Oyorooms IN

Wednesday, 25th January, 2017 6:49 AM

BREAKING NEWS

ಟಿವಿ ಸಂದರ್ಶನ

ಶಿವಣ್ಣ-ರಚಿತಾ ರಾಮ್ ನೇತೃತ್ವದಲ್ಲಿ “ಕಿಕ್” ಆರಂಭ..!!

KICK_UDAYA

ಬೆಂಗಳೂರು: ಉದಯ ವಾಹಿನಿಯಲ್ಲಿ ಜುಲೈ 16ರಿಂದ ಹೊಸ ರಿಯಾಲಿಟಿ ಡ್ಯಾನ್ಸ್ ಶೋ “ಕಿಕ್” ಆರಂಭವಾಗಲಿದ್ದು, ಸ್ಯಾಂಡಲ್ ವುಡ್ ಕಿಂಗ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿರುತೆರೆಯಲ್ಲಿ ಡ್ಯಾನ್ಸ್ ಶೋಗಳ ಭರಾಟೆ ಹೆಚ್ಚಿದ್ದು, ಕಲರ್ಸ್ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆರಂಭವಾದ ಬೆನ್ನಲ್ಲೆ, ಉದಯ ಟಿವಿಯೂ ಡ್ಯಾನ್ಸ್ ಶೋ ಆರಂಭಿಸುತ್ತಿದ್ದು, ಕಲರ್ಸ್ನಲ್ಲಿ ಕನಸುಗಾರ ರವಿಚಂದ್ರನ್ ತೀರ್ಪುಗಾರರಾಗಿದ್ದಾರೆ.

KICK_UDAYA_

ಕಿರುತೆರೆ ಇತಿಹಾಸದಲ್ಲಿಯೇ ಅದ್ದೂರಿ ವೆಚ್ಚದ ರಿಯಾಲಿಟಿ ಶೋ ಇದಾಗಿದ್ದು, ಶಿವಣ್ಣನೊಂದಿಗೆ ನೃತ್ಯ ನಿರ್ದೇಶಕ ಎ.ಹರ್ಷ, ನಾಯಕ ನಟಿ ರಚಿತಾ ರಾಮ್ ಸಹ ತೀರ್ಪುಗಾರರಾಗಿ ಕಾಣಿಸುತ್ತಿದ್ದಾರೆ, 4 ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದ್ದು, ಗೆದ್ದ ತಂಡಕ್ಕೆ 10 ಲಕ್ಷ ರೂ ಬಹುಮಾನ ನೀಡಲಾಗುವುದು ಎಂದು ಕಾರ್ಯಕ್ರಮ ತಂಡ ತಿಳಿಸಿದೆ.

ಈ ನಾಲ್ಕು ತಂಡಗಳ ನೇತೃತ್ವವನ್ನು ಸೆಲೆಬ್ರಿಟಿಗಳು ವಹಿಸಲಿದ್ದು, 12 ಡ್ಯಾನ್ಸಿಂಗ್ ತಂಡಗಳು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿವೆ ಎಂದು ಕಾರ್ಯಕ್ರಮ ನಿರ್ಮಾಪಕ ರಾಜುಗೌಡ ತಿಳಿಸಿದ್ದಾರೆ. ಇನ್ನು ಡ್ಯಾನ್ಸಿಂಗ್ ಸ್ಟಾರ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿರುವ ಅಕುಲ್ ಬಾಲಾಜಿ” ಕಿಕ್” ನಡೆಸಿಕೊಡಲಿದ್ದಾರೆ.

English summary:  Kick stars reality show start Saturday in udaya Entertainment channel

 

ಟಿವಿ ಸಂದರ್ಶನ ಇನ್ನಷ್ಟು

ಪ್ರಮುಖ ಸುದ್ದಿಗಳು