Oyorooms IN

Wednesday, 25th January, 2017 6:48 AM

BREAKING NEWS

ಪ್ರಮುಖ ಸುದ್ದಿಗಳು

ಇನ್ನು ಅವರಿಗೆಲ್ಲಾ ಗ್ಯಾಸ್ ಸಬ್ಸಿಡಿ ಕಟ್.!!!

ನವದೆಹಲಿ: ಅತ್ಯಧಿಕ ಮೊತ್ತವನ್ನು ವ್ಯಯಿಸಿ ಸರ್ಕಾರ ನೀಡುತ್ತಿರುವ ಎಲ್ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಯಾಕೆ ಬಿಡಬೇಕು ಎಂದು ವ್ಯವಹರಿಸುತ್ತಿರುವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲಿದೆ. ನೋಟು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಸ್ವೀಕರಿಸುತ್ತಿರುವ ಆದಾಯ ತೆರಿಗೆ ಸಲ್ಲಿಸುತ್ತಿರುವವರ  ವಿವರಗಳನ್ನು ಪ್ರೆಟ್ರೋಲಿಯಂ ಇಲಾಖೆ ನೀಡಲಿದೆ.

ಆದಾಯ ತೆರಿಗೆ ಇಲಾಖೆ ನೀಡುವ ಮಾಹಿತಿಯಂತೆ 10 ಲಕ್ಷಕ್ಕೂ ಹೆಚ್ಚು ಆದಾಯ ತೆರಿಗೆಯನ್ನು ಸಲ್ಲಿಸುತ್ತಿರುವವರ ವಿವರ ಪೆಟ್ರೋಲಿಯಂ ಇಲಾಖೆಗೆ ಲಭ್ಯವಾಗಲಿದ್ದು, ಎಲ್ಪಿಜಿ ಗ್ಯಾಸ್ ಸಬ್ಸಿಡಿ ವಿವರಗಳನ್ನು ಚೆಕ್ ಮಾಡಿ, ಒಂದು ವೇಳೆ ಯಾರಾದರೂ 10 ಲಕ್ಷಕ್ಕೂ ಹೆಚ್ಚು ಆದಾಯ ತರಿಗೆ ಕಟ್ಟವವರ ಗ್ಯಾಸ್ ಸಬ್ಸಿಡಿಯನ್ನು ಕಡಿತ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.

ತೆರಿಗೆದಾರರ ಆದಾಯ ವಿವರದೊಂದಿಗೆ ವ್ಯಕ್ತಿಗತ ವಿವರ ಪಾನ್ ಕಾರ್ಡ್, ಹುಟ್ಟಿದ ದಿನಾಂಕ, ಜೆಂಡರ್, ಐಟಿ ಡೆಟಾ ಬೆಸ್ ಸಿಗುವಂತೆ ಎಲ್ಲಾ ವಿವರಗಳನ್ನು ಐಟಿ, ಪೆಟ್ರೋಲಿಯಂ ಇಲಾಖೆಗೆ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ ಐಟಿ ಡಿಪಾರ್ಟ್ ಮೆಂಟ್  ಹಾಗೂ ಪೆಟ್ರೋಲಿಯಂ ಇಲಾಖೆ ನಡುವೆ ಒಪ್ಪಂದವನ್ನು ಮಾಡಿಕೊಳ್ಳಲಿದೆಯಂತೆ.

English summary: lpg subsidy income tax to share data of taxpayer who earn over rs 10 lakh

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು