Oyorooms IN

Saturday, 22nd July, 2017 4:27 PM

BREAKING NEWS

ಕೊಡಗು

ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸೌಲಭ್ಯ ಮರೀಚಿಕೆ!

madikeri-_ksrtc
ಮಡಿಕೇರಿ: ರಾಜ್ಯದಲ್ಲಿರುವ ಎಲ್ಲ ಡಿಪೋಗಳಲ್ಲಿಯೂ ಸಮಸ್ಯೆ ತಾಂಡವಾಡುತ್ತಿದೆ. ಅದರಲ್ಲೂ ಮಡಿಕೇರಿಯಲ್ಲಿರುವ ಅವ್ಯವಸ್ಥೆಯನ್ನು ಹತ್ತಿರದಿಂದ ನೋಡಿದರೆ ಬೇಸರವಾಗುತ್ತದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಕಾರ್ಮಿಕರು ಇನ್ನೆಷ್ಟು ದಿನ ಈ ನರಕದಲ್ಲಿ ಕೆಲಸ ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳು ಒಂದರ ಮೇಲೊಂದರಂತೆ ನಮ್ಮ ಸುತ್ತ ಗಿರಕಿ ಹೊಡೆಯುತ್ತದೆ.
ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾರೂ ನೆಮ್ಮದಿಯಾಗಿ ಇಲ್ಲ. ನೌಕರರ ಕೊರತೆಯಿರುವ ಕಾರಣ ದಿನಕ್ಕೆ ಹತ್ತರಿಂದ ಹನ್ನೆರಡು ಗಂಟೆಕಾಲ ದುಡಿಯುವುದು ಅನಿವಾರ್ಯ.ಇಲ್ಲಿನ ಸಿಬ್ಬಂದಿಗಳಿಗೆ ಮೂಲ ಸೌಲಭ್ಯವೇ ಇಲ್ಲ ಎಂದರೆ ನಂಬಲೇ ಬೇಕು. ಜಿಲ್ಲೆಯಲ್ಲಿ ಕಾವೇರಿ ಹರಿಯುತ್ತಿದ್ದರೂ ಡಿಪೋದೊಳಗೆ ಕುಡಿಯುವ ನೀರಿಗೆ ಬರ. ತಂಗಲು ಸೂಕ್ತ ಕೊಠಡಿಯ ವ್ಯವಸ್ಥೆಯಿಲ್ಲ. ಕೆಲಸ ಮಾಡುವಾಗ ಆಯಿಲ್ ಆದರೆ ಅದನ್ನು ತೊಳೆದುಕೊಳ್ಳುವುದಕ್ಕೆ, ಸ್ನಾನ ಮಾಡುವುದಕ್ಕೆ ಯಾವುದೇ ಸೌಲಭ್ಯವಿಲ್ಲ. ಮೊದಲೇ ತಣ್ಣಗೆಯ ಪ್ರದೇಶ ಅದರಲ್ಲೂ ಆಯಿಲ್ ಮುಟ್ಟುವುದರಿಂದ ಮೈಗೆ ಅಂಟಿದ ಆಯಿಲ್ ಹೋಗಬೇಕಾದರೆ ಬಿಸಿ ನೀರು ಬೇಕೇ ಬೇಕು. ಬಿಸಿನೀರಿಗಾಗಿ ಇದ್ದ ಗೀಸರ್ ಕೆಟ್ಟು ಮೂಲೆ ಸೇರಿದೆ ಅದನ್ನು ದುರಸ್ತಿ ಮಾಡಿಸುವ ಮನಸ್ಸನ್ನು ಅಧಿಕಾರಿಗಳು ಮಾಡಿಲ್ಲ.
ಇನ್ನು ಧೂಳು ಹಿಡಿದ ಬಸ್ಸನ್ನು ಶುಚಿಗೊಳಿಸಬೇಕು. ಅದಕ್ಕೆಂದು ಇರುವ ಪ್ರತ್ಯೇಕ ಸಿಬ್ಬಂದಿ ಇಲ್ಲಿ ಇಲ. ಹೀಗಾಗಿಯೇ ಚಾಲಕ, ನಿರ್ವಾಹಕರೇ ಬಸ್ಸನ್ನು ಶುಚಿಗೊಳಿಸಬೇಕಾಗಿದೆ. ಶುಚಿತ್ವಕ್ಕಾಗಿ ಸರಕಾರ ಅನುದಾನ ನೀಡಿದರೂ ಅದು ಇಲ್ಲಿ ಯಾವ ರೀತಿಯಲ್ಲಿ ಬಳಕೆಯಾಗುತಿದೆ ಎಂಬುದನ್ನು ಅಧಿಕಾರಿಗಳೇ ಹೇಳಬೇಕು.
ಮಡಿಕೇರಿ ಡಿಪೋದಲ್ಲಿರುವ ಬಸ್‌ಗಳ ಪೈಕಿ ಹೆಚ್ಚಿನವು ಡಕೋಟಾಗಾಡಿಗಳು. ಸಂಚಾರಕ್ಕೆ ಯೋಗ್ಯವಲ್ಲದ ಬಸ್‌ಗಳೆಲ್ಲವೂ ಇಲ್ಲಿ ಸ್ಥಾನ ಪಡೆದಿವೆ. ನಿತ್ಯ ದುಡಿಯುತ್ತಿವೆ. ಸುಮಾರು ೧೩ ಲಕ್ಷ ಕಿ.ಮೀ. ಸಂಚರಿಸಿದ ಬಸ್‌ಗಳು ಕೂಡ ಇಲ್ಲಿವೆ. ಗುಜರಿಗೆ ಕಳುಹಿಸಬೇಕಾದ ಬಸ್‌ಗಳನ್ನು ಡಿಪೋದಲ್ಲಿಟ್ಟು ಓಡಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಬಸ್‌ಗಳಿವೆ ಎಂದು ಹೇಳಲಾಗುತ್ತಿದೆ.
ಬೇರೆಡೆಗಳಲ್ಲಿ ಒಂದು ಗಂಟೆಗಿಂತ ಹೆಚ್ಚು ಸಮಯ ಕಾರ್ಯ ನಿರ್ವಹಿಸಿದರೆ ಅದಕ್ಕೆ ಪ್ರತ್ಯೇಕ ಸಂಬಳ ನೀಡುವ ವ್ಯವಸ್ಥೆಯಿದೆ ಆದರೆ ಅದು ಇಲ್ಲಿನ ಸಿಬ್ಬಂದಿಗೆ ಇಲ್ಲದಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋದತ್ತ ಕಣ್ತೆರೆದು ನೋಡಬೇಕಿದೆ.

ಕೊಡಗು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...