಿ, ವೀರಣ್ಣ ಭಂಡಾರಿ, ಸೇರಿದಂತೆ ಅನೇಕರು ಇದ್ದರು.

ರಾಜ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...