Oyorooms IN

Monday, 20th February, 2017 4:19 AM

BREAKING NEWS

ಮಂಡ್ಯ

ತಮಿಳುನಾಡಿಗೆ ನೀರು ಬಿಡದಂತೆ ಆಹೋರಾತ್ರಿ ಧರಣಿ

2
ಮಂಡ್ಯ: ರೈತರ ಬೆಳೆಗಳಿಗೆ ನೀರು ಹರಿಸುವ ನೆಪದಲ್ಲಿ ಕೆಆರ್‌ಎಸ್‌ನಿಂದ ನೀರು ಬಿಟ್ಟು ರೈತರಿಗೆ ಸರ್ಕಾರ ವಂಚಿಸಿದ್ದು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕೆ.ಆರ್.ಎಸ್.ನ ಗೇಟ್ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದಲ್ಲಿ ಸೋಮವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಯಕರ್ತರು  ಸ್ಥಳದಲ್ಲೇ ಅಡುಗೆ ಮಾಡಿ ಹೋರಾಟಗಾರರೆಲ್ಲ ಸಹಭೋಜನ ಮಾಡಿದರು.
ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ತಿಳಿಸಿದ್ದಾರೆ.
ಕೆ.ಆರ್.ಎಸ್. ಸುತ್ತಮುತ್ತ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ೩೦ಕ್ಕೂ ಹೆಚ್ಚು ರೈತರು ಧರಣಿ ಮುಂದುವರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೃಷ್ಣರಾಜ ಸಾಗರ ಜಲಾಶಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೋಮವಾರ ರಾತ್ರಿಯಿಂದಲೇ ೮೬೯೪ ಕ್ಯುಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ.
ಈ ಪೈಕಿ ತ.ನಾಡಿಗೆ ನದಿಯ ಮೂಲಕ ೪೫೦೦ ಕ್ಯುಸೆಕ್ ಮತ್ತು ೪೧೯೪ ಕ್ಯುಸೆಕ್ ನೀರನ್ನು ರೈತರ ಬೆಳೆಗಳಿಗೆ ಕಾಲುವೆ ಮೂಲಕ ಹರಿಯಬಿಡಲಾಗಿದೆ.

ಕೆ.ಆರ್.ಎಸ್. ನೀರಿನ ಮಟ್ಟ
ಕೃಷ್ಣರಾಜ ಸಾಗರ ಜಲಾಶಯದ ಒಟ್ಟು ಗರಿಷ್ಠ ಮಟ್ಟ ೧೨೪.೮೦ ಅಡಿ ಆಗಿದ್ದು, ಪ್ರಸ್ತುತ ೮೯.೩೧ ಅಡಿ ನೀರಿದೆ. ಜಲಾಶಯದ ಒಳ ಹರಿವು ೮೭೭ ಕ್ಯುಸೆಕ್, ಹೊರ ಹರಿವು ೮೬೯೪ ಕ್ಯುಸೆಕ್ ಇದೆ.

ನೀರು ಬಿಟ್ಟಿರುವುದು ತಮಿಳುನಾಡಿಗಲ್ಲ
ಸರ್ಕಾರ ನೀರು ಹರಿಸುತ್ತಿರುವುದು ರೈತರ ಬೆಳೆಗಳಿಗೆ ಹೊರತು ತಮಿಳುನಾಡಿಗಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜಲಾಶಯದಲ್ಲಿ ಲೀಕೇಜ್ ಇರುವುದರಿಂದ ಕಾಲುವೆಗಳಿಗೆ ನೀರು ಬಿಟ್ಟಾಗ ೧೫೦೦ ಕ್ಯುಸೆಕ್‌ನಷ್ಟು ನೀರು ನದಿಗೆ ಹರಿಯುತ್ತದೆ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದಿಂದ ರೈತರ ವಂಚನೆ
ನಾಲೆಗಳಿಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಕರ್ನಾಟಕದ ರೈತರನ್ನು ವಂಚಿಸಿದೆ. ರಾಜ್ಯದ ಮೂರು ಪಕ್ಷಗಳು ಸರ್ಕಾದೊಂದಿಗೆ ಕೈ ಜೋಡಿಸಿ ಜನತೆಗೆ ವಿಶ್ವಾಸದ್ರೋಹ ಎಸಗಿರುವ ಕ್ರಮವನ್ನು ಕಾವೇರಿ ಕಣಿವೆ ರೈತ ಒಕ್ಕೂಟ ಖಂಡಿಸಿದೆ.
ಸೆ.೨೩ರಂದು ನಮ್ಮಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಷ್ಟೇ ಬಳಸುವುದಾಗಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಜಂಟಿ ಅಧಿವೇಶನದಲ್ಲಿ ನಿರ್ಣಯ ಕೈಗೊಂಡ ಜನಪ್ರತಿನಿಧಿಗಳು, ಈಗ ಆ ನಿರ್ಣಯಕ್ಕೆ ವಿರುದ್ಧವಾದ ನಿಲುವು ತಾಳಿರುವುದು ಯಾವ ಕಾರಣಕ್ಕೆ ಎಂಬುವುದನ್ನು ಸ್ಪಷ್ಟಪಡಿಸಲಿ ಎಂದು ಒಕ್ಕೂಟದ ಎಂ.ಬಿ.ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಎಂ.ಕೃಷ್ಣಮೂರ್ತಿ, ಶಂಭೂನಹಳ್ಳಿ ಸುರೇಶ್, ತಾಹೇರ್, ಎಚ್.ಡಿ. ಜಯರಾಂ, ಅಭಿ ಹನಕೆರೆ ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಕಾವೇರಿ ವಿಷಯದಲ್ಲಿ ವಿಶ್ವಾಸಘಾತುಕತನದಿಂದ ವರ್ತಿಸಿದ್ದು, ಜನರು ಪ್ರತಿನಿಧಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಡ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...