Oyorooms IN

Tuesday, 17th January, 2017 10:15 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಕೊಪ್ಪಳ

ಕೊಪ್ಪಳ : ತಳಕಲ್ ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಸಿಇಒ ಭೇಟಿ , ಬಾಕಿ 422 ಶೌಚಾಲಯ ನಿರ್ಮಾಣಕ್ಕೆ ಮನವಿ

ಕೊಪ್ಪಳ  : ತಳಕಲ್ ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಸಿಇಒ ಭೇಟಿ , ಬಾಕಿ 422 ಶೌಚಾಲಯ ನಿರ್ಮಾಣಕ್ಕೆ ಮನವಿ

ಕೊಪ್ಪಳ: ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಮಂಗಳವಾರದಂದು ಬೆಳಿಗ್ಗೆ 5-30 ಗಂಟೆಗೆ ವಿವಿಧ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಲು ಜಾಗೃತಿ ಮೂಡಿಸಿದರಲ್ಲದೆ, ಗ್ರಾ.ಪಂ. ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ 422 ಕುಟುಂಬಗಳು ತ್ವರಿತಗತಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಬೆಳವಣಿಗೆ ಕುಂಠಿತವಾಗಲು ಅನೈರ್ಮಲ್ಯವೇ ಕಾರಣ. ಎಲ್ಲಾ ಮಕ್ಕಳು ಓದಿ ವಿದ್ಯಾವಂತರಾಗಿ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು ಅದಕ್ಕಾಗಿ ಸದೃಢದಿಂದ ಆರೋಗ್ಯವಾಗಿರಲು ಪೌಷ್ಠಿಕ ಆಹಾರ ಸೇವಿಸಬೇಕು ಮತ್ತು ಸ್ವಚ್ಚತೆಯಿಂದ ಇರಬೇಕು. ಮನುಷ್ಯ ಬುದ್ದಿ ಜೀವಿ ಆದರೂ ಎಲ್ಲೆಂದರಲ್ಲಿ ಮಲ ವಿಸರ್ಜನೆ ಮಾಡುತ್ತಾನೆ. ಬೆಕ್ಕು ಮಲವಿಸರ್ಜನೆಯ ನಂತರ ಮಲ ಕಾಣದಂತೆ ಹಾಗೂ ಅದರ ದುರ್ವಾಸನೆ ಹೋಗುವವರೆಗೂ ಮಣ್ಣು ಎಳೆದು ಮುಚ್ಚುತ್ತದೆ. ಬೆಕ್ಕಿಗೆ ಇರುವ ಕನಿಷ್ಟ ಅರಿವು ಸಹ ಮನುಷ್ಯನಿಗೆ ಇಲ್ಲದಾಗಿದೆ.

ಗ್ರಾಮದ ಮತ್ತು ಮನೆಯ ಸುತ್ತಮುತ್ತ ಸ್ವಚ್ಚೆತೆ ಕಾಪಾಡುವ ಉದ್ದೇಶದಿಂದ ಜಾಕೀರ್ ಹುಸೇನ್ ಎಂಬುವವರು ತಾವೇ ಮುಂದೆ ನಿಂತು 180 ಶೌಚಾಲಯ ಕಟ್ಟಿಸಿದ್ದಾರೆ. ಅವರಂತ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಗ್ರಾಮದ ಸ್ವಚ್ಚತೆ ಬಗ್ಗೆ ಎಲ್ಲರೂ ಯೋಚಿಸಿದಾಗ ಮಾತ್ರ ರೋಗಮುಕ್ತ ಗ್ರಾಮವನ್ನಾಗಿ ಮಾಡಲು ಸಾದ್ಯ ಆದ್ದರಿಂದ ಎಲ್ಲರೂ ಆರೋಗ್ಯವಂತರಾಗಿರಲು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಮನವಿ ಮಾಡಿದರು.

ಶೌಚಾಲಯ ನಿರ್ಮಿಸಿಕೊಳ್ಳುವಂತೆ ಹಾಗೂ ಗ್ರಾಮದ ಸ್ವಚ್ಚತೆ ಕಾಪಾಡುವಂತೆ ಜಿ.ಪಂ ಯೋಜನಾ ನಿರ್ದೇಶಕ ಬಸರಿಹಳ್ಳಿ ಅವರು ಶಾಲಾ ಮಕ್ಕಳಿಂದ ಹಾಗೂ ಸಾರ್ವಜನಿಕರಿಂದ ಪ್ರತಿಜ್ಷೆ ಮಾಡಿಸಿದರು.

ತಳಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 1,712 ಕುಟುಂಬಗಳಿದ್ದು, ಅದರಲ್ಲಿ 1,277 ಕುಟುಂಬಗಳು ಈಗಾಗಲೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. 435 ಕುಟುಂಬಗಳು ಬಾಕಿ ಉಳಿದಿದ್ದು ಶೀಘ್ರದಲ್ಲಿ ಎಲ್ಲ ಮನೆಗಳು ಶೌಚಾಲಯ ಹೊಂದುವಂತೆ ಮಾಡಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸ್ವಚ್ಛಭಾರತ ಮಿಷನ್ ಸಿಬ್ಬಂದಿ, ಜಿ.ಪಂ ಸದಸ್ಯ ಹನುಮಂತಗೌಡ ಪಾಟೀಲ್, ತಾ.ಪಂ ಸದಸ್ಯ ಶಿವಕುಮಾರ ವೆಂಕಪ್ಪ ಆದಾಪೂರ, ಗ್ರಾ.ಪಂ ಅಧ್ಯಕ್ಷೆ ಶಾಂತಮ್ಮ ವಾಲ್ಮೀಕಿ, ಉಪಾಧ್ಯಕ್ಷ ತಿಮ್ಮಣ್ಣ ಚೌಟಿ ಹಾಗೂ ಹಲವು ಸದಸ್ಯರು ಮತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಇತರ ಇಲಾಖೆ ಹಾಗೂ ಪಿಡಿಒ, ಶಿಕ್ಷಕರು, ಶಾಲಾ ಮಕ್ಕಳು ಇದ್ದರು.

ಕೊಪ್ಪಳ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...