Oyorooms IN

Friday, 24th March, 2017 7:39 PM

BREAKING NEWS

ಕೊಪ್ಪಳ

ತುಂಗಭದ್ರಾ ಎಡದಂಡೆ ಕಾಲುವೆ ಮೈಲ್-24 ರಿಂದ 47 ರ ವ್ಯಾಪ್ತಿ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿ

kopalla dc

ಕೊಪ್ಪಳ : ತುಂಗಭದ್ರಾ ಎಡದಂಡೆ ಮೈಲ್-24 ರಿಂದ ಮೈಲ್-47 ರವರೆಗೆ ಎಡ ಹಾಗೂ ಬಲ ದಡದ 100 ಮೀ ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ ಆ.9 ರಿಂದ 25 ರ ವರೆಗೆ (ದಿನದ 24 ಗಂಟೆವರೆಗೆ) ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.

ಕಳೆದ ಜು.18 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದಂತೆ ತುಂಗಭದ್ರಾ ಎಡದಂಡೆ ನಾಲೆ ಸಮರ್ಪಕವಾಗಿ ಗೇಜನ್ನು ನಿರ್ವಹಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಹಯೋಗದೊಂದಿಗೆ ಕ್ರಮ ಜರುಗಿಸಲು ಸೂಚಿಸಲಾಗಿತ್ತು. ಆದರೆ ವಡ್ಡರಹಟ್ಟಿ ವಿಭಾಗದಡಿ ಬರುವ ಮೈಲ್-24 ರಿಂದ 47 ರಲ್ಲಿ ರೈತರು ಗುಂಪಿನಲ್ಲಿ ಬಂದು ನೀರಾವರಿ ಸಿಬ್ಬಂದಿಗಳಿಗೆ ಹೆದರಿಸಿ ಮುಖ್ಯ ಕಾಲುವೆಗಳ ತೂಬಿನ ಗೇಟುಗಳಲ್ಲಿ ಅನಧಿಕೃತವಾಗಿ ಪೈಪುಗಳನ್ನು ಹಾಕಿ ನೀರು ಸೈಫಲ್ ಮಾಡುತ್ತಿರುವುದು ಕಂಡುಬಂದಿದ್ದು, ಇದರಿಂದಾಗಿ ರಾಯಚೂರು ವಿಭಾಗದ ಅಚ್ಚುಕಟ್ಟು ಪ್ರದೇಶದ ರೈತರುಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧೀಕ್ಷಕ ಅಭಿಯಂತರರು ಕನೀನಿನಿ ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ ಇವರು ತಿಳಿಸಿರುತ್ತಾರೆ. ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು, ಇಲಾಖೆಯ ಸಿಬ್ಬಂದಿಗೆ ರಕ್ಷಣೆ ನೀಡಲು, ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ತುಂಗಭದ್ರಾ ಎಡದಂಡೆ ಮೈಲ್-24 ರಿಂದ 47 ರವೆರೆಗೆ ಎಡ ಹಾಗೂ ಬಲ ದಡದ 100 ಮೀ ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ ಆ. 9 ರಿಂದ 25 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆ ಉಪಕಾಲುವೆ ಸಂಖ್ಯೆಗಳಾದ 17-ದಾಸನಾಳ ಬ್ರಿಡ್ಜ ಹತ್ತಿರ, ಕಾಲುವೆ ಸಂಖ್ಯೆ 21-ಕನಕಗಿರಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರ, ಕಾಲುವೆ ಸಂಖ್ಯೆ 25- ಜೀರಾಳಕಲ್ಗುಡಿ ಹತ್ತಿರ, ಕಾಲುವೆ ಸಂಖ್ಯೆ 31-ಕಾರಟಗಿ-ನವಲಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರ, ಕಾಲುವೆ ಸಂಖ್ಯೆ 32-ಮೈಲಾಪುರ ಗ್ರಾಮದ ಹತ್ತಿರ ನಿಷೇದಾಜ್ಷೆ ಜಾರಿಯಲ್ಲಿರುತ್ತದೆ. ನಿರ್¨ಂಧಿತ ಪ್ರದೇಶದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ನಿಯೋಜಿಸಲ್ಪಟ್ಟ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ತುಂಗಭದ್ರಾ ಎಡದಂಡೆ ಮೈಲ್-24 ರಿಂದ ಮೈಲ್-47 ರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಪಂಪ್ ಸೆಟ್‍ಗಳ ಮೂಲಕ ಅನಧಿಕೃತವಾಗಿ ನೀರನ್ನ ಎತ್ತುವಳಿ ಮಾಡಿದಲ್ಲಿ ಅಂತಹ ಪಂಪ್ ಸೆಟ್‍ಗಳನ್ನ ಕಾರ್ಯನಿರ್ವಾಹಕ ಅಭಿಯಂತರರು ಕ.ನೀ.ನಿ.ನಿ.ನಂ-2, ಕಾಲುವೆ ವಿಭಾಗ, ವಡ್ಡರಹಟ್ಟಿ ಗಂಗಾವತಿ ಅಥವಾ ಸದರಿಯವರಿಂದ ಅಧಿಕಾರ ನೀಡಲ್ಪಟ್ಟ ಸಿಬ್ಬಂದಿಯವರು ಜಪ್ತಿ ಮಾಡುವರು. ಈ ಪ್ರದೇಶಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಷೇಧಿತ ಪ್ರದೇಶದ ಸುತ್ತ ಮುತ್ತ ಸಾರ್ವಜನಿಕರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶವು ಮದುವೆ, ಶವಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...