Oyorooms IN

Monday, 24th July, 2017 10:03 PM

BREAKING NEWS

ಚಿಕ್ಕಬಳ್ಳಾಪುರ

ಕನ್ನಡ ಭಾಷಾಭಿಮಾನ ಬೆಳೆಸಿ ಕ್ರಿಯಾಶೀಲಗೊಳಿಸಲು ದೊಡ್ಡಬಳ್ಳಾಪುರದ ಸೈಕಲ್‌ ಜಾಥ

35

ಶಿಡ್ಲಘಟ್ಟ: ಸಮಾಜದಲ್ಲಿರುವ ಪ್ರತಿಯೊಬ್ಬರಲ್ಲಿ ಕನ್ನಡ ಭಾಷಾಭಿಮಾನವನ್ನು ಬೆಳೆಸಲು ಕನ್ನಡದ ಅಭಿಮಾನವನ್ನು ಕ್ರಿಯಾಶೀಲಗೊಳಿಸಲು ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಿನ ಬಳಕೆದಾರರ ಹಿತರಕ್ಷಣಾ ಸಂಘದ ಸದಸ್ಯರು ಸೈಕಲ್‌ಜಾಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಐದು ಮಂದಿ ಯುವಕರು ಗಡಿಭಾಗದಲ್ಲಿ ಕನ್ನಡ ಭಾಷೆ,ನೆಲ,ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥವನ್ನು ಕೈಗೊಂಡಿದ್ದು ಜಿಲ್ಲೆಯ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ,ಚಿಂತಾಮಣಿ,ಬಾಗೇಪಲ್ಲಿ,ಗುಡಿಬಂಡೆ ಹಾಗೂ ಗೌರಿಬಿದನೂರು ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರಕ್ಕೆ ವಾಪಸ್ಸು ಹಿಂತಿರುಗಲಿದ್ದಾರೆ.
ಜಗತ್ತಿನಲ್ಲಿ ಸುಮಾರು ೬ ಸಾವಿರ ಭಾಷೆಗಳಿವೆ ಅವುಗಳಲ್ಲಿ 12 ಶಾಸ್ತ್ರೀಯ ಭಾಷೆಗಳಿದ್ದು ಅದರಲ್ಲಿ ಕನ್ನಡವೂ ಒಂದು ಪ್ರಾಚೀನತೆಯಲ್ಲಿ ಕನ್ನಡ ಜಗತ್ತಿನಲ್ಲಿ 9ನೇ ಸ್ಥಾನದಲ್ಲಿದೆ ಇಂತಹ ಮಧುರ ಹಾಗೂ ಐತಿಹಾಸಿಕ ಭಾಷೆಯನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕೆಂಬ ಅಭಿಲಾಷೆಯೊಂದಿಗೆ ಯುವಕರು ಸೈಕಲ್‌ಜಾಥ ನಡೆಸಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದು ತಂಡದ ಮುಖ್ಯಸ್ಥ ಸುಂ.ಸು.ಬದರಿನಾಥ್ ತಿಳಿಸಿದರು.

36
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೈಕಲ್‌ಜಾಥವನ್ನು ಕೈಗೊಂಡು ಕನ್ನಡ ಭಾಷೆ ಆಡಳಿತ ಭಾಷೆಯನ್ನು ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಪ್ರಮಾಣಿಕವಾಗಿ ಪ್ರಯತ್ನ ನಡೆಸಬೇಕು ಕನ್ನಡ-ಕನ್ನಡಿಗ,ಕರ್ನಾಟಕದ ಬಗೆಗೆ ಪ್ರೀತಿ-ಅಭಿಮಾನ,ಗೌರವವನ್ನು ಹೊಂದಿ ಕನ್ನಡ-ಕರ್ನಾಟಕದ ಏಳಿಗೆಯಲ್ಲೇ ನಮ್ಮ ಏಳಿಗೆಯಿದೆ ಅದರ ಅಭ್ಯುದಯದಲ್ಲೇ ನಮ್ಮ ಅಭ್ಯುದಯವಿದೆ ಕನ್ನಡ ನುಡಿಯ ಬಗೆಗಿನ ಅಭಿಮಾನ ಹೆಚ್ಚಾದರೆ ಸರಕಾರಗಳಿಂದ ಸಿಗುವ ಸೌಲಭ್ಯ ಹೆಚ್ಚಾಗುತ್ತದೆ ನಮಗಾಗಿ ಕನ್ನಡ-ಕನ್ನಡಕ್ಕಾಗಿ ನಾವು ಎಂಬ ಭಾವಿಸಿ ನುಡಿಯ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಿ.ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಷೆ ಬೆಳೆಯುವುದು ಬಳಸಿದಾಗ ಮಾತ್ರ ಮನೆಯಲ್ಲಿ ಮಕ್ಕಳಿಗೆ ಮಮ್ಮಿ.ಡ್ಯಾಡಿಯ ಬದಲು ಅಪ್ಪ-ಅಮ್ಮ ಎಂದು ಹೇಳಿಕೊಡುವ ಜೊತೆಗೆ ಕನ್ನಡದಲ್ಲಿಯೇ ಸಂಭಾಷಿಸಿ ವ್ಯವಹರಿಸಿ ಮೊಬೈಲ್,ಅಂರ್ತಜಾಲ,ಎಟಿಎಂಗಳಲ್ಲಿ ಕನ್ನಡ ಪದಗಳನ್ನು ಬಳಕೆ ಮಾಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕಾಗಿದೆ ಎಂದು ರಘೂತ್ತಮ್ ತಿಳಿಸಿದರು.

ಡಾಲ್ಫಿನ್ ಶಾಲೆಯಲ್ಲಿ ಜಾಗೃತಿ: ಜಿಲ್ಲೆಯಲ್ಲಿ ಕನ್ನಡ ಭಾಷೆಯ ಮಹತ್ವದ ಕುರಿತು ಜನಜಾಗೃತಿ ಮತ್ತು ಅರಿವು ಮೂಡಿಸಲು ಸೈಕಲ್‌ಜಾಥವನ್ನು ಕೈಗೊಂಡಿರುವ ದೊಡ್ಡಬಳ್ಳಾಪುರ ತಾಲೂಕಿನ ಬಳಕೆದಾರರ ಹಿತರಕ್ಷಣಾ ಸಂಘದ ಸದಸ್ಯರು ನಗರದ ಡಾಲ್ಫಿನ್ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕನ್ನಡ ಭಾಷೆಯನ್ನು ಬೆಳೆಸಲು ವಿದ್ಯಾರ್ಥಿಗಳು ಸಹಕಾರ ನೀಡಬೇಕೆಂದು ಕೋರಿದರಲ್ಲದೇ ಜ್ಞಾನರ್ಜನೆಯನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ತಂಡದ ಸದಸ್ಯರು ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ರಘು,ಮೋಹನ್ ಹಾಗೂ ಡಾಲ್ಫಿನ್ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...