Oyorooms IN

Tuesday, 28th March, 2017 7:29 PM

BREAKING NEWS

ಪ್ರಮುಖ ಸುದ್ದಿಗಳು

ವಿವಾಹಿತ ಮಹಿಳೆಯ ಮೋಹಕ್ಕೆ ವಶೀಕರಣ ಮಾಡಿಸಿದ ಯುವಕ

youth-cheats

ಮೈಸೂರು: ಪ್ರೀತಿಸಿದ ವಿವಾಹಿತ ಮಹಿಳೆಯನ್ನು ವಶೀಕರಣ ಮಾಡಿಕೊಳ್ಳಲು ಮಾಂತ್ರಿಕನ ಮೊರೆ ಹೋಗಿದ್ದ ಯುವಕನನ್ನು ಮಾಂತ್ರಿಕ ವಂಚಿಸಿ ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿ ಅಮ್ಜದ್ ಖಾನ್ ಎನ್ನುವ ಯುವಕ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ, ಆ ಮಹಿಳೆಯೊಂದಿಗೆ ಅಮ್ಜದ್ ಖಾನ್ ಮದುವೆ ಮಾಡಿಸುವುದಾಗಿ ನಂಬಿಸಿದ ಉತ್ತರ ಪ್ರದೇಶದ ಬಾಬಾಖಾನ್ ಎಂಬ ಮಾಂತ್ರಿಕ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾನೆ.

ವಶೀಕರಣ ಮಾಡಲು 250 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, ಹಿತ್ತಾಳೆ, ಕಬ್ಬಿಣ ತಂದು ಕೊಡುವಂತೆ ಬಾಬಾಖಾನ್ ಅಮ್ಜದ್ ಖಾನ್ ಗೆ ಹೇಳಿದ್ದ, ಅದರಂತೆ ಮಾಂತ್ರಿಕ ಬಾಬಾ ಖಾನ್ ಹೇಳಿದ್ದಂತೆ ಅಮ್ಜದ್ ಖಾನ್ ತಂದುಕೊಟ್ಟಿದ್ದ, ವಶೀಕರಣಕ್ಕಾಗಿ ನವೆಂಬರ್ 19ರಂದು ಪೂಜೆ ನಡೆಸಿದ ಮಾಂತ್ರಿಕ ಒಂದು ದಿನ ಬಿಟ್ಟು ಪೆಟ್ಟಿಗೆ ತೆಗೆದುನೋಡುವಂತೆ ಹೇಳಿದ್ದಾನೆ.

ಮಾಂತ್ರಿಕ ಹೇಳಿದ್ದಂತೆ ಒಂದು ದಿನದ ನಂತರ ಪೆಟ್ಟಿಗೆ ತೆಗೆದ ಅಮ್ಜದ್ ಖಾನ್ ಗೆ ಶಾಕ್ ಗೆ ಒಳಗಾಗಿದ್ದಾನೆ, ಪೆಟ್ಟಿಗೆಯಲ್ಲಿ ಚಿನ್ನಾಭರಣಗಳನ್ನು ಬಾಬಾ ಖಾನ್ ದೋಚಿ ಪರಾರಿಯಾಗಿದ್ದು, ಅಮ್ಜದ್ ಖಾನ್ ಕೆ.ಆರ್.ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.

English summary :  love affair youth cheated in mysore

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...